ಜಾಬ್‌ ಬಿಡೋದು ಬಿಡ್ತೀರಾ! ಈ 10 ಟಿಪ್ಸ್‌ ಫಾಲೋ ಮಾಡದಿದ್ರೆ ನಿಮಗೆ ಶನಿ ಹೆಗಲೇರೋದು ಗ್ಯಾರಂಟಿ!

ಆಫೀಸ್‌ನಲ್ಲಿ ಕೆಲಸ ಜಾಸ್ತಿ ಆಯ್ತು, ಮ್ಯಾನೇಜರ್‌ ಹಿಂಸೆ ತಡೆಯೋಕೆ ಆಗ್ತಿಲ್ಲ, ಹೈಕ್‌ ಸಿಗ್ತಿಲ್ಲ, ಸಂಬಳ ಕಡಿಮೆ, ಇನ್ನೇನೋ ಸಮಸ್ಯೆ ಅಂತ ಕೆಲಸ ಬಿಡುವ ಆಲೋಚನೆ ಮಾಡಬಹುದು. ಆದರೆ ಆ ಕೆಲಸವನ್ನು ಬಿಡುವ ಮುನ್ನ ನೀವು ಈ ಟಿಪ್ಸ್‌ ಪಾಲಿಸದೆ ಇದ್ದರೆ ನೀವು ಕೆಲಸ ಬಿಟ್ಟಮೇಲೂ ಸಮಸ್ಯೆ ಹೆಗಲೇರುತ್ತದೆ.  ಹಾಗಾದರೆ ಏನು ಮಾಡಬೇಕು? 

Don not Make These 10 Mistakes when you are quitting job

ನೀವು ಕೆಲಸ ಬಿಡುವಾಗ ಸಾಕಷ್ಟು ವಿಷಯಗಳನ್ನು ನೆನಪಿಡಬೇಕು. ಹಾಗಾದರೆ ಏನೆಲ್ಲ ಮಾಡಬೇಕು? ಈ ಹತ್ತು ಸಲಹೆಗಳನ್ನು ಮಾತ್ರ ಮರೆಯಬೇಡಿ. 

Don not Make These 10 Mistakes when you are quitting job

‌ಒಂದು ತಿಂಗಳಿಂದ ಮೂರು ತಿಂಗಳವರೆಗೆ ನೋಟೀಸ್‌ ಪೀರಿಯಡ್ ಇರುತ್ತದೆ. ಈ ನೋಟೀಸ್‌ ಪೀರಿಯಡ್‌ ಮುಗಿಸದೆ ಕೆಲಸವನ್ನು ಬಿಡಬೇಡಿ. ಆರಾಮಾಗಿ ಕೆಲಸ ಮಾಡಿ ಹೊರಗಡೆ ಬನ್ನಿ. ನಿಮ್ಮ ಬಗ್ಗೆ ಒಳ್ಳೆಯ ಇಂಪ್ರೆಶನ್‌ ಬೇಕು.


ನೀವು ಭಾವನಾತ್ಮಕವಾಗಿ ಡಿಸೈಡ್‌ ಮಾಡಬೇಡಿ. ಹತಾಶೆಯಿಂದ ಹೊರಗಡೆ ಬರಬೇಕು ಅಂತ ಆಲೋಚಿಸಬೇಡಿ. ಸಿಕ್ಕಾಪಟ್ಟೆ ಪ್ಲ್ಯಾನ್‌ ಮಾಡಿ ಹೊರಗಡೆ ಬನ್ನಿ.

ಕೆಲಸವನ್ನು ಅರ್ಧಕ್ಕೆ ಉಳಿಸಬೇಡಿ. ನೀವು ಆ ಕಂಪೆನಿಯಿಂದ ಹೊರಗಡೆ ಬರುವ ಮುನ್ನ ಎಲ್ಲ ಕೆಲಸ ಮಾಡಿ ಹೊರಗಡೆ ಬನ್ನಿ. ಆಗ ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ.
 

ಯಾವುದೇ ಕಾರಣಕ್ಕೂ ಕಾನೂನಾತ್ಮಕ ಒಪ್ಪಂದನ್ನು ಮರೆಯಬೇಡಿ. ನೀವು ಆ ಕಂಪೆನಿಯಿಂದ ಹೊರಗಡೆ ಬರುವಾಗ ಎಲ್ಲವನ್ನು ಪ್ರಿಂಟ್‌ ತೆಗೆದು, ಅದನ್ನು ಇನ್ನೊಮ್ಮೆ ಓದಿ, ನೀವು ಯಾವುದೇ ರೂಲ್ಸ್‌ ಬ್ರೇಕ್‌ ಮಾಡಿಲ್ಲ ಎಂದು ಖಚಿತಪಡಿಸಿಕೊಳ್ಳಿ.
 

ಸಹದ್ಯೋಗಿಗಳ ಜೊತೆ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಒಳ್ಳೆಯ ಸ್ನೇಹದಿಂದ ನೀವು ಇರಬೇಕು. ಕೃತಜ್ಞತೆ ಹಾಗೂ ಪ್ರೊಫೆಶನಲಿಸಂನಿಂದ ನೀವು ಆ ಕಂಪೆನಿಯಿಂದ ಹೊರಗಡೆ ಬರಬೇಕು. 

ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಂಡು ಹೊರಗಡೆ ಬರಬೇಕು. ನಿಮ್ಮ ಬದಲು ಕೆಲಸ ಮಾಡುವ ವ್ಯಕ್ತಿಯನ್ನು ಎಲ್ಲರಿಗೂ ಪರಿಚಯಿಸಿ. ಇದು ಎಲ್ಲರಿಗೂ ಅರ್ಥ ಆಗಬೇಕು. 

ಎಲ್ಲರಿಗೂ ಗುಡ್‌ಬೈ ಹೇಳಿ ಹೊರಗಡೆ ಬರಬೇಕು. ಈ ಸಣ್ಣ ವಿಚಾರವೂ ದೊಡ್ಡ ಮಟ್ಟದಲ್ಲಿ ಲೆಕ್ಕಕ್ಕೆ ಬರುತ್ತದೆ. ಇದರ ಬೆಲೆ ನಿಮಗೆ ಕೊನೆಯಲ್ಲಿ ಗೊತ್ತಾಗುವುದು. 
 

ನಿಮ್ಮ ಕೆಲಸಗಳನ್ನು ಉಳಿದವರ ಮೇಲೆ ಹೇರಬೇಡಿ. ಅದನ್ನು ನೀವು ಉಳಿದವರಿಗೂ ಹಂಚಿ, ಆಗ ನಿಮ್ಮ ಮೇಲೆ ಅವರಿಗೆ ಕರುಣೆಯ ಭಾವ ಬರುವುದು. 

ನೀವು ಹೊರಗಡೆ ಬರುವಾಗ ಎಲ್ಲರಿಗೂ ಗುಡ್‌ಬೈ ಹೇಳಿ ಹೊರಗಡೆ ಬರಬೇಕು, ನಿಮ್ಮಲ್ಲಿ ಕೃತಜ್ಞತಾ ಭಾವ, ಪಾಸಿಟಿವ್‌ ಭಾವನೆ ಇರಬೇಕು. 

Latest Videos

vuukle one pixel image
click me!