ಸ್ಯಾಂಡಲ್‌ವುಡ್‌ನ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ತುಂಬಾ ಸುಂದರವಾಗಿ ಸೀರೆಯುಟ್ಟು ಕಂಗೊಳಿಸುತ್ತಿದ್ದಾರೆ. ಅಲಂಕಾರಗೊಂಡ ರಚ್ಚು ನೋಡಿದ ನೆಟ್ಟಿಗರು ಸೂಪರ್ ಡಾರ್ಲಿಂಗ್ ಅಂತಲ್ಲಾ ತಮ್ಮ ಮನದಾಳದ ಮಾತನ್ನು ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.
ರಚಿತಾ ರಾಮ್ ಸಾಮಾನ್ಯವಾಗಿ ಹೆಚ್ಚಿನ ಫೋಟೋಶೂಟ್ ಅದು-ಇದು ಅಂತ ಹೆಚ್ಚು ತಲೆಕೆಡಸಿಕೊಳ್ಳೋದಿಲ್ಲ. ತಮ್ಮ ಕೆಲಸದಲ್ಲಿಯೇ ಬ್ಯುಸಿ ಆಗಿರುತ್ತಾರೆ. ಆದರೆ ಇದೀಗ ಸಾಂಪ್ರದಾಯಿಕವಾಗಿಯೇ ಸುಂದರವಾಗಿ ಸೀರೆಯುಟ್ಟು ಮಿಂಚುತ್ತಿದ್ದಾರೆ.
ಕಪ್ಪು ಸೀರೆಯುಟ್ಟು, ವಿವಿಧ ಭಂಗಿಗಳಲ್ಲಿ ರಚ್ಚು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು, ಈ ಫೋಟೋಗಳನ್ನ ಸ್ವತಃ ರಚಿತಾ ರಾಮ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪೋಟೋಸ್ ವೈರಲ್ ಆಗಿದೆ.
ಈ ಫೋಟೋಸ್ ನೋಡಿದ ನೆಟ್ಟಿಗನೊಬ್ಬ ಅವಳ ನಗುವ ವರ್ಣಿಸಿ ಬರೆಯಲು ಕುಳಿತೇ ಆದ್ರೇ ವರ್ಣಿಸಲು ಪದಗಳೇ ಸಿಗದೇ ನಾ ಸೋತೆ... ಅವಳು ನಗುವಿನಲ್ಲಿ ಅಷ್ಟೊಂದು ಶ್ರೀಮಂತೆ ಎಂದು ಕಾಮೆಂಟ್ ಹಾಕಿದ್ದಾನೆ.
ರಚಿತಾ ರಾಮ್ ಅವರ ಈ ಒಂದಷ್ಟು ಫೋಟೋಗಳನ್ನ ನೋಡಿದ ಫ್ಯಾನ್ಸ್ ನಿಮ್ಮನ್ನ ಈ ಲುಕ್‌ನಲ್ಲಿ ನೋಡುತ್ತಿದ್ರೆ ಟೆಂಪ್ರೆಚರ್ ಏರುತ್ತೆ ಎಂದಿದ್ದಾರೆ. ಅಲ್ಲದೇ ನಿಮ್ಮ ಮುಂದಿನ ಸಿನಿಮಾ ಯಾವುದು ಅನ್ನೋದೇ ಅವರ ಪ್ರಮುಖ ಪ್ರಶ್ನೆ ಆಗಿದೆ. ಆ ಲೆಕ್ಕದಂತೆ ರಚಿತಾ ರಾಮ್ ಅವರ ಮುಂದಿನ ಚಿತ್ರ ಸಂಜು ವೆಡ್ಸ್ ಗೀತಾ-2 ಅನ್ನೋದು ಈಗಾಗಲೇ ತಿಳಿದಿದೆ.
ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ವೀಣಾ ಹೆಸರಿನ ಪಾತ್ರದ ಮೂಲಕ ಅಭಿಷೇಕ್ ಅಂಬರೀಶ್‌ಗೆ ಸಾಥ್ ಕೊಟ್ಟಿದ್ದಾರೆ. ಇದೇ ನವೆಂಬರ್-24 ರಂದು ಎಲ್ಲೆಡೆ ಈ ಸಿನಿಮಾ ರಿಲೀಸ್ ಆಗುತ್ತಿದೆ.
ರಚಿತಾ 2013 ರಲ್ಲಿ ಬುಲ್‌ಬುಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಡೈಲಾಗ್ ಡೆಲಿವರಿ ಶೈಲಿ, ವ್ಯಕ್ತಿತ್ವ ಮತ್ತು ಅಭಿನಯದಿಂದ ಅನೇಕ ಜನರು ಪ್ರಭಾವಿತರಾಗಿದ್ದರು. ಅವರು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದರು. ರಚಿತಾ ಬ್ಯೂಟಿಗೆ ಸಾವಿರಾರು ಅಭಿಮಾನಿಗಳು ಮರುಳಾಗಿದ್ದಾರೆ.