ಹೊಸ ವರ್ಷಾಚರಣೆಗೆ ಲಂಡನ್‌‌ಗೆ ಹಾರಿದ ರಮ್ಯಾ; ಅಮೃತಾ ಅಯ್ಯಂಗರ್ ಜೊತೆ ಮಸ್ತ್ ಮಜಾ ಮಾಡುತ್ತಿರುವ ಫೋಟೋ ವೈರಲ್

Published : Dec 28, 2022, 05:29 PM IST

ನಟಿ ರಮ್ಯಾ ಹೊಸ ವರ್ಷಾಚರಣೆ ಸಂಭ್ರಮಿಸಲು ಲಂಡನ್‌ಗೆ ಹಾರಿದ್ದಾರೆ. ರಮ್ಯಾ ಜೊತೆ ನಟಿ ಅಮೃತಾ ಅಯ್ಯಂಗರ್ ಕೂಡ ತೆರಳಿದ್ದಾರೆ. 

PREV
17
ಹೊಸ ವರ್ಷಾಚರಣೆಗೆ ಲಂಡನ್‌‌ಗೆ ಹಾರಿದ ರಮ್ಯಾ; ಅಮೃತಾ ಅಯ್ಯಂಗರ್ ಜೊತೆ ಮಸ್ತ್ ಮಜಾ ಮಾಡುತ್ತಿರುವ ಫೋಟೋ ವೈರಲ್

ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. 2022ಕ್ಕೆ ಬೈ ಬೈ ಹೇಳಲು ಕಾಯುತ್ತಿದ್ದಾರೆ. 2022ರ ಮುಕ್ತಾಯಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಜಗತಿ ಸಂಭ್ರಮಾಚರಣೆಯಲ್ಲಿ ತೇಲುತ್ತಿದೆ. ಸ್ಯಾಂಡಲ್ ವುಡ್ ನಟಿ ರಮ್ಯಾ ಕೂಡ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಜ್ಜಾಗಿದ್ದಾರೆ. 2023ರನ್ನು ಬರಮಾಡಿಕೊಳ್ಳಲು ರಮ್ಯಾ ಲಂಡನ್‌ಗೆ ಹಾರಿದ್ದಾರೆ. 

27

ರಮ್ಯಾ ಅನೇಕ ವರ್ಷಗಳ ಬಳಿಕ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. ನಟನೆ ಜೊತೆಗ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಆದರೂ ಪ್ರವಾಸವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಆಗಾಗ ಪ್ರಪಂಚ ಸುತ್ತಾಡುವ ನಟಿ ರಮ್ಯಾ ಇದೀಗ ಲಂಡನ್‌ಗೆ ಹಾರಿದ್ದಾರೆ. ಹೊಸ ವರ್ಷವನ್ನು ಲಂಡನ್‌ನಲ್ಲಿ ಆಚರಿಸಲು ಸಜ್ಜಾಗಿದ್ದಾರೆ. 

37

ಅಂದಹಾಗೆ ನಟಿ ರಮ್ಯಾ ಜೊತೆ ಸ್ಯಾಂಡಲ್ ವುಡ್‌ನ ಮತ್ತೋರ್ವ ನಟಿ ಹಾಗೂ ರಮ್ಯಾ ಸ್ನೇಹಿತೆ ಅಮೃತಾ ಅಯ್ಯಂಗರ್ ಕೂಡ ಲಂಡನ್‌ಗೆ ಹಾರಿದ್ದಾರೆ. ಇಬ್ಬರೂ ಲಂಡನ್‌ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. 

47

ಅಂದಹಾಗೆ ಲಂಡನ್ ಪ್ರವಾಸದ ಒಂದಿಷ್ಟು ಫೋಟೋಗಳನ್ನು ರಮ್ಯಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಲಂಡನ್‌ನ ಸುಂದರ ಸ್ಥಳ ಮತ್ತು ಅಮೃತಾ ಜೊತೆಗಿನ ಸೆಲ್ಫಿಯನ್ನು ರಮ್ಯಾ ಹಂಚಿಕೊಂಡಿದ್ದಾರೆ. 

57

ರಮ್ಯಾ ಮತ್ತು ಅಮೃತಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ರಮ್ಯಾ ಫೋಟೋಗೆ ಸಖತ್ ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟಿ ಎಂದು ಹೇಳುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

67

ರಮ್ಯಾ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಮ್ಯಾ ಯಾವಾಗ ಸಿನಿಮಾ ಮಾಡ್ತಾರೆ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಉತ್ತರಾಖಂಡ ಸಿನಿಮಾಗೆ ನಾಯಕಿಯಾಗುವ ಮೂಲಕ ರಮ್ಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ನಟ ಧನಂಜಯ್‌ಗೆ ನಾಯಕಿಯಾಗಿ ರಮ್ಯಾ ನಟಿಸುತ್ತಿದ್ದಾರೆ. 

77

ಅಂದಹಾಗೆ ರಮ್ಯಾ ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ರಮ್ಯಾ ನಿರ್ಮಾಣಕ್ಕೆ ಇಳಿದಿದ್ದಾರೆ. ಆಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಮ್ಯಾ ತನ್ನ ಮೊದಲ ಸಿನಿಮಾದ ಶೂಟಿಂಗ್ ಕೂಡ ಈಗಾಗಲೇ ಮುಗಿಸಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಸಿನಿಮಾ ಇದಾಗಿದ್ದು ಭಾರಿ ಕೂತಹಲ ಮೂಡಿಸಿದೆ.   
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories