ನೀವು ಏನ್ ಸ್ಟೈಲ್ ಮಾಡಿದ್ರೂ ನಮ್ ಹುಡುಗಿನೇ; ಅಮೃತಾ ಪ್ರೇಮ್ ಫೋಟೋ ವೈರಲ್!

Published : Jan 04, 2024, 11:27 AM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಅಮೃತಾ ಪ್ರೇಮ್ ಫೋಟೋ. ಟಗರು ನಟಿ ಸಖತ್ ಸಿಂಪಲ್ ನಟಿ ಅಂತಾರೆ ಫ್ಯಾನ್ಸ್‌.....  

PREV
17
ನೀವು ಏನ್ ಸ್ಟೈಲ್ ಮಾಡಿದ್ರೂ ನಮ್ ಹುಡುಗಿನೇ; ಅಮೃತಾ ಪ್ರೇಮ್ ಫೋಟೋ ವೈರಲ್!

ಕನ್ನಡ ಚಿತ್ರರಂಗದ ಸಿಂಪಲ್ ನಟ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. 

27

ಡಾಲಿ ಧನಂಜಯ್ ನಿರ್ದೇಶನದ ಟಗರು ಪಲ್ಯ ಸಿನಿಮಾದಲ್ಲಿ ನಟಿಸಿರುವ ಅಮೃತಾ, ಮೊದಲ ಚಿತ್ರದಲ್ಲೇ ನೇಮ್ ಆಂಡ್ ಫೇಮ್ ಗಳಿಸಿಬಿಟ್ಟರು. 

37

ಮುಂದಿನ ಸಿನಿಮಾ ಬಗ್ಗೆ ಯೋಚನೆ ಮಾಡುವ ಮುನ್ನವೇ ಸಾಕಷ್ಟು ಆಫರ್‌ಗಳು ಬರುತ್ತಿದೆ ಎನ್ನಲಾಗಿದೆ. ತಂದೆ ತರ ಮಗಳು ಕೂಡ ಸಖತ್ ಸಿಂಪಲ್. 

47

ಹೀಗೆ ಮನೆಯಲ್ಲಿ ಕ್ಲಿಕ್ ಮಾಡಿರುವ ಫೋಟೋವನ್ನು ಅಮೃತಾ (Amrutha Prem) ಅಪ್ಲೋಡ್ ಮಾಡಿ 'ಹಲೋ ಜನವರಿ' ಎಂದು ಬರೆದುಕೊಂಡಿದ್ದಾರೆ.

57

ಅಮೃತಾ ಪೋಸ್ಟ್‌ಗೆ ತಾಯಿ ಜ್ಯೋತಿ ಪ್ರೇಮ್ 'ಲೋಕದಾ ಸುಖವೆಲ್ಲಾ..ನಿನಗಾಗಿ ಮುಡಿಪಿರಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ನ ಅನೇಕರು ಇಷ್ಟ ಪಟ್ಟಿದ್ದಾರೆ. 

67

ಪ್ರೇಮ್ ಪುತ್ರಿ ಟಗರು ಪಲ್ಯ ಸಿನಿಮಾ ಮೂಲಕ ಲಾಂಚ್ ಆದರೆ ಪುತ್ರ ಏಕಾಂತ್ 'ಗುರು ಶಿಷ್ಯರು' ಸಿನಿಮಾ ಮೂಲಕ ಲಾಂಚ್ ಆದರು. ಇಬ್ಬರ ನಟನೆಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.

77

ನೀವು ಎಷ್ಟೇ ಮಾಡರ್ನ್ ಡ್ರೆಸ್ ಹಾಕಿ ಅಥವಾ ಡೀ-ಗ್ಲಾಮ್‌ ಲುಕ್‌ನಲ್ಲಿ ಇದ್ದರೂ ನೀವು ನಮ್ಮ ಹುಡುಗಿನೇ.  ನಿಮ್ಮನ್ನು ಒಪ್ಪಿಕೊಂಡು ಆಯ್ತು ಅಂದ್ಮೇಲೆ ನಿಮ್ಮ ಸ್ಟೈಲ್ ಒಪ್ಪಿಕೊಂಡ್ವಿ ಅಂತಾರೆ ಫ್ಯಾನ್ಸ್‌. 

Read more Photos on
click me!

Recommended Stories