ಚಂದನವನದ ಕರ್ಪೂರದ ಬೊಂಬೆ ನಟಿ ಶೃತಿ (Actress Shruthi) ಇತ್ತೀಚೆಗಷ್ಟೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು, ತಮ್ಮ ಕನಸಿನ ಮನೆಯನ್ನು ಗೃಹಪ್ರವೇಶವನ್ನು ನಟಿ ಅದ್ಧೂರಿಯಾಗಿಯೇ ನೆರವೇರಿಸಿದ್ದರು.
28
ಮನೆಯಲ್ಲಿ ವಿಶೇಷವಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿದ್ದರು. ಸಮಾರಂಭದ ವಿಡಿಯೋ ಹಾಗೂ ಫೋಟೊಗಳನ್ನು ನಟಿ ಹಾಗೂ ಅವರ ಪುತ್ರಿ ಗೌರಿ ಕೂಡ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದರು.
38
ಇದೀಗ ಗೌರಿ ಶೃತಿ ಮತ್ತೊಂದಿಷ್ಟು ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ತಾರೆಗಳ ಸಮಾಗಮ ಕೂಡ ಕಾಣಬಹುದು.
48
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗೌರಿ (Gowri Shruthi), ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿಯೂ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರ ಫೋಟೊ ಶೇರ್ ಮಾಡಿದ್ದಾರೆ.
58
ಅಷ್ಟಕ್ಕೂ ಶೃತಿ ಮನೆಯಲ್ಲಿ ಯಾವ ಕಾರ್ಯಕ್ರಮ ನಡೆದಿದೆ ಅನ್ನೊದರ ಬಗ್ಗೆ ಮಾಹಿತಿ ಇಲ್ಲ, ಆದರೆ ಎಲ್ಲರೂ ಸೀರೆಯುಟ್ಟು ಸಾಂಪ್ರಾದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನೋಡಿದ್ರೆ, ಪೂಜೆ ನಡೆದಿರೋ ಥರ ಕಾಣಿಸ್ತಿದೆ.
68
ಗೌರಿ ತಮ್ಮ ಅಮ್ಮನಾದ ಶೃತಿ ಹಾಗೂ ಚಿಕ್ಕಮ್ಮ ಉಷಾ ಜೊತೆಗೂ ಮುದ್ದಾದ ಫೋಟೊ ಹಂಚಿಕೊಂಡಿದ್ದು ಇಬ್ಬರೂ ಗೌರಿ ಕೆನ್ನೆಗೆ ಮುತ್ತು ನೀಡುತ್ತಿರುವ ಫೋಟೊ ಇದಾಗಿದೆ.
78
ಇದಲ್ಲದೇ ಶೃತಿ ಫ್ಯಾಮಿಲಿ ಜೊತೆ ತರುಣ್ ಸುಧೀರ್, ಅವರ ತಾಯಿ ಹಾಗೂ ಪತ್ನಿ ಸೋನಲ್ ಕೂಡ ಕಾಣಿಸಿಕೊಂಡಿದ್ದಾರೆ. ಸೋನಲ್ ಮತ್ತು ತರುಣ್ ಮ್ಯಾಚಿಂಗ್ ಸೀರೆ ಹಾಗೂ ಕುರ್ತಾ ಧರಿಸಿದ್ದಾರೆ.
88
ಇವರಲ್ಲದೆ ನಟಿ ಅಮೂಲ್ಯ ಕೂಡ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಗೌರಿ ಅಮೂಲ್ಯ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ.