ಆಪ್ತರಕ್ಷಕದ ಗರನೆ ಗರಗರನೇ ತಿರುಗಿದೇ ಧರಣಿ ನಾಗವಲ್ಲಿ ನಟಿ ವಿಮಲಾ ಈಗೆಲ್ಲಿದ್ದಾರೆ?

Published : Jul 20, 2024, 01:23 PM IST

ಆಪ್ತರಕ್ಷಕ ಸಿನಿಮಾ ನೀವು ಖಂಡಿತವಾಗಿಯೂ ನೋಡಿರ್ತೀರಿ ಈ ಸಿನಿಮಾದಲ್ಲಿ ನಾಗವಲ್ಲಿ ಪಾತ್ರದಲ್ಲಿ ಮಿಂಚಿದ ನಟಿ ನೆನಪಿದ್ಯಾ? ಆಕೆ ಈವಾಗ ಎಲ್ಲಿದ್ದಾರೆ? ಹೇಗಿದ್ದಾರೆ?   

PREV
18
ಆಪ್ತರಕ್ಷಕದ ಗರನೆ ಗರಗರನೇ ತಿರುಗಿದೇ ಧರಣಿ ನಾಗವಲ್ಲಿ ನಟಿ ವಿಮಲಾ ಈಗೆಲ್ಲಿದ್ದಾರೆ?

ಕನ್ನಡ ಸಿನಿಮಾದಲ್ಲಿ ಭರ್ಜರಿ ಸದ್ದು ಮಾಡಿದ, ವೀಕ್ಷಕರಿಗೆ ಅತ್ಯುತ್ತಮ ಕಥೆ, ಸಪ್ಸೆನ್ಸ್, ಥ್ರಿಲ್ಲರ್ ರಸದೌತಣ ನೀಡಿದ ಸಿನಿಮಾ ಅಂದ್ರೆ ಅದು ಆಪ್ತರಕ್ಷಕ (Aptarakshaka). ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ಇದಾಗಿದ್ದು, ಅದ್ಭುತ ಮನೋರಂಜನೆ ನೀಡಿದ ಸಿನಿಮಾ ಇದು. 
 

28

ಈ ಸಿನಿಮಾದಲ್ಲಿ ನಾಗವಲ್ಲಿ ಆಗಿ ನಟಿಸಿರುವ ನಟಿ ನೆನಪಿದ್ಯಾ? ಗರನೆ ಗರಗರನೇ ತಿರುಗಿದೇ ಧರಣಿ ನಿನ್ನ ನೋಡಿ ತರುಣಿ ಎನ್ನುವ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ, ಆ ಸುಂದರಿಯ ನಿಜವಾದ ಹೆಸರು ವಿಮಲಾ ರಾಮನ್ (Vimala Raman). 
 

38

ನಾಗವಲ್ಲಿ ಪಾತ್ರಕ್ಕೆ, ಸಿನಿಮಾದಲ್ಲಿ ವರ್ಣಿಸಿದ ಆ ಸೌಂದರ್ಯಕ್ಕೆ ತಕ್ಕಂತೆ ಸೌಂದರ್ಯವತಿ ಮತ್ತು ಅದ್ಭುತವಾಗಿ ನೃತ್ಯ ಮಾಡಿದ ನಟಿ ವಿಮಲಾ ರಾಮನ್ ಆಷ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದ ಭಾರತೀಯ ನಟಿ ಮತ್ತು ಭರತನಾಟ್ಯ ಕಲಾವಿದೆ ಕೂಡ ಹೌದು. 
 

48

ಆರಂಭದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ವಿಮಲಾ, 2004 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಿಸ್ ಇಂಡಿಯಾ ಆಷ್ಟ್ರೇಲಿಯಾ (Miss India Australia) ಕಾರ್ಯಕ್ರಮದ ವಿನ್ನರ್ ಕೂಡ ಹೌದು. ಕನ್ನಡದಲ್ಲಿ ಒಂದೆರಡು ಸಿನಿಮಾದಲ್ಲಿ ನಟಿಸಿದ ಇವರು ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. 
 

58

ಪೊಯಿ ಎನ್ನುವ ತಮಿಳು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ವಿಮಲಾ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಸೇರಿ ಇಲ್ಲಿವರೆಗೂ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಆಪ್ತರಕ್ಷಕ ಮತ್ತು ರಾಜರಾಜೇಂದ್ರ ಸಿನಿಮಾದಲ್ಲಿ ನಟಿಸಿದ್ದಾರೆ ಇವರು. 
 

68

ವಯಸ್ಸು 40 ದಾಟಿದ್ರು ಇನ್ನೂ ಮದುವೆಯಾಗದ ನಟಿ ವಿಮಲಾ ರಾಮನ್, ಸದ್ಯ ತಮಿಳಿನ ಜನಪ್ರಿಯ ವಿಲನ್ ಆಗಿ ನಟಿಸುವ ನಟನ ಜೊತೆ ರಿಲೇಶನ್ ಶಿಪ್ ನಲ್ಲಿದ್ದು, ಆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕನ್ ಫರ್ಮ್ ಮಾಡಿದ್ದಾರೆ. ಇಬ್ಬರು ಜೊತೆ ಜೊತೆಯಾಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ಸಹ ಶೇರ್ ಮಾಡುತ್ತಿರುತ್ತಾರೆ. 
 

78

ಮಂಗಳೂರು ಮೂಲದ, ಮುಂಬೈನಲ್ಲಿ ಹುಟ್ಟಿ ಬೆಳೆದ ನಟ ವಿನಯ್ ರೈ (Vinay Rai) ಜೊತೆ ವಿಮಲಾ ರಿಲೇಶನ್ ಶಿಪ್ ನಲ್ಲಿದ್ದಾರೆ. ವಿನಯ್ ರೈ ತಮಿಳು, ತೆಲುಗು ಸಿನಿಮಾಗಳಲ್ಲಿ ಆರಂಭದಲ್ಲಿ ಹೀರೋ ಆಗಿ, ಇದೀಗ ಖಡಕ್ ವಿಲನ್ ಆಗಿ ನಟಿಸುತ್ತಿದ್ದಾರೆ. ಸೂಪರ್ ಹಿಟ್ ಹನುಮಾನ್ ಸಿನಿಮಾದಲ್ಲಿ ವಿಲನ್ ಆಗಿ ಆರ್ಭಟಿಸಿದ ನಟ ಇವರೇ. 
 

88

ಚೆನ್ನೈನಲ್ಲಿ ನೆಲೆಸಿರುವ ನಟಿ ತಮಿಳು, ತೆಲುಗು ಸಿನಿಮಾಗಳಲ್ಲಿನ್ನೂ ಬ್ಯುಸಿಯಾಗಿದ್ದಾರೆ. ಇವರು ಕೊನೆಯದಾಗಿ ಅಂತಿಮ ತೀರ್ಪು ಎನ್ನುವ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದರು. ಭರತನಾಟ್ಯ ಕಲಾವಿದೆಯಾಗಿರುವ ವಿಮಲಾ ಹೆಚ್ಚಾದಿ ನೃತ್ಯ ಪ್ರದರ್ಶನ ಕೂಡ ನೀಡುತ್ತಿರುತ್ತಾರೆ. ಅಂದದಲ್ಲಿ ಅಂದಗಾರ್ತಿಯಾಗಿರುವ ನಾಗವಲ್ಲಿಯ ಸೌಂದರ್ಯದ ಬಗ್ಗೆ ನೀವೇನ್ ಹೇಳ್ತೀರಿ… 
 

Read more Photos on
click me!

Recommended Stories