ವಿದೇಶದಲ್ಲಿ ಓದಿ ಉದ್ಯೋಗ ಪಡೆಯುವ ಆಸೆ ಇಟ್ಕೊಂಡವ್ರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಭಾರತೀಯ ಮಹಿಳೆ!

Published : May 13, 2025, 02:16 PM ISTUpdated : May 13, 2025, 02:29 PM IST

ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಲಂಡನ್‌ನಲ್ಲಿ ಮಾಸ್ಟರ್ಸ್ ಪದವಿ ಮಾಡದಂತೆ ಸಲಹೆ ನೀಡಿದ್ದಾರೆ. 

PREV
15
ವಿದೇಶದಲ್ಲಿ ಓದಿ ಉದ್ಯೋಗ ಪಡೆಯುವ ಆಸೆ ಇಟ್ಕೊಂಡವ್ರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಭಾರತೀಯ ಮಹಿಳೆ!

ಪದವಿ ಪಡೆದ ನಂತರ ಅಲ್ಲಿಯೇ ಉದ್ಯೋಗ ಪಡೆಯೋದು ಕಷ್ಟ ಎಂದಿದ್ದಾರೆ. ಈ ಮಹಿಳೆ ಭಾರತದಲ್ಲಿ ಸ್ನಾತಕ ಪದವಿ ಪಡೆದ ನಂತರ ಲಂಡನ್‌ಗೆ ಮಾಸ್ಟರ್ಸ್‌ ಮಾಡಲು ಬಂದಿದ್ದು, ಅದೃಷ್ಟವಶಾತ್ ಲಂಡನ್‌ನಲ್ಲಿ ಉದ್ಯೋಗ ಪಡೆದ ಕೆಲವರಲ್ಲಿ ಒಬ್ಬರಾಗಿದ್ದಾರೆ.

25

ಮೇ 11ರಂದು ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ನನ್ನ ಬ್ಯಾಚ್‌ನ 90% ವಿದ್ಯಾರ್ಥಿಗಳು ಲಂಡನ್‌ನಲ್ಲಿ ಉದ್ಯೋಗ ಸಿಗದೆ ತವರಿಗೆ ಮರಳಿದ್ದಾರೆ” ಎಂದು ಬಹಿರಂಗಪಡಿಸಿದ್ದಾರೆ.


 

35

"ನಾನು ಲಂಡನ್‌ಗೆ ಮಾಸ್ಟರ್ಸ್‌ಗೆ ಬರಬೇಕೆಂದು ಕೆಲವರು ಮೆಸೇಜ್ ಕಳುಹಿಸುತ್ತಾರೆ, ಆದರೆ ನಾನು ಬರಬೇಡಿ ಎಂದು ಹೇಳುತ್ತೇನೆ. ನನ್ನ ಬ್ಯಾಚ್‌ನ 90% ಜನರಿಗೆ ಉದ್ಯೋಗ ಸಿಗಲಿಲ್ಲ, ಅವರೆಲ್ಲ ಭಾರತಕ್ಕೆ ಹಿಂತಿರುಗಬೇಕಾಯಿತು. ಒಂದು ವೇಳೆ ನೀವು ಹಣ ಖರ್ಚು ಮಾಡಲು ಸಿದ್ಧರಿದ್ದರೆ ಮಾತ್ರ ಇಲ್ಲಿಗೆ ಬರಲು ಯೋಚಿಸಿ" ಎಂದು ಅವರು ಹೇಳಿದ್ದಾರೆ.

45

ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಈ ಪರಿಸ್ಥಿತಿ ಹಿಂದೆ ಉತ್ತಮವಾಗಿತ್ತು. ಹಿಂದೆ 60 ರಿಂದ 70% ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿತ್ತು. ಇಷ್ಟು ಕೆಟ್ಟದಾಗಿರಲಿಲ್ಲ, ಶ್ರೀಮಂತರ ಮಕ್ಕಳಿಗೆ ಸಂತೋಷಕ್ಕಾಗಿ" ಎಂದೆಲ್ಲ ಹೇಳಲಾಗಿದೆ. 
 

55

"ಇದು ಯಾವ ಕ್ಷೇತ್ರ ಎನ್ನೋದರ ಮೇಲೆ ಆಧಾರಿತವಾಗಿರುತ್ತದೆ, ಅಲ್ವೇ? ಆಗ ವೈದ್ಯಕೀಯ, ಹಣಕಾಸು ಕ್ಷೇತ್ರಗಳು ಉತ್ತುಂಗದಲ್ಲಿವೆ ಅಲ್ವಾ? ಎಂದು ಪ್ರಶ್ನೆ ಮಾಡಲಾಗಿದೆ. ಆಗ ಈ ಮಹಿಳೆ ಹಣಕಾಸು ಕ್ಷೇತ್ರದಲ್ಲಿಯೂ ಉದ್ಯೋಗಗಳು ಕಡಿಮೆಯಾಗಿವೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಗೊತ್ತಿಲ್ಲ, ಆದರೆ ಹಣಕಾಸು ಕ್ಷೇತ್ರದಲ್ಲಿಯೂ ಉದ್ಯೋಗ ಸಿಗುತ್ತಿಲ್ಲ" ಎಂದು ಬರೆದಿದ್ದಾರೆ. ಅನೇಕರು ಈ ಮಹಿಳೆಯ ಪ್ರಾಮಾಣಿಕ ಮತ್ತು ಸ್ಪಷ್ಟ ಅಭಿಪ್ರಾಯಕ್ಕೆ ಧನ್ಯವಾದ ತಿಳಿಸಿದ್ದಾರೆ. 
 

Read more Photos on
click me!

Recommended Stories