ಯು ಟರ್ನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಕ್ಕೆ ಕಾಲಿಟ್ಟ ರಂಗಭೂಮಿ ಕಲಾವಿದೆ ಶ್ರದ್ಧಾ ಶ್ರೀನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಇದೀಗ ಶ್ರದ್ಧಾ ಶ್ರೀನಾಥ್ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಲೈಟ್ ಪಿಂಕ್ ಮತ್ತು ಬ್ಲಾಕ್ ಕಾಂಬಿನೇಷನ್ ಡ್ರೆಸ್‌ನಲ್ಲಿ ನಟಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ಶ್ರದ್ಧಾ ಶ್ರೀನಾಥ್‌ಗೆ ಮೇಕಪ್ ಮಾಡಿರುವುದು ನಯನಾ ಲಿಂಗರಾಜು, ಹೇರ್ ಸ್ಟೈಲ್ ಮಾಡಿರುವುದು ನಾಯ್ಡು ಮೇಕಪ್ ಸ್ಟುಡಿಯೋದವರು. ಡ್ರೆಸ್ ಡಿಸೈನ್ ಮಾಡಿರುವುದು ಥಿಥಿಲಿ.
ಅಲ್ಟ್ರಾ ಗಾಜಿಯಸ್, ಬ್ಯೂಟಿಫುಲ್, ಯು ಟರ್ನ್ ನೋಡಿದಾಗಲೆಲ್ಲಾ ನೀವೇ ನೆನಪಾಗುತ್ತೀರಿ, ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಒಂದೆರಡು ಕನ್ನಡ ಸಿನಿಮಾಗಳ ಜೊತೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಶ್ರದ್ಧಾ ಶ್ರೀನಾಥ್ ಸಖತ್ ಮಿಂಚುತ್ತಿದ್ದಾರೆ. ಶ್ರದ್ಧಾ ಕೈ ತುಂಬಾ ಸಿನಿಮಾಗಳಿದೆ.
ಡಿಯರ್ ವಿಕ್ರಮ್, ರುಸ್ತಮ್, ದಿ ವಿಲನ್, ಉರ್ವಿ, ಮುಂಗಾರು ಮಳೆ 2 ಸಿನಿಮಾಗಳಲ್ಲಿ ಶ್ರದ್ಧಾ ನಟಿಸಿದ್ದಾರೆ. ಆಪರೇಷನ್ ಅಲಮೈಲಮ್ಮ ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ.
Vaishnavi Chandrashekar