ಅವಕಾಶಕ್ಕಾಗಿ ಕೀಳು ಮಟ್ಟಕ್ಕೆ ಇಳಿದಿಲ್ಲ: ನೆಟ್ಟಿಗನಿಗೆ ಖಡಕ್ ಉತ್ತರ ಕೊಟ್ಟ ಚೈತ್ರಾ ಆಚಾರ್‌

Published : Dec 20, 2024, 04:51 PM IST

ಅವಕಾಶಕ್ಕಾಗಿ ಲೈಂಗಿಕತೆಯಂಥಾ ಕೀಳುಮಟ್ಟಕ್ಕೆ ಇಳಿಯುವ ಪ್ರಶ್ನೆಯೇ ಬರೋದಿಲ್ಲ. ಇಂಥಾ ದಿಟ್ಟ ಮಾತು ಹೇಳಿದ್ದು ಚೈತ್ರಾ ಆಚಾರ್.

PREV
17
ಅವಕಾಶಕ್ಕಾಗಿ ಕೀಳು ಮಟ್ಟಕ್ಕೆ ಇಳಿದಿಲ್ಲ: ನೆಟ್ಟಿಗನಿಗೆ ಖಡಕ್ ಉತ್ತರ ಕೊಟ್ಟ ಚೈತ್ರಾ ಆಚಾರ್‌

‘ನನಗೆ ಸಾಕಷ್ಟು ಪ್ರತಿಭೆ ಇದೆ. ಆ ಪ್ರತಿಭೆಯ ಬಲದಿಂದ ಒಳ್ಳೊಳ್ಳೆ ಅವಕಾಶ ಪಡೆಯುವ ಆತ್ಮವಿಶ್ವಾಸ ಇದೆ. ಹೀಗಿರುವಾಗ ಅವಕಾಶಕ್ಕಾಗಿ ಲೈಂಗಿಕತೆಯಂಥಾ ಕೀಳುಮಟ್ಟಕ್ಕೆ ಇಳಿಯುವ ಪ್ರಶ್ನೆಯೇ ಬರೋದಿಲ್ಲ.’

27

- ಇಂಥಾ ದಿಟ್ಟ ಮಾತು ಹೇಳಿದ್ದು ಚೈತ್ರಾ ಆಚಾರ್. ಸೋಷಿಯಲ್ ಮೀಡಿಯಾದಲ್ಲಿ ಅವರು ಒಂದು ಕೀಳು ಪ್ರಶ್ನೆಗೆ ದಿಟ್ಟವಾಗಿ ಉತ್ತರಿಸಿದ್ದಾರೆ.

37

ಇದೇ ವೇಳೆ ಕೊಂಚ ಅಸಭ್ಯವಾಗಿ ನೆಟ್ಟಿಗರೊಬ್ಬರು, ‘ವರ್ಜಿನಿಟಿ ಕಳೆದುಕೊಂಡದ್ದು ಹೇಗೆ? ಅನುಭವ ಹೇಗಿತ್ತು?’ ಎಂದು ಕೇಳಿದ ಪ್ರಶ್ನೆಗೂ ಚೈತ್ರಾ ಬೋಲ್ಡ್‌ ಆಗಿಯೇ ಉತ್ತರ ನೀಡಿದ್ದಾರೆ. 

47

‘ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಇರುತ್ತಾರೆ. ಅಥವಾ ಅಕ್ಕ, ತಂಗಿಯರು ಇರುತ್ತಾರೆ. ಅವರ ಬಳಿ ಈ ಕುರಿತ ವಿವರ ಪಡೆದುಕೊಳ್ಳಿ’ ಎಂದು ಉತ್ತರಿಸಿದ್ದಾರೆ.

57

ಸದ್ಯ ಚೈತ್ರಾ ಆಚಾರ್‌ ತಮಿಳಿನಲ್ಲಿ ನಟ ಸಿದ್ದಾರ್ಥ ಜೊತೆಗೆ ಒಂದು ಸಿನಿಮಾಕ್ಕೆ ನಾಯಕಿಯಾಗಿದ್ದಾರೆ. ಕನ್ನಡದಲ್ಲೂ ಒಂದೆರಡು ಚಿತ್ರಗಳು ಅವರ ಕೈಯಲ್ಲಿವೆ.

67

ಕಿರುತೆರೆ ನಟ ರಿತ್ವಿಕ್‌ ಮತ್ತು ‘ಟೋಬಿ’ ಖ್ಯಾತಿಯ ಚೈತ್ರಾ ಜೆ ಆಚಾರ್‌ ನಾಯಕ, ನಾಯಕಿಯಾಗಿರುವ ಹೊಸ ಸಿನಿಮಾ ‘ಮಾರ್ನಮಿ’ಯ ಟೈಟಲ್ ಟೀಸರ್‌ ಬಿಡುಗಡೆಯಾಗಿದೆ. ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

77

‘ಕಥೆ ಬಹಳ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಶಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ಸಿನಿಮಾ ಬಗ್ಗೆ ಎಕ್ಸೈಟ್ ಆಗಿದ್ದೇನೆ’ ಎಂದರು ನಟಿ ಚೈತ್ರಾ ಆಚಾರ್‌.

Read more Photos on
click me!

Recommended Stories