ಬೋಲ್ಡ್‌ ಅವತಾರದಲ್ಲಿ ಮಿಂಚಿದ ಕಾಟೇರ ಬ್ಯೂಟಿ ಆರಾಧನಾ: ಯಂಗ್ ಮಾಲಾಶ್ರೀಯನ್ನ ನೋಡಿದಂಗಾಯ್ತು ಎಂದ ಫ್ಯಾನ್ಸ್‌!

First Published | Feb 10, 2024, 11:45 AM IST

ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಕಾಟೇರ ಚಿತ್ರದಲ್ಲಿ ಒಳ್ಳೆಯ ಅಭಿನಯ ಮಾಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಭೇಷ್ ಕೂಡ ಎನಿಸಿಕೊಂಡಿದ್ದಾರೆ. ಇದೀಗ ಆರಾಧನಾ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ನ ಕಾಟೇರ ಚಿತ್ರದ ನಾಯಕಿ ಆರಾಧನಾ ರಾಮ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಕೊಂಚ ಬೋಲ್ಡ್ ಅನಿಸೋ ಈ ಫೋಟೋ ಶೂಟ್‌ನಲ್ಲಿ ಯಂಗ್ ಮಾಲಾಶ್ರೀ ಅವರನ್ನ ನೋಡಿದ ಹಾಗೆ ಆಗುತ್ತದೆ.

ಕಾಟೇರ ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರೋ ಆರಾಧನಾ ರಾಮ್ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಆದ್ಮೇಲೆ ಬೇರೆ ಸಿನಿಮಾ ಒಪ್ಪಿರೋ ಬಗ್ಗೆ ಸದ್ಯ ಯಾವುದೇ ಸುದ್ದಿ ಇಲ್ಲ ಬಿಡಿ. ಆದರೆ ಆರಾಧನಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್.

Tap to resize

ಕಾಟೇರ ಸಿನಿಮಾ ಬರೋ ಮೊದಲು ಆರಾಧನಾ ಸಿಂಪಲ್ ಫೋಟೋಗಳನ್ನ ತಮ್ಮ ಪೇಜ್‌ನಲ್ಲಿ ಹಾಕುತ್ತಿದ್ದರು. ಚಿತ್ರ ಬಂದು ಹಿಟ್ ಆದ್ಮೇಲೆ ಆರಾಧನಾ ಹೊಸ ರೀತಿಯ ಫೋಟೋಗಳನ್ನ ಅಪ್‌ಲೋಡ್ ಮಾಡಿದ್ದಾರೆ. ಮೊನ್ನೆ ಮೊನ್ನೆ ಸ್ವಲ್ಪ ಹಾಟ್ ಅನಿಸೋ ಫೋಟೋಗಳನ್ನ ಶೇರ್ ಮಾಡಿದ್ದರು.

ಇದೀಗ ಆರಾಧನಾ ಫೋಸ್ಟ್ ಮಾಡಿರೋ ಫೋಟೋಗಳು ವಿಭಿನ್ನವಾಗಿಯೇ ಇವೆ. ಸಹಜವಾಗಿಯೇ ತೆಗೆದಿರೋ ಫೋಟೋಗಳ ರೀತಿನೇ ಈ ಎಲ್ಲ ಫೋಟೋಗಳು ಇರೋದು ವಿಶೇಷ ಅನಿಸುತ್ತದೆ. ಸಹಜ ಲೈಟ್‌ಗಳಲ್ಲಿ ತೆಗೆದಿರೋ ಫೋಟೋಗಳು ಇವು ಅಂತಲೂ ಫೀಲ್ ಆಗುತ್ತದೆ.

ತುಂಬಾನೆ ಇಂಟ್ರಸ್ಟಿಂಗ್ ಆಗಿರೋ ಆರಾಧನಾ ಫೋಟೋಗಳನ್ನ ನೋಡಿದ ನೆಟ್ಟಿಗರು ಖುಷಿಪಟ್ಟಿದ್ದಾರೆ. ಅದರಲ್ಲೊಬ್ಬ ನೆಟ್ಟಿಗ ಮಾಲಾಶ್ರೀ ಮ್ಯಾಡಂ ರೀತಿನೇ ಕಾಣ್ತಾಯಿದ್ದೀಯಾ ಅಕ್ಕ ಅಂತಲೇ ಕಾಮೆಂಟ್ ಮಾಡಿದ್ದಾನೆ. ಇನ್ನೂ ಕೆಲವರು ಬ್ಯೂಟಿಫುಲ್ ಅಂತ ಹೇಳಿದ್ದಾರೆ.

ಸದ್ಯ ಕಾಟೇರ ಚಿತ್ರದ ಹಾಡಿಗೆ ಸಣ್ಣ ಆಗಿದ್ದ ಆರಾಧನಾ ಈಗಲೂ ಹಾಗೆ ಇದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡಿ ದೇಹವನ್ನ ದಂಡಿಸಿದ್ದಾರೆ. ಈ ಮೂಲಕ ತಮ್ಮ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

Latest Videos

click me!