ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಬೆಂಗಳೂರಿನ ನಿವಾಸದಲ್ಲಿ ದುರ್ಗಾ ಹೋಮ ಮಾಡಿಸಿದ್ದಾರೆ.
ಉಪ್ಪಿ ನಿವಾಸದಲ್ಲಿ ದುರ್ಗಾ ಹೋಮ ಮತ್ತು ಲಲಿತಾ ಸಹಸ್ರನಾಮ ಪೂಜೆ ಮಾಡಿಸಿದ್ದಾರೆ. ಆಪ್ತರು ಮಾತ್ರ ಪೂಜೆಯಲ್ಲಿ ಭಾಗಿಯಾಗಿದ್ದರು.
ರಂಗೋಲಿಯಲ್ಲಿ ಮಂಡಲ ಮತ್ತು ದುರ್ಗಾ ದೇವಿಯನ್ನು ಬರೆದಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕಾ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತ ಮುರಳಿ ಮೋಹನ್ ಅವರು ಪೂಜೆಯ ಅದ್ಭುತ ಕ್ಷಣಗಳನ್ನು ಕ್ಲಿಕಿಸಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಅವರ ಸಹೋದರಿ, ಪ್ರಿಯಾಂಕಾ (Priyanka Upendra) ಮತ್ತು ಬಂಡಿಮಹಾ ಕಾಳಿ ದೇಗುಲದವರು ಸೇರಿಂದ ಅನೇಕರನ್ನು ಫೋಟೋದಲ್ಲಿ ನೋಡಬಹುದು.
ಉಪೇಂದ್ರ ಅವರ ನಿವಾಸದಲ್ಲಿ 6 ತಿಂಗಳಿಗೊಮ್ಮೆ ಈ ರೀತಿ ವಿಶೇಷ ಪೂಜೆಗಳು ನಡೆಯುತ್ತದೆ. ಪೂಜೆಯಲ್ಲಿ ಪ್ರಿಯಾಂಕಾ ಬೆಂಗಾಲಿ ಶೈಲಿಯಲ್ಲಿ ಮಿಂಚಿದ್ದಾರೆ.
Vaishnavi Chandrashekar