2022 ರೌಂಡಪ್: ಖುಷಿ ಕೊಟ್ಟ 9 ಕನ್ನಡ ಚಿತ್ರಗಳು

First Published | Dec 30, 2022, 9:48 AM IST

2022ರಲ್ಲಿ ಅತಿ ಹೆಚ್ಚು ಹೊಸಬರ ಚಿತ್ರಗಳು ಬಿಡುಗಡೆ ಕಂಡಿತ್ತು. ಅವುಗಳಲ್ಲಿ ಅತಿ ಹೆಚ್ಚು ಖುಷಿ ಕೊಟ್ಟ ಸಿನಿಮಾಗಳ ಪಟ್ಟಿ ಇಲ್ಲಿದೆ....

ಮಾನ್ಸೂನ್ ರಾಗ: ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಇದಾಗಿದ್ದು ಹಾಡುಗಳು ಸೂಪರ್ ಹಿಟ್ ಆಗಿತ್ತು. ನಾಲ್ಕು ಕಥೆಗಳನ್ನು ಕೇವಲ 2 ಗಂಟೆಗಳಲ್ಲಿ ಹೇಳಲಾಗಿದೆ. ಅಚ್ಯುತ್‌ ಕುಮಾರ್‌, ಸುಹಾಸಿನಿ, ಧನಂಜಯ್‌, ರಚಿತಾರಾಮ್‌, ಯಶಾ ಶಿವಕುಮಾರ್‌, ಶಿವಾಂಕ್‌, ಶೋಭರಾಜ್‌, ಶ್ರೀಧರ್‌, ಶಶಿಧರ್‌ ಅಭಿನಯಿಸಿದ್ದಾರೆ.

ಧರಣಿ ಮಂಡಲ ಮಧ್ಯಗೊಳಗೆ: ಬೂಮರಾಂಗ್‌, ಜಿಗ್‌ಜಾಗ್‌ ಅಥವಾ ಹೈಪರ್‌ ಲಿಂಕ್‌ ಶೈಲಿಯ ಸ್ಕ್ರೀನ್‌ ಪ್ಲೇ ಮೂಲಕ ನಿರ್ದೇಶಕ ಶ್ರೀಧರ್‌ ಶಿಕಾರಿಪುರ ಹೇಳಿರುವ ಕ್ರೈಮ್‌ ಡ್ರಾಮಾ ‘ಧರಣಿ ಮಂಡಲ ಮಧ್ಯದೊಳಗೆ’ ಪ್ರೇಕ್ಷಕನನ್ನು ಅತ್ತಿತ್ತ ಅಲುಗಾಡದಂತೆ ಕೂರಿಸುತ್ತದೆ. 2022ನೇ ಸಾಲಿನ ಅತ್ಯುತ್ತಮ ಸ್ಕ್ರೀನ್‌ ಪ್ಲೇ ಸಿನಿಮಾ ಎನ್ನುವ ಮೆಚ್ಚುಗೆ-ಪ್ರಶಸ್ತಿ ಕೊಡುವುದಾದರೆ ಅದು ಈ ಚಿತ್ರಕ್ಕೆ ಕೊಡಬೇಕು. ನವೀನ್‌ ಶಂಕರ್‌, ಐಶಾನಿ ಶೆಟ್ಟಿ, ಸಿದ್ದು ಮೂಲಿಮನಿ, ಬಲರಾಜವಾಡಿ, ಯಶ್‌ ಶೆಟ್ಟಿ, ಮಾಲತೇಶ್‌ ಬಡಿಗೇರ್‌, ಜಯಶ್ರೀ ಆರಾಧ್ಯ ಅಭಿನಯಿಸಿದ್ದಾರೆ.

Tap to resize

ವೀಲ್‌ಚೇರ್ ರೋಮಿಯೋ: ಕೈ, ಕಾಲು ಸರಿ ಇಲ್ಲದೆ ನಡೆಯಲು ಆಗದ ತನ್ನ ಮಗನಿಗೆ ಹುಡುಗಿ ಹುಡುಕಲು ಹೋಗುವ ಅಪ್ಪ, ಅತ್ತ ಹೆತ್ತ ತಂದೆಯಿಂದಲೇ ವೇಶ್ಯಾ ವೃತ್ತಿಗೆ ತಳ್ಳಲ್ಪಟ್ಟಿರುವ ಅಂಧ ಹುಡುಗಿ. ಇವರಿಬ್ಬರು ಜತೆಯಾಗುವುದು ಅದೇ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ.ದಿನಕ್ಕೊಬ್ಬರ ಜತೆ ಮೈ ಮರೆಯುವ ಹುಡುಗಿಯಿಂದ ಮರೆಯಲಾಗದಂತಹ ಪ್ರೀತಿ ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾದಾಗ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ.

ತೂತು ಮಡಿಕೆ: ಮಾನವನ ದುರಾಸೆ, ಅತಿಯಾಸೆ, ಹಣದ ಮೋಹ ಇಟ್ಟುಕೊಂಡು ನೇಯ್ದಿರುವ ಕತೆ ಇದು. ಚಿತ್ರಕತೆಯಲ್ಲಿ ಹೊಸತನ ಇದೆ. ಅದಕ್ಕೂ ಹೆಚ್ಚಾಗಿ ಚಿತ್ರದ ಸಂಭಾಷಣೆಗಳು ಅನೇಕ ದೃಶ್ಯಗಳನ್ನು ನಾಲ್ಕೈದು ಪದಗಳ ಶಕ್ತಿಯಿಂದಲೇ ಮೇಲೆತ್ತಿವೆ.ನಿರ್ದೇಶಕರಿಗೆ ಸಿನಿಮಾದ ಮೇಲೆ ಸ್ಪಷ್ಟತೆ ಇದೆ. ಎಷ್ಟುಬೇಕೋ ಅಷ್ಟೇ ಹೇಳುತ್ತಾರೆ ಮತ್ತು ಕೆಲವು ದೃಶ್ಯಗಳನ್ನು ಪ್ರೇಕ್ಷಕರನ್ನು ದಾರಿ ತಪ್ಪಿಸಲು ದುಂದುವೆಚ್ಚ ಮಾಡಿದ್ದಾರೆ.

ಪದವಿ ಪೂರ್ವ: ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿ, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ ‘ಪದವಿ ಪೂರ್ವ’ ಸಿನಿಮಾ. ನಿರ್ಮಾಪಕ ರವಿ ಶಾಮನೂರ್‌, ನಾಯಕ ಪೃಥ್ವಿ ಶಾಮನೂರು, ನಾಯಕಿಯರಾದ ಯಶ ಶಿವಕುಮಾರ್‌, ಅಂಜಲಿ, ಕಲಾವಿದ ನಟರಾಜ್‌, ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಮೊದಲಾದವರಿದ್ದರು.

ವಿಂಡೋಸೀಟ್: ಶೀತಲ್‌ ಶೆಟ್ಟಿನಿರ್ದೇಶನದ ‘ವಿಂಡೋ ಸೀಟ್‌’ ಚಿತ್ರ ಇಂದು ತೆರೆ ಕಾಣಲಿದೆ. ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌ ನಟನೆಯ ಈ ಚಿತ್ರವನ್ನು ಶಾಲಿನಿ ಮಂಜುನಾಥ್‌ ನಿರ್ಮಾಣ ಮಾಡಿದ್ದಾರೆ. ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌, ಲೇಖಾ ನಾಯ್ಡು ಅಭಿನಯಿಸಿದ್ದಾರೆ.
 

ಲವ್ 360: ಲವ್‌ 360 ಚಿತ್ರದ ‘ಜಗವೇ ನೀನು’ ಹಾಡು 8 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿವೆ. ಸಾವಿರಾರು ರೀಲ್ಸ್‌ ಆಗಿವೆ. ಚಿತ್ರದ ಟಿವಿ, ಓಟಿಟಿ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿತ್ತು. ಇದು ಕ್ರೈಮ್‌ ಬೆರೆತಿರುವ ಲವ್‌ ಸ್ಟೋರಿ. ಹೊಸ ಕಥೆ, ಹೊಸ ಬಗೆಯ ನಿರೂಪಣೆ. ಯಂಗ್‌ ಅಡಲ್ಟ್‌ಗಾಗಿ ಮಾಡಿರುವ ಚಿತ್ರ. ಗೋಕರ್ಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ಸಿಕ್ಕಿತ್ತು.

ಹೊಸ ದಿನಚರಿ: ಕೀರ್ತ ಶೇಖರ್ ಮತ್ತು ವೈಶಾಖ್ ಪುಷ್ಪಲತ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದು. ಹೊಸಬರ ಹೊಸತನ ಸಿನಿಮಾ ಇದಾಗಿದ್ದು. ಆಕ್ಷನ್, ಮಸಾಲಾ, ಡಬಲ್ ಮೀನಿಂಗ್, ಮಚ್ಚು ಲಾಂಗುಗಳು ನಡುವೆ ದೊಡ್ಡ ಅಬ್ಬರ ಮಾಡುವ ಸಿನಿಮಾವಿದು. ಬಾಬ ಹಿರಣ್ಣಯ್ಯ, ಅರುಣಾ ಬಾಲರಾಜ್‌, ಚೇತನ್‌ ವಿಕ್ಕಿ, ಮಂದಾರ, ವರ್ಷಾ, ಶ್ರೀಪ್ರಿಯಾ, ಸುಪ್ರೀತ್, ದೀಪಕ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.

 ಖಾಸಗಿ ಪುಟಗಳು: ಸಂತೋಷ್‌ ಶ್ರೀಕಂಠಪ್ಪ ನಿರ್ದೇಶಕರು. ಶಾರ್ಟ್‌ಮೂವಿಯಲ್ಲಿ ತೊಡಗಿಸಿಕೊಂಡಿದ್ದ ವಿಶ್ವ ಸಿನಿಮಾದ ನಾಯಕ. ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ನಾಯಕಿ.ವಾಸುಕಿ ವೈಭವ್‌ ಇದರ ಸಂಗೀತ ಸಂಯೋಜನೆ ಮಾಡಿದ್ದಾರೆ.ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 

Latest Videos

click me!