ತಮಿಳುನಾಡಿನಲ್ಲಿ ಆಧುನಿಕ ಷಹಜಹಾನ್; ಮೃತ ಪತ್ನಿಗಾಗಿ ದೇವಾಲಯ ನಿರ್ಮಾಣ!

First Published | Dec 11, 2024, 4:13 PM IST

ದೆಹಲಿಯ ಆಗ್ರಾದಲ್ಲಿ ಪ್ರೇಮ ಸ್ಮಾರಕವಾಗಿ ಮೊಘಲ್ ಸಾಮ್ರಾಜ್ಯದ ಸುಲ್ತಾನ್ ಷಹಜಹಾನ್ ತಾಜ್ ಮಹಲ್ ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ತಮಿಳುನಾಡಿನ ಸ್ಟ್ಯಾಂಡಪ್ ಕಾಮಿಡಿಯನ್ ಒಬ್ಬರು ತಮ್ಮ ಹೆಂಡತಿಯ ಅಗಲಿಕೆಗಾಗಿ ಹೆಂಡತಿಗೆ ದೇವಾಲಯ ನಿರ್ಮಿಸುತ್ತಿದ್ದಾರೆ.

ವಿಜಯ್ ಟಿವಿಯಿಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಫೇಮಸ್ ಆದವರು ತುಂಬಾ ಜನ. ಅವರಲ್ಲಿ ಒಬ್ಬರು ಮದುರೈ ಮುತ್ತು. 'ಕಲಕ್ಕಪೋವದು ಯಾರು' ಶೋನಲ್ಲಿ ಮದುರೈ ತಮಿಳಲ್ಲಿ ಕಾಮಿಡಿ ಪಂಚ್‌ಗಳನ್ನ ಹೊಡೆದು ಫೇಮಸ್ ಆದ ಮುತ್ತು, ಬೇರೆ ಶೋಗಳಲ್ಲೂ ಭಾಗವಹಿಸಿದ್ದಾರೆ.

ಕೆಲವು ಕಾಮಿಡಿ ಶೋಗಳಲ್ಲಿ ಜಡ್ಜ್ ಆಗಿಯೂ ಇದ್ದಾರೆ. 'ಕುಕ್ ವಿಥ್ ಕೋಮಾಲಿ'ಯಲ್ಲಿ ಮೊದಲು ಕುಕ್ ಆಗಿ ಬಂದು, ಆಮೇಲೆ ಜಡ್ಜ್ ಆಗಿ, ಈಗ ಕೋಮಾಲಿ ಆಗಿದ್ದಾರೆ. ಇದೇ ಕಾಮಿಡಿಯನ್ ಮದುರೈ ಮುತ್ತು, ತಮ್ಮ ಮಡದಿ ಲೋಕ ಮತ್ತು ಅಪ್ಪಅಮ್ಮನಿಗೆ ಗುಡಿ ಕಟ್ಟಿಸುತ್ತಿರುವುದಾಗಿ ತಿಳಿಸಿದ್ದು, ನಿರ್ಮಾಣ ಕಾರ್ಯದ ಫೋಟೋ ಕೂಡ ಹಂಚಿಕೊಂಡಿದ್ದಾರೆ.

Tap to resize

ಮದುರೈ ಮುತ್ತು ಅವರು ಮೊದಲು ಲೋಕ ಎನ್ನುವ ಯುವತಿ ಮದುವೆಯಾಗಿ ಸಂಸಾರ ಮಾಡುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದರು. ಆದರೆ, ಅವರ ಕುಟುಂಬಕ್ಕೆ 2016ನೇ ವರ್ಷದಲ್ಲಿ ನಡೆದ ಒಂದು ಕಾರು ಅಪಘಾತ ಇಡೀ ಕುಟುಂಬದ ಹಡಗನ್ನೇ ದಿಕ್ಕಾಪಾಲಾಗಿ ಮಾಡಿದರು. ಈ ಕಾರು ಅಪಘಾತದಲ್ಲಿ ಮಉತ್ತು ಅವರ ಹೆಂಡತಿ ಲೋಕಾ ನಿಧನರಾದರು.

ಆದರೆ, ಮಕ್ಕಳು ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಎರಡು ವರ್ಷಗಳ ನಂತರ, ಮುತ್ತು ತಮ್ಮ ಪತ್ನಿಯ ಗೆಳತಿ ಡೆಂಟಿಸ್ಸ್ ನೀತು ಅವರನ್ನು ಎರಡನೇ ಮದುವೆ ಆದರು. ಇದೀಗ ಎರಡನೇ ಹೆಂಡತಿ ನೀತುಗೆ 5 ವರ್ಷದ ಗಂಡು ಮಗ ಇದ್ದಾನೆ. ಮುತ್ತು ಈಗ ಎರಡನೇ ಪತ್ನಿ, ಮಕ್ಕಳ ಜೊತೆ ಚೆನ್ನಾಗಿದ್ದಾರೆ.

ಮೊದಲ ಪತ್ನಿ ಲೋಕ ಮತ್ತು ಅಪ್ಪಅಮ್ಮನಿಗೆ ತವರೂರು ಅರಸಪಟ್ಟಿಯಲ್ಲಿ ಗುಡಿ ಕಟ್ಟಲು ಮುತ್ತು ಪ್ಲಾನ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ತಿಳಿಸಿದ್ದಾರೆ. ಕೆಲಸ ಈಗ ಭರದಿಂದ ಸಾಗುತ್ತಿದೆ.

Latest Videos

click me!