ಭೀಮನ ಅಮಾವಾಸ್ಯೆ ಪ್ರಯುಕ್ತ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್!

First Published | Aug 5, 2024, 11:11 AM IST

ಟೆಂಪಲ್‌ರನ್ನು ಬ್ಯುಸಿಯಾಗಿರುವ ದರ್ಶನ್ ವಿಜಯಲಕ್ಷ್ಮಿ. ಭೀಮನ ಅಮಾವಾಸ್ಯೆ ಪ್ರಯುಕ್ತ ಶಕ್ತಿದೇವಿ ದರ್ಶನ ಪಡೆದ ಡಾ.ಶ್ರುತಿ ಮತ್ತು ವಿಜಯಲಕ್ಷ್ಮಿ.
 

 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಸೇರಿ 50 ದಿನಗಳು ಕಳೆದಿದೆ. ದಿನದಿಂದ ದಿನಕ್ಕೆ ಕೇಸ್‌ ಟ್ವಿಸ್ಟ್ ಪಡೆಯುತ್ತಿದೆ.

ಪತಿಯನ್ನು ಬಿಡಿಸಿಕೊಂಡು ಹೊರ ಬರಲು ಸಾಕಷ್ಟು ಹರ ಸಾಹಸ ಮಾಡುತ್ತಿದ್ದಾರೆ ವಿಜಯಲಕ್ಷ್ಮಿ. ಈ ನಡುವೆ ಟೆಂಪಲ್‌ ರನ್‌ನಲ್ಲಿ ಕೂಡ ಬ್ಯುಸಿಯಾಗಿಬಿಟ್ಟಿದ್ದಾರೆ.

Tap to resize

ಆಗಸ್ಟ್‌ 4ರಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನಲ್ಲಿ ಇರುವ ಬನಶಂಕರಿ ದೇವಿ ದರ್ಶನ್ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್ ಮತ್ತು ಡಾ.ಶ್ರುತಿ ಗೌಡ.

ಎಲ್.ಆರ್.ಶಿವರಾಮೇಗೌಡ ರವರ ಸೊಸೆ ಡಾ.ಶೃತಿ ಗೌಡ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆ, ಕೊಲ್ಲೂರಿನಲ್ಲಿ ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿ ಬಳಿಕ  ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಯಾಗಶಾಲೆಯಲ್ಲಿ ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ , ಸಂಕಲ್ಪ ಮಾಡಿದರು.

ಆಗ ಕ್ಯಾಮೆರಾಗಳನ್ನು ಕಂಡು ಬೇಸರ ವ್ಯಕ್ತ ಪಡಿಸಿದ್ದರು.  ನಮಗೂ ಪ್ರೈವಸಿ ಅಗತ್ಯವಿದೆ ದಯವಿಟ್ಟು ಸೆರೆ ಹಿಡಿಯಬೇಡಿ ಎಂದು ಮನವಿ ಮಾಡಿದ್ದರು. 

Latest Videos

click me!