ಮಾರ್ಕ್ ಸಿನಿಮಾ ರಿಲೀಸ್ ಆಗಿದ್ದು, ನಟ ಕಿಚ್ಚ ಸುದೀಪ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾತನಾಡುವಾಗ, ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಈಗ ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.
ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಬಗ್ಗೆಯೂ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿತ್ತು. ಈ ಬಗ್ಗೆ ಕೂಡ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಕಿಚ್ಚ ಸುದೀಪ್ ಅವರು, “ಕಿತ್ತೊಗಿರೊ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸ್ಕೊಳೋದಿಲ್ಲ. ಇಲ್ಲೇ ನಾವು ಚೀಪ್ ಆಗೋದು, ಸೆಲೆಬ್ರೇಶಾನ್ ಬಗ್ಗೆ ಮಾತಾಡೋಣ” ಎಂದು ಹೇಳಿದ್ದರು.
25
ನನ್ನ ಟೈಮ್ ಯಾಕೆ ವೇಸ್ಟ್ ಮಾಡಲಿ?
“ಕೆಟ್ಟದಾಗಿ ಮಾತಾಡೋರ ಬಗ್ಗೆ ಮಾತಾಡಿ, ನನ್ನ ಟೈಮ್ ಯಾಕೆ ವೇಸ್ಟ್ ಮಾಡಲಿ? ವೇಸ್ಟ್ ನನ್ ಮಕ್ಕಳು. ನನ್ನ ಮಗಳು ನನಗಿಂತ ಸ್ಟ್ರಾಂಗ್ , ನಾನು ಏನು ಫೇಸ್ ಮಾಡಿರೋ ಹತ್ತರಷ್ಟು ಅವಳು ಫೇಸ್ ಮಾಡ್ತಾಳೆ. ನನ್ನ ಮಗಳು ಅವಳು, ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ” ಎಂದು ಹೇಳಿದ್ದಾರೆ.
35
ಮಾರ್ಕ್ ಸಿನಿಮಾದಲ್ಲಿ ಗಾಯನ
“ಮಾರ್ಕ್ ಸಿನಿಮಾದಲ್ಲಿ ಮಲೈಕಾ ಹಾಡು ಹಾಡಿದ್ದ ನನ್ನ ಮಗಳ ಬಗ್ಗೆ ಕೂಡ ಅನೇಕರು, ಚಿತ್ರರಂಗದವರು ಮೆಚ್ಚುಗೆ ಸೂಚಿಸಿದ್ದರು. ಅವರಿಗೆ ಧನ್ಯವಾದಗಳು” ಎಂದು ಸುದೀಪ್ ಹೇಳಿದ್ದರು.
ಈ ಹಿಂದೆ ಕೂಡ ಕಿಚ್ಚ ಸುದೀಪ್ ಅವರ ಮಗಳ ತೂಕದ ಬಗ್ಗೆ ಕೆಲವರು ನೆಗೆಟಿವ್ ಆಗಿ ಮಾತನಾಡಿದ್ದರು. ಈ ಹಿಂದೆಯೂ ಸಾನ್ವಿ ಅವರು ಬಾಡಿಶೇಮಿಂಗ್ ಮಾಡಿದ್ದರ ಬಗ್ಗೆ ದನಿ ಎತ್ತಿದ್ದರು.
55
ಸಾನ್ವಿ ಸುದೀಪ್ ಹೇಳಿದ್ದೇನು?
ಹುಬ್ಬಳ್ಳಿಯ ಮಾರ್ಕ್ ಇವೆಂಟ್‌ನಲ್ಲಿ ನಟ ಕಿಚ್ಚ ಸುದೀಪ್ ಅವರು ಯುದ್ಧಕ್ಕೆ ರೆಡಿ ಇದ್ದೇವೆ ಎಂದಿದ್ದರು. ಈ ಯುದ್ಧದ ಮಾತಿನ ನಂತರ ಸುದೀಪ್ ಮಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮಗಳು ಸಾನ್ವಿಗೆ ಕೆಟ್ಟ ಕಾಮೆಂಟ್‌ಗಳ ಕಾಟ ಬಂದಿತ್ತು. ಸುದೀಪ್ ಪುತ್ರಿ “ನನ್ನ ದೇಹದ ಬಗ್ಗೆ ಮಾತನಾಡುವುದು ಚರ್ಚೆಯ ವಿಷಯವಲ್ಲ” ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.