ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಶರತ್ ಕುಮಾರ್ ಪತ್ನಿ ನಟಿ ರಾಧಿಕಾ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅದುವೇ ಮಹಿಳಾ ಕಲಾವಿದರು ಬಳಸುವ ವ್ಯಾನಿಟಿಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿರುವುದು.
27
'ನಾನು ಕೇರಳದಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಅಂದು ಶೂಟಿಂಗ್ ಸೆಟ್‌ನಲ್ಲಿ ಇದ್ದ ಕೆಲವು ಹುಡುಗರು ಮೊಬೈಲ್‌ನಲ್ಲಿ ಏನೋ ನೋಡಿಕೊಂಡು ನಗುತ್ತಿದ್ದರು. ಆಗ ನನಗೆ ಅನುಮಾನ ಹುಟ್ಟಿಕೊಂಡಿತ್ತು'
37
'ಅನುಮಾನದಿಂದ ನಾನು ಆಕಡೆಯಿಂದ ಈ ಕಡೆಗೆ ಓದಾಡಿಕೊಂಡು ಹೋಗಿ ನೋಡಿದೆ ಅವರ ಬಳಿ ಮೊಬೈಲ್ ಇತ್ತು, ಅದನ್ನು ನೋಡುತ್ತಿದ್ದರು. ಅದು ವಿಡಿಯೋ ಆಗಿತ್ತು' ಎಂದು ಖಾಸಗಿ ಸಂದರ್ಶನದಲ್ಲಿ ರಾಧಿಕಾ ಹೇಳಿದ್ದಾರೆ.
47
'ಇದರ ಬಗ್ಗೆ ನಾನು ಒಬ್ಬರ ಬಳಿ ವಿಚಾರಿಸಿದೆ. ಅವರ ಮಾತುಳನ್ನು ಕೇಳಿ ನಾನು ಶಾಕ್ ಆಗಿಬಿಟ್ಟೆ. ಮಹಿಳಾ ಕಲಾವಿದರು ಬಳಸುವ ವ್ಯಾನಿಟಿ ವ್ಯಾನ್‌ನಲ್ಲಿ ಅವರು ಹಿಡನ್ ಕ್ಯಾಮೆರಾ ಅಳವಡಿಸಿದ್ದರಂತೆ'
57
'ಆ ಕ್ಯಾಮೆರಾ ಮೂಲಕ ನಾವೆಲ್ಲರೂ ಬಟ್ಟೆ ಬದಲಾಯಿಸುವುದನ್ನು ಹಾಗೂ ಇತರ ಖಾಸಗಿ ಕ್ಷಣಗಳನ್ನು ವಿಡಿಯೋದ ಮೂಲಕ ನೋಡುತ್ತಿದ್ದರಂತೆ. ಅವರು ವಿಡಿಯೋ ಕೂಡ ಅಷ್ಟೇ ಸೇಫ್ ಆಗಿಟ್ಟಿದ್ದರು'
67
'ಯಾವುದೇ ನಟಿಯ ಹೆಸರನ್ನು ಟೈಪ್ ಮಾಡಿದರೂ ತಕ್ಷಣವೇ ಅವರ ವಿಡಿಯೋ ನೋಡಲು ಸಿಗುತ್ತಿತ್ತು. ಆ ದಿನದಿಂದ ವ್ಯಾನಿಟಿ ಬಳಸುವುದನ್ನು ನಿಲ್ಲಿಸಿಬಿಟ್ಟೆ. ಬಟ್ಟೆ ಬದಲಾಯಿಸಲು ಹೋಟೆಲ್ ರೂಮ್‌ಗೆ ಹೋಗುತ್ತೀನಿ'
77
ಈ ವಿಚಾರದ ಬಗ್ಗೆ ತಿಳಿಯುತ್ತಿದ್ದಂತೆ ಚಿತ್ರತಂಡದಲ್ಲಿ ಇದ್ದ ಎಲ್ಲಾ ಮಹಿಳೆಯರಿಗೆ ವ್ಯಾನಿಟಿ ವ್ಯಾನ್ ಬಳಸಬೇಡಿ ಎಂದು ತಕ್ಷಣವೇ ತಡೆದಿದ್ದಾರೆ ರಾಧಿಕಾ ಶರತ್‌ಕುಮಾರ್.