ಇಂದಿನಿಂದ ಉಪೇಂದ್ರ ನಿರ್ದೇಶನದ UI ಸಿನಿಮಾ ಚಿತ್ರೀಕರಣ ಶುರು!

First Published | Jun 28, 2022, 12:21 PM IST

7 ವರ್ಷಗಳ ನಂತರ ಕ್ಯಾಮೆರಾ ಹಿಂದೆ ನಿಂತುಕೊಂಡ ಉಪೇಂದ್ರ.  ಚಿತ್ರೀಕರಣದ ಫೋಟೋಗಳು ವೈರಲ್...

 ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ 7 ವರ್ಷಗಳ ನಂತರ ನಿರ್ದೇಶಕರ ಸ್ಥಾನ ಸ್ವೀಕರಿಸಿದ್ದಾರೆ. ಚಿತ್ರಕ್ಕೆ UI ಶೀರ್ಷಿಕೆ ರಿವೀಲ್ ಮಾಡಿದ ದಿನದಿಂದಲ್ಲೂ ಹವಾ ಹೆಚ್ಚಾಗಿದೆ. 

ಇಂದಿನಿಂದ ಯು ಐ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಚಿತ್ರೀಕರಣ ಸಣ್ಣ ಪುಟ್ಟ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Tap to resize

ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಿಸ್ತಿರೋ‌ ಯುಐ ಚಿತ್ರಕ್ಕೆ ಎಲ್ಲಾ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿರುವುದು ವಿಶೇಷ.

ಟೈಟಲ್ ಲಾಂಚ್ ,ಮುಹೂರ್ತ ದಿನದಿಂದಲ್ಲೇ ಇಡೀ ದೇಶದಾದ್ಯಂತ ‌ಸಂಚಲನ ಸೃಷ್ಟಿಸಿದೆ ಯು ಐ ಸಿನಿಮಾ. ಇಂದು ಬೆಂಗಳೂರಿನಿಂದಲೇ ಚಿತ್ರೀಕರಣ ಶುರು ಮಾಡಿದೆ ಟೀಂ.

ಉಪೇಂದ್ರ ಅವರ ಸಿನಿಮಾ ಅಂದ್ರೆ ಒಂದು ಮೆಸೇಜ್ ಇರುತ್ತೆ ಅನ್ನೋದು ಕನ್ಫರ್ಮ್. ಒಂದೇ ಮೆಸೇಜ್‌ನ ಮೂರ್ನಾಲ್ಕು ರೀತಿಯಲ್ಲಿ ಹೇಳಿ ಜನರಿಗೆ ಅರ್ಥ ಮಾಡಿಸುತ್ತಾರೆ. 

7 ವರ್ಷಗಳ ಹಿಂದೆಯೇ ಸೂಪರ್ ಸಿನಿಮಾ ಮೂಲಕ ಭಾರತ ಭವಿಷ್ಯ, 2032ರಲ್ಲಿ ಬೆಂಗಳೂರು ಹೇಗಿರಲಿದೆ ಎಂದು ಉಪ್ಪಿ ತೋರಿಸಿದ್ದರು. ಈ ಚಿತ್ರಕ್ಕೆ ನಯನತಾರಾ ನಾಯಕಿಯಾಗಿದ್ದರು.

ಯು ಐ ಚಿತ್ರಕ್ಕೆ ಯಾರು ನಾಯಕಿ? ಯಾವ ರೀತಿಯ ಕಥೆ ಇದು ಎಂದು ಜನರಿಗೆ ಕ್ಲಾರಿಟಿ ಇಲ್ಲ. ಆದರೆ ಪೋಸ್ಟರ್‌ನಲ್ಲಿ ನಾಮ, ಕುದುರೆ ಮತ್ತು ಉಪ್ಪಿ ಮುಖ ನೋಡಿ ಜನರು ಕನ್ಫ್ಯೂಶನ್‌ನಲ್ಲಿದ್ದಾರೆ.

Latest Videos

click me!