ತೇಜಸ್ವಿ ಸೂರ್ಯ ತೋಳಲ್ಲಿ ಅಮೂಲ್ಯಾ ಮಕ್ಕಳು; ಫೋಟೋ ವೈರಲ್

Published : Nov 16, 2022, 01:29 PM IST

ಅಮೂಲ್ಯಾ ದಂಪತಿ ಮನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಅಮೂಲ್ಯಾ ಅವರ ಮದ್ದಾದ ಮಕ್ಕಳನ್ನು ತೇಜಸ್ವಿ ಸೂರ್ಯ ಎತ್ತಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

PREV
16
ತೇಜಸ್ವಿ ಸೂರ್ಯ ತೋಳಲ್ಲಿ ಅಮೂಲ್ಯಾ ಮಕ್ಕಳು; ಫೋಟೋ ವೈರಲ್

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಇತ್ತೀಚಿಗಷ್ಟೆ ತಮ್ಮ ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದರು. ನವೆಂಬರ್ 10ರಂದು ಖಾಸಗಿ ಹೋಟೆಲ್ ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಸ್ಯಾಂಡಲ್ ವುಡ್‌ನ ಅನೇಕ ಗಣ್ಯರು ಹಾಜರಿದ್ದರು. ಅಮೂಲ್ಯಾ ಮಕ್ಕಳ ನಾಮಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

26

ಅಮೂಲ್ಯಾ ದಂಪತಿ ಮುದ್ದಾದ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲ ಡಾರ್ಲಿಂಗ್ ಕೃಷ್ಣ ಜೋಡಿ, ಗಣೇಶ್ ದಂಪತಿ, ಅಜಯ್ ರಾವ್, ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿಯಾಗಿದ್ದರು. ನಾಮಕರಣ ಸಂಭ್ರಮದಲ್ಲಿ ಅಥರ್ವ್ ಮತ್ತು ಆಧವ್ ಇಬ್ಬರೂ ಸುಂದರವಾಗಿ ಕಂಗೊಳಿಸಿದ್ದರು. 

36

ಅಂದಹಾಗೆ ಅಮೂಲ್ಯಾ ದಂಪತಿ ಮನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಅಮೂಲ್ಯಾ ಮಕ್ಕಳ ನಾಮಕರಣ ಸಮಾರಂಭಕ್ಕೆ ಹಾಜರಾಗದ ತೇಜಸ್ವಿ ಸೂರ್ಯ ನೇರವಾಗಿ ಅಮೂಲ್ಯಾ ದಂಪತಿ ಮನೆಗೆ ಭೇಟಿ ನೀಡಿದ್ದರು. ಅಮೂಲ್ಯಾ ದಂಪತಿ ಜೊತೆ ಇರುವ ತೇಜಸ್ವಿ ಸೂರ್ಯ ಫೋಟೋ ವೈರಲ್ ಆಗಿದೆ. 

46

ಇಬ್ಬರೂ ಮದ್ದಾದ ಮಕ್ಕಳನ್ನು ತೇಜಸ್ವಿ ಸೂರ್ಯ ಎತ್ತಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತೇಜಸ್ವಿ ಸೂರ್ಯ ತೋಳಲ್ಲಿ ಇರುವ ಮುದ್ದಾದ ಅಮೂಲ್ಯಾ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಥರ್ವ್ ಮತ್ತು ಆಧವ್ ಜೊತೆ ಕೆಲ ಸಮಯ ಕಳೆದ ತೇಜಸ್ವಿಸೂರ್ಯ ಮಕ್ಕಳನ್ನು ಮುದ್ದಾಡಿದ್ದಾರೆ. 

56

ತೇಜಸ್ವಿ ಸೂರ್ಯ ಜೊತೆ ಅಮೂಲ್ಯಾ ದಂಪತಿ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಮೂಲ್ಯಾ - ಜಗದೀಶ್ ಕುಟುಂಬದ ಜೊತೆ ತೇಜಸ್ವಿಸೂರ್ಯ ಕೆಲ ಸಮಯ ಮಾತುಕತೆ ನಡಿಸಿ ಬಳಿಕ ಹೊರಟು ಹೋಗಿದ್ದಾರೆ. ಇದೀಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

66

ನಟಿ ಅಮೂಲ್ಯಾ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಬರೊಬ್ಬರಿ  ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. 6 ತಿಂಗಳ ಬಳಿಕ ಮಕ್ಕಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. 

Read more Photos on
click me!

Recommended Stories