ಪುತ್ರಿ ಜೊತೆ ಧರ್ಮಸ್ಥಳ ಮಂಜುನಾಥನ ದರ್ಶನ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ರಾಖಿ ಕಟ್ಟಿದ ನಟಿ ಶ್ರುತಿ

First Published | Aug 20, 2024, 12:23 PM IST

ಚಂದನವನದ ಹಿರಿಯ ನಟಿ ಶ್ರುತಿ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದು, ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ರಕ್ಷಾಬಂಧನ ಕಟ್ಟುವ ಮೂಲಕ ವಿಶೇಷವಾಗಿ ರಕ್ಷಾಬಂಧನ ಆಚರಿಸಿದ್ದಾರೆ. 
 

ಚಂದನವನ ಹಿರಿಯ ನಟಿ ಶೃತಿ ಕೃಷ್ಣ (Shruthi Krishna) ರಕ್ಷಾ ಬಂಧನದ ಹಿನ್ನೆಲೆಯಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊಗಳು ವೈರಲ್ ಆಗುತ್ತಿವೆ. 
 

ನಟಿ ಶೃತಿ ತಮ್ಮ ಪುತ್ರಿ ಗೌರಿ ಜೊತೆ ನೂಲ ಹುಣ್ಣಿಮೆಯಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಶ್ರೀಮಂಜುನಾಥನ ದರ್ಶನ ಪಡೆದಿದ್ದಾರೆ. ಇದರ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನೂ(Veerendra Hegde) ಸಹ ಭೇಟಿ ಮಾಡಿದ್ದಾರೆ. 
 

Tap to resize

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಂಜುನಾಥನ ದರ್ಶನ ಪಡೆದ, ನಟಿ ಶ್ರುತಿ, ಬಳಿಕ ವೀರೇಂದ್ರ ಹೆಗ್ಗಡೆಯವರ ಕೈಗೆ ರಾಖಿ ಕಟ್ಟಿ, ವರ ಆಶೀರ್ವಾದ ಪಡೆಯುವ ಮೂಲಕ ವಿಶೇಷವಾಗಿ ರಕ್ಷಾಬಂಧನವನ್ನ(Raksha Bandhan) ಆಚರಿಸಿದ್ದಾರೆ. 
 

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವ ನಟಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗು ಪೂಜ್ಯರ ಆಶೀರ್ವಾದ ಪಡೆದು, ನೆನ್ನೆ ರಕ್ಷಾ ಬಂಧನದ ದಿನ ಅವರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಮಂಜುನಾಥ ನಿಮ್ಮೆಲ್ಲರಿಗೂ ಒಳ್ಳೆದನ್ನ ಮಾಡಲಿ ಎಂದು ಬರೆದುಕೊಂಡಿದ್ದಾರೆ. 
 

ತಮ್ಮ ಮಗಳು ಗೌರಿ ಜೊತೆಗೆ ಮಂಜುನಾಥನ ಸನ್ನಿಧಿಯ ಫೋಟೊಗಳು ಹಾಗೂ ಪೂಜ್ಯ ಖಾವಂದರ ಜೊತೆ ತಾಯಿ ಮಗಳು ಜೊತೆಯಾಗಿ ನಿಂತುಕೊಂಡಿರುವ ಫೋಟೊಗಳನ್ನು ಶ್ರುತಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
 

ಶ್ರುತಿ ಕರಿಯರ್ ಬಗ್ಗೆ ಹೇಳೋದಾದ್ರೆ ಇವತ್ತಿಗೂ ಸಿನಿಮಾಗಳಲ್ಲಿ ಬ್ಯುಸಿ ಇವರು. ಕೊನೆಯದಾಗಿ ಕಾಟೇರ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು. ಅಲ್ಲದೇ ಸದ್ಯ ಗಿಚ್ಚಿ ಗಿಲಿಗಿಲಿ (Gicchi Giligili) ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಸಹ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಶ್ರುತಿ ಮಗಳು ಗೌರಿ ಸಿನಿಮಾದಲ್ಲಿ ಇರಲ್ಲದೇ ಇದ್ದರೂ ಸಹ ಇಂಟರ್ನೆಟ್ ನಲ್ಲಿ ಸದಾ ಇವರ ಹವಾ ಇದ್ದೆ ಇರುತ್ತೆ, ಇವರ ಹಾಡುಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಸಹ ಇದ್ದಾರೆ. 
 

Latest Videos

click me!