ಜೈಲಿನಲ್ಲಿದ್ದರೂ ನಟಿ ಪವಿತ್ರಾ ಗೌಡ ಧಿಮಾಕು ಕಮ್ಮಿಯಾಗಿಲ್ಲ!

First Published | Aug 19, 2024, 6:24 PM IST

ಬೆಂಗಳೂರು (ಆ.19): ರಕ್ಷಾ ಬಂಧನ ನಿಮಿತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಖಿ ಕಟ್ಟಲು ಆಗಮಿಸಿದ್ದ ಆರ್‌ಎಸ್‌ಎಸ್‌ ಮಹಿಳಾ ಕಾರ್ಯಕರ್ತರಿಗೆ ನಟಿ ಪವಿತ್ರಾ ಗೌಡ ಧಿಮಾಕು ತೋರಿದ್ದಾರೆ ಎನ್ನಲಾಗಿದೆ.

ನಾಡಿನಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಆರ್‌ಎಸ್‌ಎಸ್‌ ಮಹಿಳಾ ಘಟಕದ ಕಾರ್ಯಕರ್ತರು, ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಯರು ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಮಹಿಳಾ ಸದಸ್ಯರು ಜೈಲಿನಲ್ಲಿರುವ ಪುರುಷ ಮತ್ತು ಮಹಿಳಾ ಕೈದಿಗಳಿಗೆ ರಾಖಿ ಕಟ್ಟಲು ತೆರಳಿದ್ದರು.

ಈ ವೇಳೆ ಜೈಲಿನಲ್ಲಿದ್ದ ಎಲ್ಲ ಮಹಿಳಾ ಕೈದಿಗಳು ತಮ್ಮ ಸೆಲ್‌ನಿಂದ ಹೊರಗೆ ಬಂದು ಕೈಗಳಿಗೆ ರಾಖಿಯನ್ನು ಕಟ್ಟಿಸಿಕೊಂಡು, ಸಿಹಿಯನ್ನು ತಿಂದು ರಕ್ಷಾಬಂಧನ ಆಚರಣೆಯಲ್ಲಿ ಪಾಲ್ಗೊಂಡರು.

Tap to resize

ಆದರೆ, ನಟಿ ಪವಿತ್ರಾಗೌಡ ಮಾತ್ರ ರಾಖಿ ಕಟ್ಟಿಸಿಕೊಳ್ಳಲು ಬರುವಂತೆ ಎಷ್ಟೇ ಸೂಚನೆ ನೀಡಿದರೂ, ಸೆಲ್‌ನಿಂದ ಹೊರಗೆ ಬರದೇ ಧಿಮಾಕು ಪ್ರದರ್ಶನ ಮಾಡಿದ್ದಾರೆ ಎಂದು ಆರ್‌ಎಸ್‌ಎಸ್ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದರು.

ಸೋಮವಾರ ಜೈಲುವಾಸಿಗಳ ಜೊತೆ ರಕ್ಷಾ ಬಂಧನ ಹಬ್ಬ ಆಚರಣೆಗೆ ತೆರಳಿದ್ದ ಮಹಿಳೆಯರು, ಮಹಿಳಾ ಜೈಲು ವಾಸಿಗಳಿಗೆ ರಾಖಿ ಕಟ್ಟಿ ಸಿಹಿ ಮತ್ತು ವಸ್ತ್ರ ಹಂಚಿಕೆ ಮಾಡಿದ್ದಾರೆ.

ಇದೇ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಕೈದಿಯಾಗಿರುವ ನಟಿ ಪವಿತ್ರಾ ಗೌಡ ರಾಕಿ ಕಟ್ಟಿಸಿಕೊಳ್ಳಲು ಆಗಮಿಸದೇ ಧಿಮಾಕು ತೋರಿಸಿದ್ದಾರೆ. ತನ್ನ ಕೊಠಡಿಯಿಂದ ಹೊರ ಬರದೆ ಧಿಮಾಕು ತೋರಿಸಿದಕ್ಕೆ ಆರ್.ಎಸ್.ಎಸ್. ಕಾರ್ಯಕರ್ತೆಯರ ಬೇಸರ ತೋರಿಸಿದ್ದಾರೆ.

ಜೈಲಿನಲ್ಲಿ ರಾಖಿ ಕಟ್ಟಿಸಿಕೊಂಡ ವಿಜಯಲಕ್ಷ್ಮೀ ದರ್ಶನ್:
ಆರ್‌ಎಸ್‌ಎಸ್‌ ಮಹಿಳಾ ಕಾರ್ಯಕರ್ತರು ರಾಖಿ ಕಟ್ಟಲು ಜೈಲಿನೊಳಗೆ ಹೋದಾಗ ನಟಿ ಪವಿತ್ರಾ ಗೌಡ ಹೊರಗೆ ಬರದಿದ್ದರೂ, ಇದೇ ವೇಳೆ ಗಂಡನನ್ನು ಭೇಟಿಯಾಗಲಿ ಜೈಲಿನೊಳಗೆ ಆಗಮಿಸಿದ್ದ ನಟ ದರ್ಶನ್ ಭೇಟಿ ಮಾಡಲು ಬಂದಿದ್ದ ವಿಜಯಲಕ್ಷ್ಮೀ ದರ್ಶನ್ ಅವರು ರಾಖಿಯನ್ನು ಕಟ್ಟಿಸಿಕೊಂಡು ಸಿಹಿ ಪಡೆದು ಸಂತಸ ವ್ಯಕ್ತಪಡಿಸಿದರು.

Vijayalakshmi Darshan Vineesh

ವಿಜಯಲಕ್ಷ್ಮಿ ದರ್ಶನ್ ಅವರು ರಾಖಿ ಕಟ್ಟಿಸಿಕೊಂಡು ಸಿಹಿ ತಿಂದಿದ್ದೂ ಅಲ್ಲದೇ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದರು. ಹೀಗಾಗಿ, ವಿಜಯಲಕ್ಷ್ಮೀ ನಡೆಗೆ ಮಹಿಳಾ ಕಾರ್ಯಕರ್ತೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಯಿಯೊಂದಿಗೆ ಅಪ್ಪ ದರ್ಶನ್‌ನನ್ನು ನೋಡಲು ಬಂದಿದ್ದ ಮಗ ವಿನೀಶ್ ಕೂಡ ಆರ್‌ಎಸ್‌ಎಸ್ ಮಹಿಳಾ ಕಾರ್ಯಕರ್ತರಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಅವರ ಜೊತೆ ಮಾತನಾಡಿದ್ದು, ತುಂಬಾ ಖುಷಿಯಾಯಿತು. ರಕ್ಷಾ ಬಂಧನ ಹಬ್ಬ ಆಚರಣೆಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದ ಯುವತಿ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡರು.

Latest Videos

click me!