ಅಣ್ಣನ ಜೊತೆ ಮದುವೆ ಬಳಿಕ ಡಿವೋರ್ಸ್‌, 51ನೇ ವರ್ಷದಲ್ಲಿ 2ನೇ ಮದುವೆಯಾದ ನಟಿ; 'ಅಜ್ಜಿ ಆಗೋ ವಯಸ್ಸಲ್ಲಿ ಇದೆಲ್ಲಾ ಬೇಕಾ' ಎಂದ ನೆಟ್ಟಿಗರು!

Published : Sep 15, 2025, 04:13 PM IST

pakistani actress javeria abbasi second marriage ಪ್ರಸಿದ್ಧ ನಟಿ ಜವೇರಿಯಾ ಅಬ್ಬಾಸಿ 51ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಮಗಳ ಸಮ್ಮುಖದಲ್ಲಿ ನಡೆದ ಈ ಮದುವೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

PREV
15

ಅಜ್ಜಿ-ಅಜ್ಜಿಯಾಗುವ ವಯಸ್ಸಿನಲ್ಲಿ ಮತ್ತೆ ಮದುವೆಯಾದದ್ದು ಏಕೆ ಎಂದು ಕೇಳುತ್ತಾ ನೆಟ್ಟಿಗರು ದಂಪತಿಯನ್ನು ಟ್ರೋಲ್ ಮಾಡಿದ್ದಾರೆ. ಇದಕ್ಕೆ ನಟಿ ಬಲವಾದ ಪ್ರತಿಕ್ರಿಯೆ ನೀಡಿದ್ದಾರೆ. ಈ ಮದುವೆಯಲ್ಲಿ ನಟಿಯ ಮಗಳು ಮತ್ತು ಅವರ ಅತ್ತೆ-ಮಾವಂದಿರು ಕೂಡ ಹಾಜರಿದ್ದರು.

25

ಜವೇರಿಯಾ ಅಬ್ಬಾಸಿ ಪಾಕಿಸ್ತಾನಿ ಚಿತ್ರರಂಗದ ಪ್ರಸಿದ್ಧ ನಟಿ. ಜವೇರಿಯಾ ತಮ್ಮ ಚಲನಚಿತ್ರಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ. ಅವರು 2024ರಲ್ಲಿ ಈಕೆ 51 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾದರು. ಅವರ ಮಗಳು, ಅಳಿಯ ಮತ್ತು ಸೊಸೆಯಂದಿರು ಸಹ ಮದುವೆಯಲ್ಲಿ ಹಾಜರಿದ್ದರು.

35

ಜವೇರಿಯಾ ಮೊದಲು 1997 ರಲ್ಲಿ ತನ್ನ ಅಣ್ಣ ಶಮೂನ್ ಅಬ್ಬಾಸಿಯನ್ನು ವಿವಾಹವಾಗಿದ್ದರು. 12 ವರ್ಷಗಳ ದಾಂಪತ್ಯದ ನಂತರ, ಅವರು 2009 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ರು. ದಂಪತಿಗೆ ಏಂಜೆಲಾ ಅಬ್ಬಾಸಿ ಎಂಬ ಮಗಳಿದ್ದಾಳೆ. ಜವೇರಿಯಾ ಅಬ್ಬಾಸಿ ರೀತಿಯಲ್ಲಿ ಏಂಜೆಲಾ ಅಬ್ಬಾಸಿ ಕೂಡ ಪ್ರಖ್ಯಾತ ನಟಿ.

45

ಸುಮಾರು 15 ವರ್ಷಗಳ ವಿಚ್ಛೇದನದ ನಂತರ, ಜವೇರಿಯಾ ತಮ್ಮ 51 ನೇ ವಯಸ್ಸಿನಲ್ಲಿ ಉದ್ಯಮಿ ಆದಿಲ್ ಹೈದರ್ ಅವರನ್ನು ವಿವಾಹವಾಗಿದ್ದಾರೆ. ಈ ಎರಡನೇ ಮದುವೆಯ ಕಾರಣದಿಂದಾಗಿ ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಈ ಮದುವೆಯ ಬಗ್ಗೆ ತಿಳಿಸಿದರು. ಇದಕ್ಕಾಗಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದಾರೆ.

55

ಮ್ಯಾಗಝೀನ್‌ಗೆ ನೀಡಿದ ಸಂದರ್ಶನದಲ್ಲಿ, ಜವೇರಿಯಾ ಅವರ ಪತಿ ಆದಿಲ್ ಟ್ರೋಲಿಂಗ್ ಬಗ್ಗೆ ಮೌನ ಮುರಿದರು. "ಜನರು ನಮ್ಮ ಬಗ್ಗೆ ತುಂಬಾ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಮಗೆ ವಯಸ್ಸಿನ ವ್ಯತ್ಯಾಸವಿಲ್ಲ. ನಾವು ಒಂದೇ ವಯಸ್ಸಿನವರು. ನಮ್ಮ ಆದ್ಯತೆಗಳು ಸಹ ಒಂದೇ ಆಗಿವೆ. ನಾನು ಕೂಡ ಮುಸ್ಲಿಂ" ಎಂದು ಅವರು ವಿವರಿಸಿದ್ದಾರೆ.

Read more Photos on
click me!

Recommended Stories