ಚಿತ್ರರಂಗದಲ್ಲಿ ಮಿಂಚಿರುವ ನಟಿ ರಾಧಾ ಮುದ್ದಿನ ಮಗಳ ಕಾರ್ತಿಕಾ ನಾಯರ್ (Karthika Nair) ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿಕೊಂಡ ರಾಧಾ 'ನಮ್ಮ ಪುಟ್ಟ ಮಗಳನ್ನು ಮತ್ತೊಂದು ಕುಟುಂಬಕ್ಕೆ ಕೊಡುತ್ತಿರುವ ಹೆಮ್ಮೆ ನಮಗಿದೆ' ಎಂದು ತಾಯಿ ರಾಧಾ ಬರೆದುಕೊಂಡಿದ್ದಾರೆ.
'ಆ ದೇವರು ನಿನಗೆ ಖುಷಿ ಮತ್ತು ನೆಮ್ಮದಿಯ ಜೀವನ ಕಟ್ಟಿಕೊಡಲಿ. ಇಷ್ಟು ಒಳ್ಳೆಯ ಕುಟುಂಬ ಆಯ್ಕೆ ಮಾಡಿರುವುದಕ್ಕೆ ನಾನು ತುಂಬಾ ಲಕ್ಕಿ'
'ಮದುವೆ ಅಂದ್ರೆ ಎರಡು ಕುಟುಂಬಗಳು ಒಟ್ಟಾಗುವುದು. ನನ್ನ ಮನಸ್ಸಿನಲ್ಲಿ ಅದೆಷ್ಟೋ ಭಾವನೆಗಳು ಓಡಾಡುತ್ತಿದೆ. ನಿನ್ನ ಖುಷಿ ಮತ್ತು ಪ್ರೀತಿ ನನಗೆ ಮುಖ್ಯ'
'ಪ್ರತಿ ತಾಯಿ ಆಸೆ ಪಡುವ ಹೆಮ್ಮೆಯ ಮಗಳು ನೀನು. ನಮ್ಮ ಕುಟುಂಬಕ್ಕೆ ನೀನೇ ಬೆಸ್ಟ್ ಗಿಫ್ಟ್. ನಮಗೆ ಖುಷಿ ಕೊಟ್ಟಿರುವ ಮತ್ತೊಂದು ಕುಟುಂಬದೊಂದ ಚೆನ್ನಾಗಿರು' ಎಂದು ರಾಧಾ ಬರೆದುಕೊಂಡಿದ್ದಾರೆ.