ಮುದ್ದಿನ ಮಗಳ ಜೊತೆ ಡಾರ್ಲಿಂಗ್ ಕೃಷ್ಣಾ -ಮಿಲನಾ ಮೊದಲ ಫೋಟೊ ಶೂಟ್ ವೈರಲ್!

Published : Sep 30, 2024, 03:51 PM ISTUpdated : Oct 01, 2024, 11:39 AM IST

ಇತ್ತೀಚೆಗಷ್ಟೇ ಪೋಷಕರಾಗಿರುವ ಸಂಭ್ರಮದಲ್ಲಿರುವ ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ಮುದ್ದಾದ ಪರಿ ಜೊತೆ ಮೊದಲ ಫೋಟೊ ಶೂಟ್ ಮಾಡಿಸಿದ್ದಾರೆ.   

PREV
17
ಮುದ್ದಿನ ಮಗಳ ಜೊತೆ ಡಾರ್ಲಿಂಗ್ ಕೃಷ್ಣಾ -ಮಿಲನಾ ಮೊದಲ ಫೋಟೊ ಶೂಟ್ ವೈರಲ್!

ಸ್ಯಾಂಡಲ್ ವುಡ್ ನ ಲವ್ಲೀ ಕಪಲ್ಸ್ ಹಾಗೂ ಇತ್ತೀಚೆಗಷ್ಟೆ ಪೋಷಕರಾಗಿ ಭಡ್ತಿ ಪಡೆದಿರುವ ಡಾರ್ಲಿಂಗ್ ಕೃಷ್ಣಾ (Darling Krishna) ಹಾಗೂ ಮಿಲನಾ ನಾಗರಾಜ್ ಮನೆಯಲ್ಲಿ ಹೊಸ ಅತಿಥಿಯ ಆಗಮನದ ಸಂಭ್ರಮ ದುಪ್ಪಟ್ಟಾಗಿದೆ ಅಂತಾನೆ ಹೇಳಬಹುದು. 
 

27

ಚಂದನವನದ ಈ ಮುದ್ದಾದ ಜೋಡಿಯ ಜೀವನಕ್ಕೆ ಸೆಪ್ಟೆಂಬರ್ 5 ರಂದು ಮುದ್ದಾದ ಪರಿಯ ಆಗಮನ ಆಗಿತ್ತು. ಈ ಬಗ್ಗೆ ಈ ಜೋಡಿಗಳು )sandalwood Couples) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಭ್ರಮವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. 
 

37

ಅಷ್ಟೇ ಅಲ್ಲ ಮಗುವನ್ನು ಮನೆಗೆ ಕರೆದುಕೊಂಡು ಬರುವ ಸುಂದರವಾದ ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಗುವಿನ ಮುಖವನ್ನು ಸಹ ತೋರಿಸಿದ್ದರು ಈ ಜೋಡಿ. ಆರತಿ ಎತ್ತಿ ಮಗುವಿನ ಆಗಮನಕ್ಕೆ ಸ್ವಾಗತಿಸಿದ್ದು, ಕೇಕ್ ಕತ್ತರಿಸಿದ್ದು, ಮಗಳ ಜೊತೆಗೆ ಕುಟುಂಬದ ಸದಸ್ಯರೆಲ್ಲಾ ಸೇರಿ ಫೋಟೊ ಕೂಡ ತೆಗೆಸಿಕೊಂಡಿದ್ದರು. 
 

 

47

ಇದೀಗ ಸೋಶಿಯಲ್ ಮಿಡಿಯಾದಲ್ಲಿ ಮಿಲನಾ ನಾಗರಾಜ್  (Milana Nagaraj) ಹೊಸದಾದ ಫೋಟೊಗಳನ್ನು ಶೇರ್ ಮಾಡಿದ್ದು, ಈಗಷ್ಟೇ ಹುಟ್ಟಿದ ಮಗಳ ಜೊತೆಗೆ ಕೃಷ್ಣ -ಮಿಲನಾ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೊಗಳನ್ನ ನೋಡಿ ಅಭಿಮಾನಿಗಳು ಖುಷಿಯಿಂದ ತೇಲಾಡಿದ್ದಾರೆ. 
 

57

ನಮ್ಮ ಜೀವನದ ಹೊಸ ಪರಿಯನ್ನು ಭೇಟಿಯಾಗಿ ಎಂದು ಕ್ಯಾಪ್ಶನ್ ಹಾಕಿ ಮೂರು ಫೋಟೊಗಳನ್ನು  ಮಿಲನಾ ನಾಗರಾಜ್ ಶೇರ್ ಮಾಡಿದ್ದಾರೆ. ಈ ಫೋಟೊಗೆ ಹಲವಾರು ಸೆಲೆಬ್ರಿಟಿಗಳು ವಿಶ್ ಮಾಡಿದ್ದು, ಕಿರುತೆರೆ ಹಾಗೂ ಹಿರಿತೆರೆ ನಟಿ ದಿಶಾ ಮದನ್ (Disha Madan) ಗಲ್ಲ ನೋಡು, ನಾನು ಈವಾಗ್ಲೇ ಪರಿಯನ್ನು ನೋಡೋದಕ್ಕೆ ಬರ್ತೀನಿ ಎಂದಿದ್ದಾರೆ. 
 

67

ಇನ್ನು ಶಾನ್ವಿ ಶ್ರೀವಾಸ್ತ್ರವ್, ಅಮೃತಾ ಅಯ್ಯಂಗಾರ್, ಶ್ವೇತಾ ಚೆಂಗಪ್ಪಾ, ಅದ್ವಿತಿ ಶೆಟ್ಟಿ, ನೇಹಾ ರಾಮಕೃಷ್ಣಾ, ಕೃಷಿ ತಾಪಂಡ, ಮೊದಲಾದ ಸೆಲೆಬ್ರಿಟಿಗಳು ಈ ದಂಪತಿಗಳಿಗೆ ಶುಭ ಕೋರಿ, ಮುದ್ದಿನ ಪರಿಗೆ ಶುಭ ಹಾರೈಸಿದ್ದಾರೆ. 
 

77

ಕೃಷ್ಣಾ ಮತ್ತು ಮಿಲನಾ, ಬೇರೆ ಸೆಲೆಬ್ರಿಟಿಗಳಂತೆ ಮಗುವಿನ ಮುಖವನ್ನು ಹೈಡ್ ಮಾಡದೆ, ಯಾವುದೇ ಡ್ರಾಮಾ ಮಾಡದೆ ಮಗುವಿನ ಫೋಟೊ ರಿವೀಲ್ ಮಾಡಿರೋದಕ್ಕೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಫೀಲಿಂಗ್ಸ್ ಗೆ ಬೆಲೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. 
 

Read more Photos on
click me!

Recommended Stories