Sex and Health: ಮಾಡಬಾರದ ತಪ್ಪುಗಳಿವು

Suvarna News   | Asianet News
Published : Nov 08, 2021, 07:09 PM ISTUpdated : Nov 08, 2021, 07:19 PM IST

ಸೆಕ್ಸ್ ದಾಂಪತ್ಯ ಜೀವನದಲ್ಲಿ (married life) ತುಂಬಾ ಮುಖ್ಯ. ಸಂಗಾತಿಯೊಂದಿಗೆ ಆರೋಗ್ಯಕರ ಬಂಧವನ್ನು ಬೆಳೆಸುವುದು ಮುಖ್ಯ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಸಂಗಾತಿಯೊಂದಿಗಿನ ಜೀವನದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಸಂಗಾತಿಯೊಂದಿಗೆ ಆತ್ಮೀಯ ದೈಹಿಕ ಸಂಬಂಧ ಹೊಂದುವುದು ಕೂಡ ಸಂಬಂಧದ ಪ್ರಮುಖ ಭಾಗವಾಗಿದೆ.

PREV
19
Sex and Health: ಮಾಡಬಾರದ ತಪ್ಪುಗಳಿವು

ಹಾಸಿಗೆಯಲ್ಲಿ ಲೈಂಗಿಕ ಪರಾಕಾಷ್ಠೆಯ (orgasm) ನಂತರವೂ, ನಿಮ್ಮ ನಿಕಟ ಸಂಬಂಧವು ಆರೋಗ್ಯಕರವಾಗಿರಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿದಿದೆಯೇ? ಹೌದು, ಲೈಂಗಿಕ ಕ್ರಿಯೆ ನಡೆಸಿದ ನಂತರ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಇದರಿಂದ ಗುಪ್ತಾಂಗಗಳು ಆರೋಗ್ಯಕರ ಮತ್ತು ಸ್ವಚ್ಛವಾಗಿರುತ್ತದೆ ಮತ್ತು ಯಾವುದೇ ಸೋಂಕು ಇರುವುದಿಲ್ಲ.

29

ಸೋಪು ಹಚ್ಚಬೇಡಿ (do not use soap): ಲೈಂಗಿಕ ಕ್ರಿಯೆ ಬಳಿಕ ಅನೇಕ ಮಹಿಳೆಯರು ಸ್ನಾನ ಮಾಡಲು ಬಯಸುತ್ತಾರೆ. ಆದರೆ ಯೋನಿ ಪ್ರದೇಶದಲ್ಲಿ ಸಾಬೂನನ್ನು ತಪ್ಪಿಯೂ ಬಳಸಬೇಡಿ. ಹೀಗೆ ಮಾಡುವುದರಿಂದ ಖಾಸಗಿ ಭಾಗದ ನೈಸರ್ಗಿಕ ತೇವಾಂಶ ಮಟ್ಟವು ತೊಂದರೆಗೊಳಗಾಗುತ್ತದೆ, ಇದು ನಂತರ ಸೋಂಕಿಗೆ ಕಾರಣವಾಗುತ್ತದೆ.

39

ಒಳ ಉಡುಪು ಧರಿಸಬೇಡಿ (avoid inner wear) : ಸೆಕ್ಸ್ ಬಳಿಕ ಉತ್ತಮ ನಿದ್ರೆ ಬರುವ ಯೋಚನೆಯಲ್ಲಿದ್ದರೆ ಒಳ ಉಡುಪು ಧರಿಸಿ ಮಲಗಬೇಡಿ. ರಾತ್ರಿ ಬಟ್ಟೆ ಇಲ್ಲದೆ ಮಲಗುವ ಅನೇಕ ಪ್ರಯೋಜನಗಳನ್ನು ಸಹ ವಿವರಿಸಲಾಗಿದೆ. ವಾಸ್ತವವಾಗಿ, ಕೆಲವೊಮ್ಮೆ ಖಾಸಗಿ ಭಾಗದ ಒದ್ದೆಯು ದೇಹದ ಬಟ್ಟೆಯೊಂದಿಗೆ ಪ್ರತಿಕ್ರಿಯಿಸುತ್ತದೆ, ಇದು ಸೋಂಕಿಗೆ ಕಾರಣವಾಗುತ್ತದೆ.

49

ವೆಟ್ ವೈಪರ್ ಬಳಸಬೇಡಿ (do not use wet wiper) :ಲೈಂಗಿಕತೆಯ ನಂತರ ನೀವು ಸೋಮಾರಿತನ ಮೂಡುವುದು ಸಾಮಾನ್ಯ ಮತ್ತು ಹಾಸಿಗೆಯಿಂದ ಎದ್ದೇಳಬೇಕು ಎಂದು ಅನಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಗುಪ್ತಾಂಗವನ್ನು ಒದ್ದೆ  ವೈಪರ್ ಮೂಲಕ ಸ್ವಚ್ಛಗೊಳಿಸುತ್ತಾರೆ. ಈ ಒದ್ದೆ ವೈಪರ್ ರಾಸಾಯನಿಕಗಳನ್ನು ಹೊಂದಿರುವುದರಿಂದ ಮತ್ತು  ಖಾಸಗಿ ಭಾಗದಂತಹ ಸೂಕ್ಷ್ಮ ಸ್ಥಳಕ್ಕೆ ಸುರಕ್ಷಿತವಲ್ಲದ ಕಾರಣ ಇದನ್ನು ತಪ್ಪಿಸಲು ಸೂಚಿಸಲಾಗಿದೆ.

59

ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡುವುದು (hot water shower): ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ನಾನ ಮಾಡುವುದು ಉತ್ತಮ ಆಯ್ಕೆ. ಆದರೆ ಹೆಚ್ಚು ಬಿಸಿ ನೀರನ್ನು ಬಳಸುವುದನ್ನು ತಪ್ಪಿಸಿ. ಇದು ಯೋನಿಯನ್ನು ಹೆಚ್ಚು ಡ್ರೈ ಮಾಡಬಹುದು ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು.ಆದುದರಿಂದ ಕಡಿಮೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. 

69

ಮೂತ್ರ ವಿಸರ್ಜನೆ ಮಾಡದೇ ಇರೋದು (urinating) : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆಯನ್ನು ನಿಲ್ಲಿಸುವ ತಪ್ಪು ಮಾಡಬೇಡಿ. ಸಂಬಂಧ ಹೊಂದಿದ್ದ ನಂತರ, ನೀವು ವಿಶೇಷವಾಗಿ ಮೂತ್ರ ವಿಸರ್ಜನೆಗೆ ಹೋಗಬೇಕು. ಇದು ಮೂತ್ರದ ಮೂಲಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳನ್ನು ಹೊರಹಾಕುತ್ತದೆ ಮತ್ತು ಯುಟಿಐ ಅಪಾಯವನ್ನು ಉಂಟುಮಾಡುವುದಿಲ್ಲ.
 

79

ಬಿಗಿಯಾದ ಬಟ್ಟೆ ಧರಿಸಬೇಡಿ (wearing tight dress) : ಲೈಂಗಿಕ ಕ್ರಿಯೆ ಬಳಿಕ  ದೇಹ ಬೆಚ್ಚಗಾಗುತ್ತದೆ ಮತ್ತು ಬೆವರುತ್ತೀರಿ. ನೈಲಾನ್ ಅಥವಾ ಸಿಂಥೆಟಿಕ್ ಒಳ ಉಡುಪು ಧರಿಸಿದರೆ, ಅದು ತುರಿಕೆಗಳನ್ನು ಸೃಷ್ಟಿಸಬಹುದು. ಇದಲ್ಲದೆ, ಆ ನೈಲಾನ್ ಉಂಡೆಗಳು ಯೋನಿ ಸ್ರವಿಕೆಗಳೊಂದಿಗೆ ಸಂಪರ್ಕಕ್ಕೆ ಪಡೆದ ನಂತರ ತುರಿಕೆಗೆ ಕಾರಣವಾಗಬಹುದು.

89

ಯಾವಾಗಲೂ ಸೆಕ್ಸ್ ಟಾಯ್ಸ್ ಸ್ವಚ್ಛಗೊಳಿಸಿ (clean sex toys) ಉತ್ತಮ ಸೆಕ್ಸ್ ಗಾಗಿ ಸೆಕ್ಸ್ ಟಾಯ್ಸ್ ಬಳಕೆ ಮಾಡುತ್ತಿದ್ದರೆ ಅವುಗಳನ್ನು ಚೆನ್ನಾಗಿ ಕ್ಲೀನ್ ಮಾಡಲು ಮರೆಯಬೇಡಿ. ಈ ವಸ್ತುಗಳು ವೀರ್ಯ ಮತ್ತು/ಅಥವಾ ಯೋನಿ ವಿಸರ್ಜನೆಗೆ ಒಡ್ಡಲ್ಪಡುತ್ತವೆ, ಇದರಿಂದ ಅವು ಬ್ಯಾಕ್ಟೀರಿಯಾಗಳ ಶೇಖರಣೆಗೆ ಒಳಗಾಗುತ್ತವೆ. ಇದರರ್ಥ ಲೈಂಗಿಕ ಕ್ರಿಯೆ ಬಳಿಕ ಸ್ವಚ್ಛಗೊಳಿಸದಿದ್ದರೆ ಅವು ಸೋಂಕಿಗೆ ಕಾರಣವಾಗಬಹುದು.

99

ಕೈಗಳನ್ನು ತೊಳೆಯಿರಿ (eash your hands)
ಲೈಂಗಿಕ ಕ್ರಿಯೆಯ ಸಮಯದಲ್ಲಿ ಸೂಕ್ಷ್ಮ ಭಾಗಗಳನ್ನು ಸಹ ಕೈಯಲ್ಲಿ ಮುಟ್ಟಿರುವ ಸಾಧ್ಯತೆ ಇದೆ. ಆದ್ದರಿಂದ, ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಕೈಗಳನ್ನು ಸ್ವಚ್ಛಗೊಳಿಸುವುದು ಮುಖ್ಯ. ಹಾಗೆ ಮಾಡದಿರುವುದು ಅನೇಕ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕಾರಣವಾಗಬಹುದು. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ. 

Read more Photos on
click me!

Recommended Stories