16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ

Published : Feb 12, 2025, 02:28 PM ISTUpdated : Feb 12, 2025, 02:30 PM IST

ಕನ್ನಡದ ಈ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು,  ಸುಂದರ ತಾಣದಲ್ಲಿ ನಿರ್ಮಾಣವಾದ ಸಿನಿಮಾ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಹೇಳಿತ್ತು.

PREV
15
16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ

ಕನ್ನಡದ ಸಿನಿಮಾವೊಂದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಹಾಗಂತ ಇದು ಯಶ್ ಅಭಿನಯದ ಕೆಜಿಎಫ್ ಸಿನಿಮಾ ಅಲ್ಲ. ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಈ ಸಿನಿಮಾ ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಡಬ್ ಆಗಿ ತೆರೆ ಕಂಡಿತ್ತು. 

25
Kantara Movie

ಸಿನಿಮಾ ಟಿಕೆಟ್‌ಗಾಗಿ ಜನರು ಕ್ಯೂನಲ್ಲಿ ನಿಂತಿದ್ದರು. ಕೇವಲ 16 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿ, ಗಳಿಸಿದ್ದು 300 ಕೋಟಿ. ಇಂದಿಗೂ ಜನರು ಟಿವಿಗಳಲ್ಲಿ ಈ ಸಿನಿಮಾ ನೋಡಲು ಇಷ್ಟಪಡುತ್ತಾರೆ. 

35
Kantara Prequel

ಈ ಸಿನಿಮಾದ ಮುಂದುವರಿದ ಭಾಗ ಶೂಟಿಂಗ್ ನಡೆಯುತ್ತಿದ್ದು, ಇದಕ್ಕಾಗಿ 500  ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರದ ಒಂದೊಂದು ಪಾತ್ರಗೂ ಸಹ ವೀಕ್ಷಕರನ್ನು ಸೆಳೆದಿತ್ತು. 
 

45

ನಾವು ಹೇಳುತ್ತಿರೋದು ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ. 2022ರಲ್ಲಿ ಬಿಡುಗಡೆಗೊಂಡಿದ್ದ ಕಾಂತಾರಾ ಸಿನಿಮಾ ಊಹೆಗೆ ನಿಲುಕದ ರೀತಿಯಲ್ಲಿ ಯಶಸ್ವಿಯಾಗಿತ್ತು. ಗ್ರಾಮೀಣ ಕಥೆಯನ್ನು ಹೊಂದಿದ್ದ ಕಾಂತಾರಾದ ಪ್ರತಿಯೊಂದು ಹಾಡುಗಳು ಸೂಪರ್ ಹಿಟ್ ಆಗಿದ್ದವು. 

55
Rishab shetty Kantara

ಕಾಂತಾರಾ ಕದಂಬರ ಕಾಲದ ಸೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಇದೇ ವರ್ಷ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಮೊದಲ ಭಾಗ ಚಿತ್ರ ಸೂಪರ್ ಹಿಟ್ ಆಗಿದ್ದರಿಂದ ಎರಡನೇ ಭಾಗಕ್ಕಾಗಿ ಜನರು ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories