ಹೈ ಹೀಲ್ಸ್ ಜೊತೆ ಸೆಕ್ಸಿ ಮೂವ್ಸ್.... ಶ್ವೇತಾ ಶ್ರೀವಾತ್ಸವ್ ಡ್ಯಾನ್ಸ್ ನೋಡಿ ಜನ‌ ಏನಂದ್ರು ನೋಡಿ!

First Published | Jul 19, 2024, 5:14 PM IST

ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ನಟಿ ಶ್ವೇತಾ ಶ್ರೀವಾತ್ಸವ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂದ ಹೆಚ್ಚಾಗಿ ತಮ್ಮ ಇನ್’ಸ್ಟಾಗ್ರಾಂ ರೀಲ್ಸ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರ್ತಾರೆ. 
 

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು, ಫೇರ್ ಆಂಡ್ ಲವ್ಲಿಯಂತ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav) ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡೋದೆ ಕಡಿಮೆ, ಹೆಚ್ಚಾಗಿ ಈವೆಂಟ್ಸ್‌ನಲ್ಲೇ ಬ್ಯುಸಿಯಾಗಿರ್ತಾರೆ.

ಇತ್ತೀಚೆಗೆ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದರು ಅಷ್ಟೇ, ಇವರು ನಟಿಸುತ್ತಿರುವ ಚಿಕ್ಕಿಯ ಮೂಕುತ್ತಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದ್ರೆ ಸದ್ಯಕ್ಕಂತೂ ನಟಿ ತಮ್ಮ ಸಿನಿಮಾಗಿಂತ ಹೆಚ್ಚಾಗಿ ತಮ್ಮ ರೀಲ್ಸ್‌ನಿಂದಲೇ ಸುದ್ದಿಯಲ್ಲಿದ್ದಾರೆ. 

Tap to resize

ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಶ್ವೇತಾ, ತಮ್ಮ ಫ್ಯಾಮಿಲಿ ಫೋಟೋ, ಮಗಳ ಕುರಿತಾದ ಮುದ್ದಾದ ವಿಡಿಯೋಗಳು, ಜೊತೆಗೆ ತಮ್ಮ ವರ್ಕ್ ಔಟ್ ವಿಡಿಯೋ, ಬೇರೆ ಬೇರೆ ಹಾಡುಗಳಿಗೆ ಹೆಜ್ಜೆ ಹಾಕುವ ವಿಡಿಯೋಗಳನ್ನ ಶೇರ್ ಮಾಡುತ್ತಲೇ ಇರುತ್ತಾರೆ. 

ನಟಿ ಪ್ರತಿದಿನ ಜಿಮ್ ಮಾಡ್ತಾರೆ, ಜಿಮ್ ಮಾಡಿದ ಬಳಿಕ ಅದೇ ಜಿಮ್ ಡ್ರೆಸಲ್ಲಿ ರೀಲ್ಸ್ ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿರ್ತಾರೆ. ಇತ್ತೀಚೆಗೆ ಶ್ವೇತಾ ಜಿಮ್ ಬ್ರಾ, ಅದರ ಮೇಲೊಂದು ಲೂಸ್ ಸ್ಲೀವ್ ಲೆಸ್ ಟೀ ಶರ್ಟ್, ಜೊತೆಗೆ ಹೈಹೀಲ್ಸ್ (High heels) ಧರಿಸಿ ಡ್ಯಾನ್ಸ್ ಮಾಡಿದ್ದು ಭಾರಿ ವೈರಲ್ ಆಗಿತ್ತು. 
 

ಡ್ಯಾನ್ಸ್ ಅನ್ನೋದು ತನ್ನ ಪ್ಯಾಶನ್ ಎನ್ನುವ ಶ್ವೇತಾ ಹೈ ಹೀಲ್ಸ್ ಜೊತೆಗೆ ಸೆಕ್ಸಿ ಮೂವ್ಸ್ ಮಾಡ್ತಾ ಇಂಗ್ಲೀಷ್ ಹಾಡಿಗೆ, ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನ ನೋಡಿ ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ವಿಡಿಯೋ ನೋಡಿ ಟೀಕಿಸಿದ್ರೆ, ಇನ್ನೂ ಕೆಲವರು ಈ ವಯಸಲ್ಲೂ ಇಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡ್ತಿರಲ್ಲ ಎಂದು ಅಭಿನಂದಿಸಿದ್ದಾರೆ. 

ಡ್ಯಾನ್ಸ್ ರೀಲ್ಸ್ ಗೆ ಕ್ಯಾಪ್ಶನ್ ಕೊಟ್ಟಿರುವ ಶ್ವೇತಾ, ಹೈ ಹೀಲ್ಸ್ ಹಾಕೊಂಡು ಡ್ಯಾನ್ಸ್ ಮಾಡೋದು ಖಂಡಿತಾ ಸುಲಭವಲ್ಲ!!! ನನ್ನ ಪ್ಯಾಶನ್ ಅನ್ನು ನಾನು ಹಿಂಬಾಲಿಸುತ್ತೇನೆ, ಯಾಕಂದ್ರೆ ಅದು ನನಗೆ ಥ್ರಿಲ್ ನೀಡುತ್ತೆ. ನನಗೆ ಏನು ಎಕ್ಸೈಟ್ಮೆಂಟ್ ನೀಡುತ್ತೋ ಅದನ್ನ ಕಲಿಯೋ ಸಮಯವಿದು. ಖಂಡಿತವಾಗಿಯೂ ಪ್ರೊಫಿಷನಲ್‌ಗಳಿಂದ ಕಲಿಯಬೇಕು ಎಂದು ಬರೆದುಕೊಂಡಿದ್ದಾರೆ. 
 

ಶ್ವೇತಾ ಶ್ರೀವಾತ್ಸವ್ ಬೋಲ್ಡ್ ಅವತಾರ (bold dance moves) ನೋಡಿದ ಜನ ಆಂಟಿ ಏನಿದು ಅವತಾರ, ನೀವ್ಯಾಕೆ ಹೀಗೆಲ್ಲಾ ಆಡ್ತೀರಾ? ಏನು ಮಾಡೋಕೆ ಹೊರಟಿದ್ದೀರಾ? ನೀವು ಇಷ್ಟೊಂದು ಹಾರ್ಡ್ ವರ್ಕ್ ಮಾಡೋದು ನೆಗೆಟಿವ್ ಕಾಮೆಂಟ್ಸ್‌ಗಾ? ನೀವು ಏನ್ ಮಾಡಿದ್ರೂ ಸೆಕ್ಸಿಯಾಗಿ ಕಾಣೋದಿಲ್ಲ, ಮೇಡಂ ನಿಮ್ಮ ಗಂಡ ಗ್ರೇಟ್ ಇಷ್ಟೇಲ್ಲಾ ಆದ್ರೂ ನೋಡ್ಕೊಂಡು ಸುಮ್ನೆ ಇದ್ದಾರಲ್ಲ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

ಮತ್ತಷ್ಟು ಜನ ಕಾಮೆಂಟ್ ಮಾಡಿ, ಮೇಡಂ ಇದನ್ನ ಬಿಟ್ಟು ಹೊಸ ಫಿಲಂಗೆ ಟ್ರೈ ಮಾಡಿ ಅಂತಾನೂ ಹೇಳಿದ್ದಾರೆ. ಅಲ್ಲದೇ ಜೀವನದಲ್ಲಿ ಏನಾದ್ರೂ ಇನೋವೇಟಿವ್ ಆಗಿ ಮಾಡಿ, ಬೆಳೆದ ಮಗಳು ಇರೋವಾಗ ಯಾಕೆ ಹೀಗೆಲ್ಲಾ ಮಾಡ್ತೀರಾ ಅಂತಾನೂ ಕೇಳಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಕೆಲವರು ನಿಮ್ಮ ಡ್ಯಾನ್ಸ್ ಹಾಟ್ ಆಗಿದೆ, ಸೆಕ್ಸಿ ಆಗಿದೆ, ಹೊಸದನ್ನು ಕಲಿಯೋದಕ್ಕೆ ವಯಸ್ಸು ವಿಷ್ಯವೇ ಅಲ್ಲ, ಯಾವಾಗ್ಲೂ ಯಂಗ್ ಆಂಡ್ ಎನರ್ಜಿಟಿಕ್, ಈ ವಯಸ್ಸಲ್ಲೂ ಹೀಗೆ ಮಾಡೋದು ನೋಡಿ ಖುಷಿ ಆಗ್ತಿದೆ ಅಂತಾನು ಕಾಮೆಂಟ್ ಮಾಡಿದ್ದಾರೆ.  
 

Latest Videos

click me!