ಚೂಡಿದಾರ್​​​​ನಲ್ಲಿ ಬೊಂಬೆಯಂತೆ ಮಿಂಚಿದ ಮಿಲನಾ: ನಿಧಿಮಾ ಹೇರ್‌ಸ್ಟೈಲ್ ಮಿಸ್ ಮಾಡಿಕೊಳ್ಳುತ್ತೇವೆಂದ ಫ್ಯಾನ್ಸ್‌!

First Published | Nov 5, 2023, 11:49 AM IST

ಚಂದನವನದಲ್ಲಿ ತಮ್ಮ ಕ್ಯೂಟ್​ನೆಸ್​ನಿಂದಲೇ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಮಿಲನಾ ನಾಗರಾಜ್​. ಇವರು ಕಲರ್​ಫುಲ್​ ಫೋಟೋಗಳ ಜೊತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ. 

ಹಾಸನ ಮೂಲದ ಈ ಬೆಡಗಿ 2013ರಲ್ಲಿ 'ನಮ್​ ದುನಿಯಾ ನಮ್​ ಸ್ಟೈಲ್​' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿರಿಸಿದರು. ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆ ಬೃಂದಾವನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. 

ಆದರೆ ಇವರಿಗೆ ವಿಶೇಷವಾದ ಮನ್ನಣೆ ತಂದು ಕೊಟ್ಟಿದ್ದು ಲವ್​ ಮಾಕ್ಟೇಲ್​ ಚಿತ್ರ. ಈ ಸಿನಿಮಾ ಬಿಡುಗಡೆಯಾದಾಗ ಮಿಲನಾ ಕನ್ನಡಿಗರ ಕ್ರಶ್ ಆಗಿದ್ದರು. ನಿಧಿಮಾ ಎಂದೇ ಫೇಮಸ್​ ಆದ ಇವರ ಮಗುವಿನಂತ ನಗು, ಮುಗ್ಧತೆ, ಮನಸೋಲುವಂತ ಸೌಂದರ್ಯಕ್ಕೆ ಸಿನಿ ಪ್ರೇಕ್ಷಕರು ಮಾರುಹೋಗಿದ್ದರು. 

Tap to resize

ಇದೀಗ ಮಿಲನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋ ಸಖತ್​ ವೈರಲ್​ ಆಗಿದೆ. ವೈಟ್​ ಮತ್ತು ಬ್ಲಾಕ್ ಕಲರ್​ ಚೂಡಿದಾರ ಧರಿಸಿರುವ ನಟಿ ಸಿಂಪಲ್​​ ಲುಕ್​​, ಲೈಟ್​​ ಮೇಕಪ್​​​ ಮತ್ತು ಫ್ರೀ ಹೇರ್ಸ್​​​ನಲ್ಲಿ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.

ಮಿಲನಾ ಪೋಟೋಸ್ ನೋಡಿದ ಫ್ಯಾನ್ಸ್​​ ಕೂಡಾ ಈ ಫೋಟೋಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದು, ಲವ್​ ಮಾಕ್​ಟೇಲ್​-3 ಶೂಟಿಂಗ್​ ಯಾವಾಗ ಅಂತ್ಹೇಳಿ, ಅಪ್ಪಟ ಕನ್ನಡತಿ, ನಾವು ನಿಧಿಮಾ ಹೇರ್ ಸ್ಟೈಲ್ ಅನ್ನು ಮಿಸ್ ಮಾಡಿಕೊಳ್ಳುತ್ತೇವೆ,ಆದರೆ ಈ ಫೋಟೋ ಬಹುಕಾಂತೀಯವಾಗಿದೆ ಅಂತೆಲ್ಲಾ ಹೇಳಿದ್ದಾರೆ.

ಇನ್ನು ಮಿಲನಾ ಇತ್ತೀಚೆಗಷ್ಟೆ ಮೈಸೂರು ದಸರಾ ಸಂಭ್ರಮದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್​​​ ಮತ್ತು ತಾವು ಭಾಗಿಯಾಗಿರುವ ‘FOR REGN’ ಚಿತ್ರದ ಫಸ್ಟ್​​​ ಲುಕನ್ನ ಸಹ ಬಿಡುಗಡೆ ಮಾಡಿದ್ದರು.

ಸದ್ಯ ಲವ್​ ಮಾಕ್​​​ಟೇಲ್​ ಬೆಡಗಿ ಹಂಚಿಕೊಂಡ ಫೋಟೋ ಪಡ್ಡೆ ಹುಡುಗರ ನಿದ್ದೆ ಕದಿದ್ದು, ಮಿಲನಾ ದಿನದಿಂದ ದಿನ ಸಖತ್​​ ಕ್ಯೂಟ್​​ ಆಗಿ ಕಾಣಿಸುತ್ತಿದ್ದಾರೆ ಅಂತಾ ಕಾಮೆಂಟ್​​​ ಮಾಡುತ್ತಿದ್ದಾರೆ. ಇನ್ನೂ ಹಲವರು ನಿಮ್ಮ ಸ್ಮೈಲ್​ ನೋಡಿದ್ರೆ ಸಾಕು ನಮ್ಮ ಮೊಗದಲ್ಲೂ ಮಂದಹಾಸ ಮೂಡುತ್ತೆ ಎಂದಿದ್ದಾರೆ.

ತೆರೆಯಲ್ಲಿ ಸೂಪರ್​ ಜೋಡಿಯಾಗಿದ್ದ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್ 2021 ರ ಫೆಬ್ರವರಿ 14 ರಂದು ದಾಂಪತ್ಯಕ್ಕೆ ಕಾಲಿರಿಸಿದರು. ​ಅಲ್ಲದೇ ಸಿನಿ ಪಯಣದಲ್ಲೂ ಜೊತೆಯಾದರು. ಅವರಿಬ್ಬರು ಮದುವೆಯಾದ ನಂತರ ಬಿಡುಗಡೆಯಾದ ಲವ್​ ಮಾಕ್ಟೇಲ್​ 2 ಕೂಡ ಸೂಪರ್​ ಹಿಟ್​ ಆಗಿದೆ.

Latest Videos

click me!