ನೀಲಕಂಠ, ಹೂ ಮತ್ತು ಇಂದ್ರ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ನಮಿತಾ ತಾಯಿಯಾಗುತ್ತಿರುವ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
'ತಾಯಿತನ..ಜೀವನದ ಹೊಸ ಜರ್ನಿ ಆರಂಭವಾಗುತ್ತಿದೆ. ನಾನು ಬದಲಾಗಿರುವೆ. ನಿನ್ನ ಅಗಮನಕ್ಕೆ ನಾನು ಕಾಯುತ್ತಿರುವೆ. ನಿನ್ನ ಸ್ಪರ್ಶ ಫೀಲ್ ಆಗುತ್ತಿದೆ' ಎಂದು ನಮಿತಾ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಮಿತಾ ಅವರ ಸೀಮಂತ ನಡೆಯಿತ್ತು. ನೀಲಿ ಮತ್ತು ಕೆಂಪು ಸೀರೆಯಲ್ಲಿ ನಮಿತಾ ಮಿಂಚುತ್ತಿದ್ದಾರೆ, ಪತಿ ರೇಶ್ಮೆ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸೀಮಂತಕ್ಕೆ ಸ್ಪೆಷಲ್ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಒಂದು ಅಂಗೈ ಮೇಲೆ ಅಂಬೆಗಾಲು ಕೃಷ್ಣ ಮತ್ತೊಂದು ಅಂಗೈಯಲ್ಲಿ ಯಶೋದೆ ಕೃಷ್ಣ ಹಾಕಿಸಿಕೊಂಡಿದ್ದಾರೆ.
ನಮಿತಾ ನಿವಾಸದಲ್ಲಿ ಅದ್ಧೂರಿಯಾಗಿ ಮೆಹೆಂದಿ ಕಾರ್ಯಕ್ರಮ ಮಾಡಿದ್ದಾರೆ. ಮಾಡ್ರನ್ ಡ್ರೆಸ್ ಧರಿಸಿ ಮೆಹೆಂದಿ ಹಾಕಿಸಿಕೊಳ್ಳುತ್ತಿರುವು ಸಖತ್ ಡಿಫರೆಂಟ್ ಆಗಿದೆ.
2017ರಲ್ಲಿ ನಮಿತಾ ತಾವು ಪ್ರೀತಿಸಿದ ಹುಡುಗ ವೀರೇಂದ್ರ ಚೌದರಿ ಜೊತೆ ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಮಿತಾ ತಮ್ಮ 41ನೇ ಹುಟ್ಟು ಹಬ್ಬದ ದಿನ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು.