ಗುಂಡ್ಯಾನ ಹೆಂಡತಿ ಎಂಬ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಅದಿತಿ ಪ್ರಭುದೇವ ನಾಗಕನ್ನಿಕೆ ಸಿರೀಯಲ್ ನಲ್ಲಿ ಮಿಂಚಿದರು. ಬಳಿಕ ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿ ಎನಿಸಿಕೊಂಡರು. ನಂತರ ನಟಿ ಬೆಂಗಳೂರಿನಲ್ಲಿ ಉದ್ಯಮಿ ಯಶಸ್ ಜೊತೆ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅದಿತಿ ಇದೇ ವರ್ಷ ಜೂನ್ ತಿಂಗಳಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ.