ಮೈಸೂರ್ ಸಿಲ್ಕ್‌ ಸೀರೆ ಧರಿಸಿದ ಗರ್ಭಿಣಿ ಹರ್ಷಿಕಾ ಪೂಣಚ್ಚ; ಪಕ್ಕಾ ರವಿವರ್ಮನ ಬೊಂಬೆ ಎಂದ ನೆಟ್ಟಿಗರು!

First Published | Aug 20, 2024, 1:22 PM IST

ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ ಕೊಡಗಿನ ಸುಂದರಿ ಹರ್ಷಿಕಾ ಪೂಣಚ್ಚ. ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಸುಂದರಿ.....

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಕಪಲ್ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊಣ್ಣನ್ನ ಶೀಘ್ರದಲ್ಲಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ.

ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ನ ಡಿಫರೆಂಟ್ ಆಗಿ ಮಾಡಬೇಕು ಎಂದು ಕೊಡಗಿನ ಸಂಪ್ರದಾಯದಂತೆ ಕೊಡಗಿನ ವಸ್ತ್ರಗಳನ್ನು ಧರಿಸಿ ಇಬ್ಬರು ಕುಟುಂಬದವರು ಶೂಟ್ ಮಾಡಿಸಿದ್ದರು.

Tap to resize

ಅದಾ ಮೇಲೆ ಹರ್ಷಿಕಾ ಯಾವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಸೂಪರ್ ಯಂಗ್ ಬಬ್ಲಿ ಮಾಮ್ ಲುಕ್‌ನಲ್ಲಿ ಸಖತ್ ಗ್ಲೋ ಆಗಿ ಕಾಣಿಸಿಕೊಳ್ಳುತ್ತಿದ್ದರು.

ಇದೀಗ ರವಿವರ್ಮಾ ಪೇಂಟಿಂಗ್ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಪಿಂಕ್ ಬಣ್ಣದ ಮೈಸೂರ್ ಸಿಲ್ಕ್‌ ಸೀರೆಗೆ ಹಸಿರು ಬ್ಲೌಸ್ ಧರಿಸಿದ್ದಾರೆ.

 'ಗ್ರೇಟ್ ರವಿವರ್ಮಾ ಅವರ ಪೇಂಟಿಂಗ್‌ನ ಪ್ರೇರಣೆಯಾಗಿಟ್ಟುಕೊಂಡು ಮಾಡಿರುವ ಫೋಟೋಶೂಟ್. ನನ್ನ ಪೆಟರ್ನಿಟಿ ಶೂಟ್ ಮೂಲಕ ತಾಯಿ ಮಗುವಿನ ನಿರೀಕ್ಷೆಯಲ್ಲಿ ಇರುವುದನ್ನು ತೋರಿಸುತ್ತಿರುವೆ' ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ ಧರಿಸಿರುವ ಪ್ರತಿಯೊಂದು ಆಭರಣವನ್ನು ಕಲ್ಯಾಣ್ ಜ್ಯೂವೆಲ್ಸ್‌ನಲ್ಲಿ ಖರೀದಿಸಿರುವುದು. ಪ್ರಶಾಂತ್‌ ಮೇಕ್‌ಓವರ್‌ ಅವರು ಮೇಕಪ್ ಮಾಡಿರುವುದು.

Latest Videos

click me!