ಮಹಾನಟಿ ಮುಗಿತ್ತಿದ್ದಂತೆ ಕಾಮಾಕ್ಯ ದೇವಿ ದರ್ಶನ ಪಡೆದ ನಿಶ್ವಿಕಾ ನಾಯ್ಜು, ಮೇಕಪ್ ಇಲ್ಲದ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ!

Published : Jul 19, 2024, 04:44 PM IST

ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ಮುಗಿದ್ದದ್ದೇ ತಡ ನಟಿ ನಿಶ್ವಿಕಾ ನಾಯ್ಡು ಗುವಾಹಟಿಯ ಪ್ರಸಿದ್ಧ ಕಾಮಖ್ಯ ದೇವಿ ಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ.   

PREV
17
ಮಹಾನಟಿ ಮುಗಿತ್ತಿದ್ದಂತೆ ಕಾಮಾಕ್ಯ ದೇವಿ ದರ್ಶನ ಪಡೆದ ನಿಶ್ವಿಕಾ ನಾಯ್ಜು, ಮೇಕಪ್ ಇಲ್ಲದ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಮಿಂಚುತ್ತಿರುವ ಹಾಗೂ ಮಹಾನಟಿ ರಿಯಾಲಿಟಿ ಶೋ ಜಡ್ಜ್ ಆಗಿ ಗುರುತಿಸಿಕೊಂಡಿರುವ ನಿಶ್ವಿಕಾ ನಾಯ್ಡು (Nishvika Naidu) ಕನ್ನಡ ಸಿನಿ ಪ್ರಿಯ ಹುಡುಗರ ಸದ್ಯದ ಹಾಟ್ ಫೇವರಿಟ್. ಇವರ ಸಿನಿಮಾ, ನಟನೆ ಡ್ಯಾನ್ಸ್‌ಗೆ ಯುವಕರು ಫಿದಾ ಆಗಿದ್ದಾರೆ. 
 

27

ಇಲ್ಲಿವರಿಗೆ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿಯಲ್ಲಿ (Mahanati reality show) ತೀರ್ಪುಗಾರರಾಗಿ ಮೂರು ವಾರದಿಂದ ಬ್ಯುಸಿಯಾಗಿದ್ದ ನಟಿ ನಿಶ್ವಿಕಾ ಇದೀಗ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ, ಬಿಡುವು ಮಾಡಿಕೊಂಡು ಪ್ರಸಿದ್ಧ ಕಾಮಕ್ಯ ದೇವಿ ಮಂದಿರಕ್ಕೆ ಭೇಟಿ ನೀಡಿ ಬಂದಿದ್ದಾರೆ. 
 

37

ದೈವ ಭಕ್ತೆಯಾಗಿರುವ ನಿಶ್ವಿಕಾ ಹೆಚ್ಚಾಗಿ, ದೇವಸ್ಥಾನ, ಪೂಜೆ ಪುರಸ್ಕಾರ ಮಾಡುತ್ತಲೇ ಇರ್ತಾರೆ. ಇತ್ತೀಚೆಗೆ ತಿಂಗಳುಗಳ ಹಿಂದೆ ತೆಲುಗಿನ ಜ್ಯೋತಿಷಿ ವೇಣುಸ್ವಾಮಿ ಬಳಿ ನಟಿ ಪೂಜೆ ಮಾಡಿಸಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ದೇಗುಲ ದರ್ಶನದ ಮೂಲಕ ಸುದ್ದಿಯಲ್ಲಿದ್ದಾರೆ. 
 

47

ನಿಶ್ವಿಕಾ ಅಸ್ಸಾಂನ ಗುವಾಹಟಿಯಲ್ಲಿರುವ ವಿಶ್ವ ಪ್ರಸಿದ್ಧ ಕಾಮಕ್ಯ ದೇವಿ ಮಂದಿರಕ್ಕೆ (Kamakhya Devi Mandir) ಭೇಟಿ ನೀಡಿ, ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

57

ಮುಖದಲ್ಲಿ ಕೊಂಚವೂ ಮೇಕಪ್ ಇಲ್ಲದೇ, ಪಿಂಕ್ ಬಣ್ಣದ ಸಿಂಪಲ್ ಸೀರೆಯುಟ್ಟು ಕೈತುಂಬಾ ಬಳೆ ತೊಟ್ಟು, ಹಣೆ ಮೇಲೆ ಕುಂಕುಮ ಇಟ್ಟು ದೇವಿ ದರ್ಶನ ಪಡೆದು, ದೇಗುಲದ ಮುಂದೆ ನಿಂತು ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
 

67

ಇನ್ನು ಕಾಮಾಕ್ಯ ದೇವಿ ಮಂದಿರದ ಬಗ್ಗೆ ಹೇಳೋದಾದ್ರೆ 51 ಶಕ್ತಿ ಪೀಠಗಳಲ್ಲಿ ಒಂದು ಕಾಮಾಕ್ಯ ದೇವಿ ದೇವಸ್ಥಾನ. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ.
 

77

ಪ್ರತಿ ವರ್ಷ ಜೂನ್‌ನಲ್ಲಿ ಈ ತಾಯಿ ಮುಟ್ಟಾಗುತ್ತಾಳೆ ಎನ್ನುವ ನಂಬಿಕೆ ಇದೆ, ಹಾಗಾಗಿ ದೇಗುಲದ ಹಿಂದೆ ಹರಿಯುವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ. ದೇವಿ ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ.  ದೇವಿಯ ಮುಟ್ಟಾದ ಬಟ್ಟೆಯನ್ನು ಉತ್ಸವದ ಸಮಯದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಇದೇ ಈ ದೇಗುಲದ ಪ್ರಾಮುಖ್ಯತೆ. 
 

Read more Photos on
click me!

Recommended Stories