Salary Hike Sensation: ಒಂದೇ ವರ್ಷದಲ್ಲಿ 5 ಲಕ್ಷದಿಂದ 45 ಲಕ್ಷ ರೂ.ವರೆಗೆ CTC ಪಡೆದ ಸಾಫ್ಟ್‌ವೇರ್‌ ಇಂಜಿನಿಯರ್! ಹೇಗೆ?

Published : May 30, 2025, 03:37 PM ISTUpdated : May 30, 2025, 03:57 PM IST

ಒಂದು ಕಂಪೆನಿಯೊಂದು ಇನ್ನೊಂದು ಕಂಪೆನಿಗೆ ಹೋಗುತ್ತಿದ್ದಂತೆ ಇಂಜಿನಿಯರ್‌ ಓರ್ವರಿಗೆ 5 ಲಕ್ಷದಿಂದ  45 ಲಕ್ಷದವರೆಗೆ ಹೈಕ್‌ ಪಡೆದಿದ್ದಾರೆ. 

PREV
17

ಈ ಹಿಂದೆ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಒಬ್ಬರು ಈಗ ಬೇರೆ ಕಂಪೆನಿಗೆ ಹೋಗಿದ್ದು, ಅಲ್ಲಿ ಅವರಿಗೆ 700% ಹೈಕ್‌ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಅನೇಕರು ಆಶ್ಚರ್ಯಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

27

ಕಳೆದ ವರ್ಷ ಐಬಿಎಂನಲ್ಲಿ ದೇವೇಶ್ ಕುಮಾರ್ ಅವರನ್ನು ಅಸೋಸಿಯೇಟ್ ಸಿಸ್ಟಮ್ ಇಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. "ನಾನು ಕಳೆದ ವರ್ಷ ಐಬಿಎಂನಲ್ಲಿ ಕೇವಲ ವರ್ಷಕ್ಕೆ 5.5 ಲಕ್ಷ ರೂಪಾಯಿ ಸಿಟಿಸಿಯೊಂದಿಗೆ ಕೆಲಸ ಶುರು ಮಾಡಿದರು" ಎಂದು ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

37

ದೇವೇಶ್ ಕುಮಾರ್‌ ಅವರು,”ಒಂದು ವರ್ಷದೊಳಗೆ ಇಂತಹ ವೇತನವನ್ನು ಸಾಧಿಸಿದ್ದು ಕನಸೋ ಅಥವಾ ನನಸೋ ಅಂತ ಎನಿಸುತ್ತದೆ. ನನಗೆ ಒಂದು ವರ್ಷದೊಳಗೆ 45 ಲಕ್ಷ ರೂಪಾಯಿಯ CTC ಸಿಕ್ಕಿದೆ. ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾದ ನನಗೆ, ಇದು ಇನ್ನೂ ಕನಸಿನಂತಿದೆ" ಎಂದು ಅವರು ಹೇಳಿದ್ದಾರೆ.

47

ಇಂಟರ್ನೆಟ್‌ನಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ಕೇಳಿ ಬರುತ್ತಿದೆ. ಕೆಲವರು ಅವರ ಭಾರೀ ವೇತನ ವೃದ್ಧಿಯಿಂದ ಆಶ್ಚರ್ಯಪಟ್ಟರೆ, ಇನ್ನೂ ಕೆಲವರು ಒಂದು ವರ್ಷದಲ್ಲಿ ಇಂತಹ ಹೈಕ್‌ ವಾಸ್ತವಿಕವಾಗಿ ನಿಜವೇ? ಸಾಧ್ಯ ಇದೆಯೇ? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

57

"ಒಂದು ವರ್ಷದೊಳಗೆ 45 ಎಲ್‌ಪಿಎ ಆಫರ್? ಇದು ಅದ್ಭು," ಎಂದು ಒಬ್ಬರು ಹೇಳಿದ್ದರೆ, ಇನ್ನೂ ಕೆಲವರು "ಕೆಲವು ಸಲಹೆಗಳನ್ನು ಹಂಚಿಕೊಳ್ಳಿ" ಎಂದಿದ್ದಾರೆ. "ಹೇಗೆ ಮಾತುಕತೆ ನಡೆಸುತ್ತಾರೆ, ಪ್ರಸ್ತುತ ವರ್ಷಕ್ಕೆ 5.5 ಲಕ್ಷ ರೂಪಾಯಿ ನೋಡಿ, ಗರಿಷ್ಠ 25% ಹೈಕ್‌ ಕೊಡುತ್ತಾರೆ. ಆದರೆ ನಿಮಗೆ ಹೇಗೆ ಹೈಕ್‌ ಸಿಗ್ತು? ಎಂದು ಪ್ರಶ್ನೆ ಮಾಡಿದ್ದಾರೆ.

67

"ಇದು ಸಾಮಾನ್ಯವಲ್ಲ. ಸಾಮಾನ್ಯವಲ್ಲದ್ದು ಅಸಾಧ್ಯವೂ ಅಲ್ಲ. ಆದರೆ ಇದು ನಿಜವೇ ಎಂದು ಖಚಿತಪಡಿಸಲು ಹೆಚ್ಚಿನ ಮಾಹಿತಿ ಬೇಕು. ಏಕೆಂದರೆ ಸೋಶಿಯಲ್‌ ಮೀಡಿಯಾದಲ್ಲಿ ಏನು ಬೇಕಾದರೂ ಹೇಳುವುದು ಸಾಮಾನ್ಯ” ಎಂದು ಓರ್ವರು ಹೇಳಿದ್ದಾರೆ. "ಮುಂದಿನ ವರ್ಷ ಅವರ ಸಿಟಿಸಿ ಪ್ರತಿ ವರ್ಷ 47 ಕೋಟಿ ರೂಪಾಯಿ" ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಇನ್ನೊಬ್ಬರು "ಆರಂಭಿಕ ಯಶಸ್ಸು ಒಂದು ವಂಚನೆ, ಇದನ್ನು ಕೆಲವರು ನನಗೆ ಹೇಳಿದ್ದರು” ಎಂದಿದ್ದಾರೆ.

77

ಕೆಲವು ಕಂಪನಿಗಳು ನಿಗದಿತ ಪೋಸ್ಟ್‌ಗಳಿಗೆ ನಿಗದಿತ ವೇತನ ಶ್ರೇಣಿಯನ್ನು ಕೊಡುತ್ತವೆ. ನಿಮ್ಮ ಹಿಂದಿನ ವೇತನದ ಸ್ಲಿಪ್‌ಗಳನ್ನು ನೋಡದೆ ನೇಮಕ ಮಾಡಿಕೊಳ್ಳುತ್ತವೆ ಎಂದು ಓರ್ವರು ಹೇಳಿದ್ದಾರೆ. "MAANG ಅಥವಾ FAANG (ಏನೇ ಆಗಿರಲಿ) ಕಂಪನಿಗಳು ತಮ್ಮ ಮೂಲ ವೇತನ, ಸಿಟಿಸಿಯನ್ನು ಮೊದಲೇ ಫಿಕ್ಸ್‌ ಮಾಡಿರುತ್ತದೆ. ಹೀಗಾಗಿ ಎಲ್ಲರಿಗೂ ಸಮಾನವಾಗಿರುತ್ತದೆ. ಅವರು ನಿಮ್ಮ ಹಿಂದಿನ ಸಂಬಳವನ್ನು ಆಧರಿಸಿ ನಿಮ್ಮನ್ನು ತೀರ್ಮಾನಿಸುವುದಿಲ್ಲ.

Read more Photos on
click me!

Recommended Stories