ಮಧ್ಯ ರಾತ್ರಿ ರಶ್ಮಿಕಾ ಮನೆ ಹುಡುಕಿಕೊಂಡು ಬಂದವ ಕಂಬಿ ಹಿಂದೆ!

First Published | Jun 22, 2021, 12:00 PM IST
  • ಕಿರಿಕ್ ಚೆಲುವೆಯನ್ನು ಹುಡುಕಿಕೊಂಡು ಕೊಡಗಿಗೆ ಬಂದ ಅಭಿಮಾನಿ
  • ಮಧ್ಯರಾತ್ರಿ ಬಂದು ರಶ್ಮಿಕಾ ಮನೆ ಎಲ್ಲಿ ಎಂದು ಕೇಳಿದ..!
ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಅವರಿಗೆ ಭಾರೀ ಅಭಿಮಾನಿ ಬಳಗವಿದೆ.
ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಟಾಲಿವುಡ್‌ನಲ್ಲಿಯೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ನಟಿ ಸಿನಿಪ್ರೇಮಿಗಳ ನೆಚ್ಚಿನ ನಟಿ.
Tap to resize

ಅಭಿಮಾನಿಯೊಬ್ಬ ರಶ್ಮಿಕಾರನ್ನು ಹುಡುಕಿಕೊಂಡು ವಿರಾಜಪೇಟೆಗೆ ಬಂದಿದ್ದಾನೆ.
ತೆಲಂಗಾಣದಿಂದ ವಿರಾಜಪೇಟೆಗೆ ಬಂದ ಫ್ಯಾನ್ ಈಗ ಸುದ್ದಿಯಾಗಿದ್ದಾನೆ.
ವಿರಾಜಪೇಟೆಗೆ ಬಂದು ರಾತ್ರಿಯಿಡೀ ರಶ್ಮಿಕಾ ಮನೆಗಾಗಿ ಹುಡುಕಾಟ ನಡೆಸಿದ್ದಾನೆ ಈತ.
ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿ ಸ್ಥಳೀಯರ ಬಳಿ ವಿಚಾರಣೆ ಮಾಡಿದ್ದಾನೆ.
ರಶ್ಮಿಕಾ ಮನೆ ಎಲ್ಲಿ ಅಂತ ವಿಚಾರಿಸಿದ ಯುವಕ ನಟಿಯನ್ನು ಭೇಟಿಯಾಗಲು ತವಕಿಸಿದ್ದಾನೆ.
ಆತನ ವರ್ತನೆ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು
ಪೊಲೀಸರು ಬಂದು ವಿಚಾರಿಸಿದಾಗ ತೆಲಂಗಾಣದವನೆಂದು ಪತ್ತೆಯಾಗಿದೆ.
ತೆಲಂಗಾಣ ಮೂಲದ ಆಕಾಶ್ ತ್ರಿಪಾಠಿ ಮೈಸೂರುವರೆಗೆ ರೈಲು, ಅಲ್ಲಿಂದ ಆಟೋದಲ್ಲಿ ವಿರಾಜಪೇಟೆಗೆ ಬಂದಿದ್ದ.ಆತನಿಗೆ ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

Latest Videos

click me!