ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಭೇಟಿ; ಬಸವ ಆಶೀರ್ವಾದ ಪಡೆದ ಮೀನಮ್ಮ

Published : Feb 24, 2025, 03:16 PM ISTUpdated : Feb 24, 2025, 03:27 PM IST

 ಚಾಮುಂಡೇಶ್ವರಿ ದರ್ಶನ ಪಡೆದ ಹಿರಿಯ ನಟ ತೂಗುದೀಪ ಪತ್ನಿ ಮೀನಾ. ಆಶೀರ್ವಾದಿಸಲು ಸಮಯ ತೆಗೆದುಕೊಂಡ ಬಸಪ್ಪ....  

PREV
16
ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಭೇಟಿ; ಬಸವ ಆಶೀರ್ವಾದ ಪಡೆದ ಮೀನಮ್ಮ

ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಭೇಟಿ ನೀಡಿದ್ದಾರೆ. ಪೂಜೆ ಸಲ್ಲಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿದೆ.

26

ಚಾಮುಂಡೇಶ್ವರಿ ದರ್ಶನ ಪಡೆದು ಬಸವಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಮೀನಾ ತೂಗುದೀಪ. ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಇರುವ ದೇವಸ್ಥಾನವಿದು.

36

ಈ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಲವು ಪವಾಡಗಳು ನಡೆಯುತ್ತದೆ. ಈ ಪವಾಡಗಳನ್ನು ಮಾಡುವುದು ಬಸವಪ್ಪ ಹೀಗಾಗಿ ದರ್ಶನ ಪಡೆಯಲು ದರ್ಶನ್ ತಾಯಿ ಆಗಮಿಸಿದ್ದಾರೆ.

46

ಕಷ್ಟಗಳ ನಿವಾರಣೆ ಮಾಡುವಂತೆ ದೇವರ ಮೊರೆ ಹೋಗಿದ್ದಾರೆ ಮೀನಾ ತೂಗುದೀಪ. ದೇವಸ್ಥಾನದ ಆಡಳಿತ ಮಂಡಳಿಯಿಂದ ಗೌರವ ಸಲ್ಲಿಸಿದ್ದಾರೆ.

56

ಇಲ್ಲಿ ಎಲ್ಲಾ ಕಡೆ ಪಾಸಿಟಿವ್ ಎನರ್ಜಿ ಇದೆ ಹೀಗಾಗಿ ದರ್ಶನ ಪಡೆಯಲು ಬಂದಿದ್ದೀನಿ. ಇಲ್ಲಿಗೆ ಬರುವ ಎಲ್ಲಾ ಭಕ್ತರಿಗೂ ಚಾಮುಂಡೇಶ್ವರಿ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಮೀನಾ ತೂಗುದೀಪ. 

66

ರೇಣುಕಾಸ್ವಾಮಿ ಪ್ರಕರಣದ ಮೇಲ ಜೈಲು ಸೇರಿದ ದರ್ಶನ್‌ನ ಹೊರ ತರಲು ಒಂದು ಕಡೆ ಪತ್ನಿ ಊರಲ್ಲಿರುವ ದೇವಸ್ಥಾನಗಳನ್ನು ಸುತ್ತುತ್ತಿದ್ದರು, ಮತ್ತೊಂದು ಕಡೆ ತಾಯಿ ಮಾಡ ಪೂಜೆಗಳು ಒಂದೆರಡಲ್ಲ. 

Read more Photos on
click me!

Recommended Stories