Daisy Bopanna: ಲಂಗ ದಾವಣಿ ಧರಿಸಿ ಪೋಸ್‌ ನೀಡಿದ ಗಾಳಿಪಟ ನಟಿಯ ಫೋಟೋ ವೈರಲ್‌!

Published : Feb 09, 2024, 04:24 PM IST

ಗಾಳಿಪಟ ಸಿನಿಮಾ ಖ್ಯಾತಿಯ  ನಟಿ ಡೈಸಿ ಬೋಪಣ್ಣ (Daisy Bopanna) ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಲಂಗ ದಾವಣಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಟ್ರೆಡಿಷನಲ್‌ ಲುಕ್‌ ಸಖತ್‌ ವೈರಲ್‌ ಆಗಿದೆ. 

PREV
18
Daisy Bopanna: ಲಂಗ ದಾವಣಿ ಧರಿಸಿ ಪೋಸ್‌ ನೀಡಿದ ಗಾಳಿಪಟ ನಟಿಯ ಫೋಟೋ ವೈರಲ್‌!
Daisy Bopanna

ಸಿನಿಮಾಗಳಿಂದ ದೂರವುಳಿದಿದ್ದರೂ ಸೋಶಿಯಲ್‌ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಕನೆಕ್ಟ್‌ ಆಗಿರುವ ನಟಿ  ಡೈಸಿ ಬೋಪಣ್ಣ ತಮ್ಮ ಹೊಸ ಪೋಸ್ಟ್‌ನಲ್ಲಿ ಲಂಗ ದಾವಣಿ ಧರಿಸಿ ಪೋಸ್‌ ನೀಡಿದ್ದಾರೆ.

28
Daisy Bopanna

ಜರಿ ಲಂಗ ಮತ್ತು ದಾವಣಿಯ ಜೊತೆ   ಪಫ್‌ ಬ್ಲೌಸ್‌ ಪೇರ್‌ ಕೊಂಡು ಮ್ಯಾಚಿಂಗ್‌ ಬಳೆಗಳನ್ನು ಧರಿಸಿರುವ ಡೈಸಿ ವಿವಿಧ ಪೋಸ್‌ಗಳನ್ನ ಧರಿಸಿದ್ದಾರೆ. ತಮ್ಮ ನೆಚ್ಚಿನ ನಟಿಯ ಟ್ರೆಡಿಷನಲ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

38
Daisy Bopanna

ಫೋಟೋಗಳ ಜೊತೆ ಲಂಗ ದಾವಣಿ ಮತ್ತು ಬೆಂಗಳೂರಿನ ನಂಟು ಹಾಗೂ ಡೈಸಿ ಅವರು ತಮ್ಮ ಅಜ್ಜಿಯ ನೆನಪುಗಳನ್ನು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ .

48
Daisy Bopanna

'ಲಂಗ ದಾವಣಿ , ಬೆಂಗಳೂರಿನಲ್ಲಿ  ನಾನು ಬೆಳೆಯುತ್ತಿರುವಾಗ  ಇವುಗಳನ್ನು ನಾನು ಬಹಳಷ್ಟು ಧರಿಸುತ್ತಿದ್ದೆ. ನನ್ನ ಅವ್ವ (ಅಜ್ಜಿ) ಹೊಸ ಲಂಗ ಗಲೀಜು ಮಾಡ್ಕೊಂಡ್ಬೇಡ  ಎಂದು ಹೇಳುವುದು ಇನ್ನೂ ನನ್ನ ಕಿವಿಯಲ್ಲಿ ಕೇಳುತ್ತಿದೆ ಮತ್ತು ಆ ಗಾಜಿನ ಬಳೆಗಳ ಸದ್ದು ಕೂಡ' ಎಂದು ಡೈಸಿ ಪೋಟೋಗಳ ಜೊತೆ ಬರೆದಿದ್ದಾರೆ. 

58
Daisy Bopanna

ಮೂಲತಃ ಕೊಡಗಿನವರಾದ ಡೈಸಿ ಬೋಪಣ್ಣ  ಅವರು  ಬಿಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.  ಸ್ಟೈಸಿ ಗರ್ಲ್‌' ಎಂದೇ ಹೆಸರು ಪಡೆದುಕೊಂಡ ನಟಿ  ಚಿತ್ರಕಲಾ ಪರಿಷತ್‌ನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

68
Daisy Bopanna

ಬೋಲ್ಡ್ ಅಂಡ್ ಗ್ಲಾಮರಸ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ  ಕೊನೆಯದಾಗಿ 2012ರ ಕ್ರೇಜಿ ಲೋಕ ಸಿನಿಮಾದಲ್ಲಿ ಕಾಣಿಸಿಕೊಂಡರು.  

78
Daisy Bopanna

ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಡೈಸಿ ಅವರು ಹೆಚ್ಚು ಸಾಧಿಸಿದಲ್ಲೂ ಸಾಧ್ಯವಾಗಲಿಲ್ಲ. ಕನ್ನಡದ ಜೊತೆ ಇವರು ಹಿಂದಿ, ತಮಿಳು ಮತ್ತು  ತೆಲಗು ಭಾಷೆಗಳಲ್ಲೂ ಮಿಂಚಿದ್ದಾರೆ. 

88
Daisy Bopanna

ಸುಮಾರು 10 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಈಗ  ದಾಂಪತ್ಯ  ಜೀವನ ನಡೆಸುತ್ತಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

Read more Photos on
click me!

Recommended Stories