ಸಂಚಾರಿ ವಿಜಯ್‌ಗೆ ಅಂತಿಮ ನಮನ ಸಲ್ಲಿಸಿದ ಸ್ಯಾಂಡಲ್‌ವುಡ್

First Published | Jun 15, 2021, 9:39 PM IST

ಬೆಂಗಳೂರು (ಜೂ.  15)  ನಟ ಸಂಚಾರಿ ವಿಜಯ್ ಅಭಿಮಾನಿಗಳನ್ನು ಅಗಲಿದ್ದಾರೆ. ಇನ್ನಡ ಚಿತ್ರರಂಗ  ಸಂಚಾರಿ ವಿಜಯ್ ಅವರಿಗೆ ಅಂತಿಮ ನಮನ ಸಲ್ಲಿಸಿದೆ. ಸೋಶಿಯಲ್ ಮೀಡಿಯಾ ಮುಖೇನ ಅವರೊಂದಿಗೆ ಕೆಲಸ ಮಾಡಿದ ಅನೇಕರು ನೆನಪು ಹಂಚಿಕೊಂಡಿದ್ದಾರೆ.

ದೇವರು ನಿಜವಾಗಲೂ ಕ್ರೂರಿ ಅನಿಸ್ತಿದೆ ಎಂದು ಬರೆದುಕೊಂಡ ಮೇಘನಾ ರಾಜ್ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಟ ಕಿಚ್ಚ ಸುದೀಪ್ ಸಂಚಾರಿ ವಿಜಯ್ ಗೆ ಅಂತಿಮ ನಮನ ಸಲ್ಲಿಸಿದ್ದಾರೆ.
Tap to resize

ಇಷ್ಟು ಅವಸರ ಏನಿತ್ತು ವಿಜಯ್? ನಿಮ್ಮಂತ ಕಲಾವಿದ ಬರುವುದೇ ಅಪರೂಪ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಬೈಕ್ ಸವಾರಿ ಮಾಡುವವರು ದಯವಿಟ್ಟು ಹೆಲ್ಮೆಟ್ ಧರಿಸಿ ಎಂದು ನಿರ್ದೇಶಕ ತರುಣ್ ಸುಧೀರ್ ಕೇಳಿಕೊಂಡಿದ್ದಾರೆ.
ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಯುವ ಕಲಾವಿದ ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ಅಸುನೀಗಿದ್ದಾರೆ ಎಂಬ ಸುದ್ದಿ ಆಘಾತ ಉಂಟುಮಾಡಿದೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾರ್ಥಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಕಂಬನಿ ಮಿಡಿದಿದ್ದಾರೆ.
ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ಡಿಸ್ಕಶನ್
ಕಿರುತೆರೆ ಮತ್ತು ಹಿರಿತೆರೆ ಕಲಾವಿದೆ ಶ್ವೇತಾ ಚಂಗಪ್ಪ ಸಂಚಾರಿ ವಿಜಯ್ ಅವರೊಂದಿಗಿನ ಬಾಂಧವ್ಯ ವಿವರಿಸಿದ್ದಾರೆ.
ನಾತಿ ಚರಾಮಿ ಚಿತ್ರದಲ್ಲಿ ವಿಜಯ್ ಅವರೊಂದಿಗೆ ಅಭಿನಯಿಸಿದ್ದ ನಟಿ ಶ್ರುತಿ ಹರಿಹರನ್ ಹಳೆಯ ಘಟನೆಗಳನ್ನು ನೆನೆದಿದ್ದಾರೆ.
ನಟ, ಸಂಚಾರಿ ವಿಜಯ್ ಗೆಳೆಯ ನೀನಾಸಂ ಸತೀಶ್ ಕೊರೋನಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Latest Videos

click me!