ನಟಿ ಮಾಧವಿ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ…. ಎಲ್ಲಿದ್ದಾರೆ ಈ ಸ್ಟಾರ್ ನಟಿ

Published : Dec 26, 2025, 06:28 PM IST

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ಸ್ಟಾರ್ ನಟಿ ಮಾಧವಿ ತಮ್ಮ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಿಸಿದ್ದಾರೆ. ಕ್ರಿಸ್ಮಸ್ ಸಂಭ್ರಮದ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ.

PREV
15
ನಟಿ ಮಾಧವಿ

90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟಿ, ವಿದೇಶದಲ್ಲಿ ನೆಲೆಸಿದ್ದು, ಇದೀಗ ಕ್ರಿಸ್ಮಸ್ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

25
ಫ್ಯಾಮಿಲಿ ಫೋಟೊ ವೈರಲ್

ನಟಿ ಮಾಧವಿ ಸೋಶಿಯಲ್ ಮೀಡಿಯಾದಲ್ಲಿ ಪರಿ ಹಾಗೂ ಮೂವರು ಮಕ್ಕಳ ಜೊತೆಗೆ ಫೋಟೊಗಳನ್ನು ಶೇರ್ ಮಾಡಿದ್ದು Here’s wishing you a Merry Christmas and a Happy & Healthy 2026! ಎನ್ನುತ್ತಾ, ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

35
ಮಾಧವಿ ಪತಿ ಯಾರು?

ನಟಿ ಮಾಧವಿ ಮೂಲತಃ ಹೈದರಾಬಾದಿನವರು. ಇವರು 1996ರಲ್ಲಿ ರಾಲ್ಫ್ ಎನ್ನುವವರನ್ನು ಮದುವೆಯಾದರು. ಮಾಧವಿ ಅವರ ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ರಾಮ ತಮ್ಮ ಫಾಲೋವರ್ಸ್‌ನಲ್ಲಿ ಒಬ್ಬರಾದ ಹುಡುಗರನ್ನು ಮಾಧವಿಗೆ ನಿಶ್ಚಯಿಸಿದರು. ರಾಲ್ಫ್ ಶರ್ಮಾ ಔಷಧೀಯ ಉದ್ಯಮಿಯಾಗಿದ್ದು, 1995ರಲ್ಲಿ ಮಾಧವಿ ಭೇಟಿ ಮಾಡಿ, 1996ರಲ್ಲಿ ಸಪ್ತಪದಿ ತುಳಿದಿದ್ದಾರೆ.

45
ಎಲ್ಲಿ ನೆಲೆಸಿದ್ದಾರೆ ಮಾಧವಿ

ಮದುವೆಯಾದ ಬಳಿಕ ಮಾಧವಿ ತಮ್ಮ ಪತಿ ಮತ್ತು ಫ್ಯಾಮಿಲಿ ಜೊತೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಮಾಧವಿ ಮತ್ತು ರಾಲ್ಫ್‌ ಅವರಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಪ್ರಿಸ್ಸಿಲ್ಲಾ,ಎವೆಲಿನ್, ಟಿಫಾನಿ ಎಂದು ಹೆಣ್ಣು ಮಕ್ಕಳಿಗೆ ಹೆಸರಿಟ್ಟಿದ್ದಾರೆ. ನಟಿ ಹೆಚ್ಚಾಗಿ ತಮ್ಮ ಮುದ್ದಾದ ಫ್ಯಾಮಿಲಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

55
ಮಾಧವಿ ನಟಿಸಿದ ಸಿನಿಮಾಗಳು

ಮಾಧವಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಹಾಲು ಜೇನು, ಭಾಗ್ಯದ ಲಕ್ಷ್ಮಿಬಾರಮ್ಮ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡ ಹುಟ್ಟಿದವರು, ಘರ್ಜನೆ, ಅನುಪಮ, ಮಲಯ ಮಾರುತ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories