ಪಕ್ಕದ್ಮನೆ ಹುಡುಗಿ ಲುಕ್ ನಿಂದ, ಗ್ಲಾಮರಸ್ ಬೆಡಗಿ ಲುಕ್ ಗೆ ಬದಲಾದ ದಿಯಾ ಬೆಡಗಿ

Published : Mar 06, 2024, 01:05 PM IST

ದಿಯಾ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಖುಷಿ ರವಿ ಇದೀಗ ತಮ್ಮ ಸೀರೆಯಲ್ಲಿ ಸಖತ್ ಗ್ಲಾಮರಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.   

PREV
17
ಪಕ್ಕದ್ಮನೆ ಹುಡುಗಿ ಲುಕ್ ನಿಂದ, ಗ್ಲಾಮರಸ್ ಬೆಡಗಿ ಲುಕ್ ಗೆ ಬದಲಾದ ದಿಯಾ ಬೆಡಗಿ

ಸೋಡಾ ಬುಡ್ಡಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ದಿಯಾ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಖುಷಿ ರವಿ (Kushee Ravi) ಹೊಸ ಫೋಟೋಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ಹಸಿರು ಬಣ್ಣದ ಬ್ಯಾಕ್ ಲೆಸ್ ಬ್ಲೌಸ್ ಮತ್ತು ತಿಳಿ ಕೇಸರಿ, ಪಿಂಕ್ ಮಿಶ್ರಿತ ಸೀರೆಯಲ್ಲಿ ಪೋಸ್ ನೀಡಿರುವ ಖುಷಿ ಸಖತ್ ಗ್ಲಾಮರಸ್ (glamorous) ಆಗಿ ಕಾಣಿಸುತ್ತಿದ್ದಾರೆ. ಈ ಸುಂದರವಾದ ಫೋಟೋ ಶೂಟ್ ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. 
 

37

ಹೆಚ್ಚಾಗಿ ಸಿಂಪಲ್ ಆಗಿ ಸೀರೆ, ಡ್ರೆಸ್ ನಲ್ಲಿ ಕಾಣಿಸಿಕೊಳ್ತಿದ್ದ ಖುಷಿ ಈ ಬಾರಿ ಸೀರೆಯಲ್ಲೇ ಪೋಸ್ ನೀಡಿದ್ರು, ಆ ಫೋಟೋಗಳು ಇಂಟರ್ನೆಟ್ ನಲ್ಲಿ ಕಿಚ್ಚು ಹಚ್ಚುವಂತಿದೆ. ಈ ಸೀರೀಸ್ ನ ಹಲವು ಫೋಟೋ ಸೆಟ್ ಗಳು ಖುಷಿ ರವಿ ಪೇಜ್ ನಲ್ಲಿ ಶೇರ್ ಆಗಿವೆ. 
 

47

ಅಭಿಮಾನಿಗಳು ನಟಿಯ ಅಂದಕ್ಕೆ ಮರುಳಾಗಿ, ಇಷ್ಟೊಂದು ಚೆನ್ನಾಗಿ ಕಾಣಿಸಿದ್ರೆ, ನಿಮ್ ಮೇಲೆ ಲವ್ ಆಗೋದು ಗ್ಯಾರಂಟಿ ಮೇಡಂ, ಅಪ್ಪಟ ದೇವತೆಯಂತೆ ಕಾಣಿಸ್ತಿದ್ದೀರಾ. ಗ್ಲಾಮರಸ್ ಆಗಿ ಕಾಣಿಸ್ತಿದ್ದೀರಾ, ಹಾಟ್ ಆಗಿ ಕಾಣಿಸ್ತಿದ್ದೀರಾ ಎಂದೆಲ್ಲಾ ಕಾಮೆಂಟ್ (comment) ಮಾಡಿದ್ದಾರೆ. 
 

57

ಮತ್ತೊಬ್ರು ನೀವು ಒಂದು ಸುಂದರವಾದ ಮತ್ತು ಬೆಲೆ ಕಟ್ಟಲಾಗದ ದೇವರ ಸೃಷ್ಟಿ. ನಿಮ್ಮನ್ನು ನೋಡೋದೇ ಕಣ್ಣಿಗೆ ಹಬ್ಬ, ಮನಸ್ಸಿಗೆ ಶಾಂತಿ ಸಿಗುತ್ತೆ ಅಂದಿದ್ದಾರೆ. ಮತ್ತೊಬ್ಬರು ಪಕ್ಕದಮನೆ ಹುಡುಗಿ ಲುಕ್ ನಿಂದ, ನಗರದ ಹಾಟ್ ಗರ್ಲ್ ವರೆಗೂ… ಅದ್ಭುತ ಟ್ರಾನ್ಸ್ ಫಾರ್ಮೇಶನ್ (transformation) ಎಂದು ಬರೆದಿದ್ದಾರೆ. 
 

67

ಇನ್ನೊಬ್ಬರು ಗ್ಲಾಮರ್ ಹುಡುಕುತ್ತಾ ಹೋಗಿ ನಿಮ್ಮೊಳಗಿನ ವಜ್ರವನ್ನು ಕಳೆದುಕೊಳ್ಳಬೇಡಿ ಎಂದರೆ, ಮತ್ತೊಬ್ಬರು ಬರ್ತಾ ಬರ್ತಾ ರಾಯನ ಕುದುದೆ ಕತ್ತೆಯಾಯ್ತು ಎಂದಿದ್ದಾರೆ. ಮತ್ತೊಬ್ರು ನಿಮ್ಮನ್ನು ನೋಡಿದ್ರೆ ಮದ್ವೆ ಆಗಿ, ಮಗು ಇದೆ ಅಂತಾ ಯಾರೂ ಹೇಳಲ್ಲ ಅಂತಿದ್ದಾರೆ. 
 

77

ಸೋಡಾಬುಡ್ಡಿ, ದಿಯಾ, ಸ್ಪೂಕಿ ಕಾಲೇಜ್, ಪಿಂಡಮ್, ಕೇಸ್ ಆಫ್ ಕೊಂಡಾಣ (Case of Kondana) ಸಿನಿಮಾ ಮೂಲಕ ಜನಮನ ಗೆದ್ದ ಖುಷಿ ರವಿ, ಸದ್ಯ ಕನ್ನಡಲ್ಲಿ ಫುಲ್ ಮೀಲ್ಸ್, ಸನ್ ಆಫ್ ಮುತ್ತಣ್ಣ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories