ಅಪ್ಪ-ಅಮ್ಮನ ಜೊತೆ ಶ್ರೀಶೈಲಂ ದರ್ಶನ ಪಡೆದ ನಟಿ ತೇಜಸ್ವಿನಿ

First Published | Jun 27, 2024, 11:24 AM IST

ಕೊಡಗಿನ ಬೆಡಗಿ, ಮುದ್ದು ಮುಖದ ಸುಂದರಿ ತೇಜಸ್ವಿನಿ ಶರ್ಮಾ ತಮ್ಮ ಪೋಷಕರ ಜೊತೆ ಶ್ರೀಶೈಲಂ ದರ್ಶನ ಪಡೆದು ಬಂದಿದ್ದು, ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 
 

ಸದ್ಯ ಕನ್ನಡ ಸಿನಿಮಾದಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ತೇಜಸ್ವಿನಿ ಶರ್ಮಾ (Tejaswini Sharma), ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. 
 

ತೇಜಸ್ವಿನಿ ಈಗಾಗಲೇ ನಾಲ್ಕು ಕನ್ನಡ ಸಿನಿಮಾ ಮತ್ತು ಒಂದು ವೆಬ್ ಸೀರೀಸ್ ಗಳಲ್ಲಿ (web series) ನಟಿಸಿದ್ದಾರೆ. ಆದರೆ ಇವರು ಹೆಚ್ಚು ಸುದ್ದಿಯಾಗಿದ್ದು ಮಾತ್ರ ತಮ್ಮ ಸೋಶಿಯಲ್ ಮೀಡಿಯಾದಿಂದಲೇ. 
 

Tap to resize

ತೇಜಸ್ವಿನಿ ನಾಯಕಿಯಾಗಿ ಲಿಖಿತ್ ಶೆಟ್ಟಿ ಜೊತೆ ನಟಿಸಿದ ಫುಲ್ ಮೀಲ್ಸ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು, ಅದಕ್ಕೂ ಮುನ್ನ ನಟಿ ಇಂಗ್ಲಿಷ್ ಮಂಜ ಸಿನಿಮಾದಲ್ಲಿ ನಟಿಸಿದ್ದರು. 
 

ಸೋಶಿಯಲ್ ಮಿಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ತೇಜಸ್ವಿನಿ, ಹೆಚ್ಚಾಗಿ ಮಾಡರ್ನ್ ಜೊತೆಗೆ ಟ್ರೆಡಿಷನಲ್ ಆಗಿಯೂ ಕಾಣಿಸಿಕೊಳ್ತಾರೆ. ಜೊತೆಗೆ ತಮ್ಮ ಸೆಲೆಬ್ರಿಟಿ ಸ್ನೇಹಿತೆಯರ ಜೊತೆ ಟ್ರಾವೆಲ್ ಕೂಡ ಮಾಡ್ತಾರೆ. 
 

ಇದೀಗ ನಟಿ ತೇಜಸ್ವಿನಿ ತಮ್ಮ ಪೋಷಕರ ಜೊತೆ ತೆಲಂಗಾಣದಲ್ಲಿರುವ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಂಗೆ (Shree Shailam) ಭೇಟಿ ನೀಡಿದ್ದು ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದು ಬಂದಿದ್ದಾರೆ. 
 

ದೇಗುಲಕ್ಕೆ ಭೇಟಿ ನೀಡಿದ ಹಲವು ಫೋಟೋಗಳನ್ನು ತೇಜಸ್ವಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ನೀಲಿ ಬಣ್ಣದ ರೇಷ್ಮೆ ಸೀರೆ, ಕಪ್ಪು ಬಣ್ಣದ ಕಾಟನ್ ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ಅಭಿಮಾನಿಗಳು ನಟಿಯನ್ನು ಈ ಟ್ರೆಡಿಶನಲ್ ಲುಕ್ (Traditional Look) ನೋಡಿ ಖುಷಿಪಟ್ಟಿದ್ದಾರೆ. ನಿಮ್ಮ ಫ್ಯಾಮಿಲಿ ಫೋಟೋ ತುಂಬಾನೆ ಚೆನ್ನಾಗಿದೆ, ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತೀರಿ. ಗಾರ್ಜಿಯಸ್ ತೇಜು ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. 
 

Latest Videos

click me!