Published : Feb 07, 2024, 09:01 AM ISTUpdated : Feb 07, 2024, 09:03 AM IST
ಕನ್ನಡ ಚಿತ್ರರಂಗ ನಿರ್ಮಾಪಕ ರಾಮ್ ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾ ದರ್ಶನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ಜೊತೆ ನಟಿಸುವ ಅವಕಾಶ ಆರಾಧನಾಗೆ ಸಿಕ್ಕಿತ್ತು.
ಚಂದನವನದ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
27
ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಮಾಲಾಶ್ರಿ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದ ರಾಮು ಅವರ ಮುದ್ದಿನ ಮಗಳು ಈ ಆರಾಧನಾ ರಾಮ್.
37
ಆರಾಧನಾ ರಾಮ್‌ಗೆ ಹದಿಮೂರು ವರ್ಷವಾಗಿದ್ದಾಗಲೇ ಸಿನಿಮಾರಂಗದ ಕುರಿತು ಆಸಕ್ತಿ ಇತ್ತು. ಮಗಳ ಸಿನಿ ಪ್ರೀತಿಗೆ ಹೆತ್ತವರು ನಿರೇರೆದಿದ್ದರು. ಮುಂಬೈನಲ್ಲಿ ಎರಡು ವರ್ಷ ನಟನಾ ತರಬೇತಿ ಪಡೆದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
47
ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ.
57
ಲೋ ಕಟ್ ಬ್ಲೌಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಆರಾಧನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋಗೆ ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯಾಗಿದೆ.
67
ಫೋಟೋ ನೋಡಿದ ನೆಟ್ಟಿಗರು, ನಿಮ್ ಅಮ್ಮ ಈಗಲೂ ನಂಗೆ Favourite ಕನಸಿನ ರಾಣಿ, ಕನ್ನಡಕ್ಕೆ ಅದ್ಭುತ ನಟಿ ಸಿಕ್ಕಿದ್ದಾರೆ, ಪ್ರಭಾ ಕ್ಯೂಟ್, ಜೂನಿಯರ್ ಮಾಲಾಶ್ರೀ, ಮೈತುಂಬಾ ಬಟ್ಟೆ ಹಾಕೋದು ಕಲ್ತ್ಕೊಳ್ಳಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
77
ಕಾಟೇರ ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿರುವ ಆರಾಧನಾ ಕನ್ನಡದ ಭರವಸೆಯ ನಟಿಯಾಗಿದ್ದು, ಇದೀಗ ಮಾಲಾಶ್ರೀ ಮಗಳಿಗೆ ಸಾಲು ಸಾಲು ಸಿನಿಮಾ ಆಫರ್ ಕೂಡ ಬರ್ತಿದೆ.