ಬಿಳಿ ಕ್ರಾಪ್ ಟಾಪ್ ನಲ್ಲಿ ಮಿಂಚಿದ ಶಾನ್ವಿ ಶ್ರೀವಾಸ್ತವ : ಕಿನ್ನರಿಯೋ, ಅಪ್ಸರೆಯೋ ಅಂತಿದ್ದಾರೆ ಜನ

Published : Jan 22, 2024, 05:39 PM IST

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುತ್ತಿರುವ ಉತ್ತರ ಭಾರತದ ನಟಿ ಶಾನ್ವಿ ಶ್ರೀವಾತ್ಸವ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಪ್ಸರೆಯಂತೆ ಕಾಣಿಸುತ್ತಿದ್ದಾರೆ.   

PREV
17
ಬಿಳಿ ಕ್ರಾಪ್ ಟಾಪ್ ನಲ್ಲಿ ಮಿಂಚಿದ ಶಾನ್ವಿ ಶ್ರೀವಾಸ್ತವ : ಕಿನ್ನರಿಯೋ, ಅಪ್ಸರೆಯೋ ಅಂತಿದ್ದಾರೆ ಜನ

ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಸಿನಿಮಾ ರಂಗಗಳಲ್ಲೂ ಮಿಂಚುತ್ತಿರುವ ನಟಿ ಶಾನ್ವಿ ಶ್ರೀವಾತ್ಸವ (Shanvi Srivatsava), ಹೊಸ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. 
 

27

ಬಿಳಿ ಬಣ್ಣದ ಪ್ಯಾಂಟ್ ಜೊತೆಗೆ, ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿರುವ ಮಿಲ್ಕಿ ಬ್ಯೂಟಿ ಶಾನ್ವಿ ಶ್ವೇತ ಸುಂದರಿಯಂತೆ ಮುದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವರ ಹೂನಗುವಿಗೆ ಜನರು ಫಿದಾ ಆಗಿದ್ದಾರೆ. 
 

37

ಶಾನ್ವಿಯ ಹೊಸ ಫೋಟೋಗಳನ್ನು ನೋಡಿ, ಅಭಿಮಾನಿಗಳು ಖುಷಿಯಾಗಿದ್ದು, ಒಬ್ಬರು ಆಕಾಶದಿಂದ ಧರೆಗಿಳಿದ ಕಿನ್ನರಿಯೇ ನೀ ಅಥವಾ ಆ ಸ್ವರ್ಗದಿಂದಲೇ ಇಳಿದು ಬಂದರೆ ಅಪ್ಸರೆಯೋ ಗೊತ್ತಾಗ್ತಿಲ್ಲ. ಆದರೆ ನೀನು ಸೌಂದರ್ಯದಲ್ಲಿ ಅವರನ್ನೇ ಮೀರಿಸುತ್ತೀರಿ ಅನ್ನೋದು ನಿಜಾ ಎಂದು ಹೇಳಿದ್ದಾರೆ. 
 

47

ಮತ್ತೊಬ್ಬರು ಕಾಮೆಂಟ್ ಮಾಡಿ, ನಿಮ್ಮದು ಗಡಿಯೇ (boundaryless beauty) ಇಲ್ಲದ ಸೌಂದರ್ಯ. ಬಿಳಿ ಧಿರಿಸಿನ ನಿಮ್ಮ ಲುಕ್ ನಿಜವಾಗಿಯೂ ಮನಸ್ಸಿಗೆ ಶಾಂತಿಯನ್ನು ನೀಡುತ್ತೆ. ಎಂದರೆ ಮತ್ತೊಬ್ಬರು ನಿಮ್ಮ ಸೌಂದರ್ಯವನ್ನು ವರ್ಣಿಸೋಕೆ ಪದಗಳೇ ಸಾಲುತ್ತಿಲ್ಲ ಎಂದಿದ್ದಾರೆ. 

57

ಸಿಕ್ಕಾಪಟ್ಟೆ ಕನ್ನಡ ಅಭಿಮಾನಿಗಳನ್ನು ಪಡೆದಿರುವ ಶಾನ್ವಿ ಶ್ರೀವಾತ್ಸವ್ ಗೆ ಒಬ್ಬ ಕನ್ನಡಿಗ ಕಾಮೆಂಟ್ ಮಾಡಿ, ಶಾನ್ವಿ ಮೇಡಂ, ಯಾಕೆ ನೀವು ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ, ಕನ್ನಡ ಸಿನಿಮಾ ಮಾಡಲೇ ಇಲ್ಲ, ಕನ್ನಡವನ್ನ ಮರೆತು ಬಿಟ್ರ ಎಂದು ಕೇಳಿದ್ದಾರೆ. 
 

67

ಚಂದ್ರ ಲೇಖ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ (Sandalwood) ಎಂಟ್ರಿ ಕೊಟ್ಟ ಶಾನ್ವಿ, ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ, ತಾರಕ್, ಮಫ್ತಿ, ದ ವಿಲ್ಲನ್, ಗೀತಾ, ಅವನೆ ಶ್ರೀಮನ್ನಾರಣ ಸಿನಿಮಾದಲ್ಲಿ ನಟಿಸಿ, ಎರಡು ಸಿನಿಮಾಗಳಿಗೆ ಉತ್ತಮ ನಾಯಕಿ ಪ್ರಶಸ್ತಿ ಸಹ ಪಡೆದಿದ್ದರು. 

77

ಇನ್ನು ಕನ್ನಡದಲ್ಲಿ ಒಂದು ಸಿನಿಮಾಗಳ ಶೂಟಿಂಗ್ ನಲ್ಲಿ (Cinema Shooting) ಬ್ಯುಸಿಯಾಗಿದ್ದಾರೆ. ಉಪೇಂದ್ರ ಮತ್ತು ರವಿಚಂದ್ರನ್ ಅವರು ನಟಿಸಿರುವ ತ್ರಿಶೂಲಂ ಸಿನಿಮಾದಲ್ಲೂ ಶಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮರಾಠಿ ಸಿನಿಮಾದಲ್ಲೂ ಶಾನ್ವಿ ಬ್ಯುಸಿಯಾಗಿದ್ದಾರೆ. 

Read more Photos on
click me!

Recommended Stories