ಜೀವನದಲ್ಲಿ ಅತಿಹೆಚ್ಚು ತೃಪ್ತಿ ನೀಡುವ ನೌಕರಿ, ಅತ್ಯಂತ ಕಿರಿಕಿರಿಯ ಉದ್ಯೋಗಗಳಾವುವು?

Published : May 22, 2025, 02:47 PM IST

ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ವಿಜ್ಞಾನಿಗಳು 59,000 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಅತ್ಯಂತ ತೃಪ್ತಿ ನೀಡುವ ಹಾಗೂ ಅತ್ಯಂತ ಕಿರಿಕಿರಿ ಉಂಟುಮಾಡುವ ಉದ್ಯೋಗಗಳು ಯಾವುದು ಎಂಬ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಯಾವ ಉದ್ಯೋಗಗಳು ತೃಪ್ತಿ ನೀಡುವ ಹಾಗೂ ಕಿರಿಕಿರಿ ಉಂಟುಮಾಡುವ ಉದ್ಯೋಗಗಳು ಅನ್ನೋದನ್ನ ತಿಳ್ಕೊಳ್ಳೋಣ.

PREV
16
ಜೀವನದಲ್ಲಿ ಅತಿಹೆಚ್ಚು ತೃಪ್ತಿ ನೀಡುವ ನೌಕರಿ, ಅತ್ಯಂತ ಕಿರಿಕಿರಿಯ ಉದ್ಯೋಗಗಳಾವುವು?

ಜೀವನದಲ್ಲಿ ಶೇ.80ಕ್ಕಿಂತ ಹೆಚ್ಚಿನ ಜನರು ತಮಗಿಷ್ಟವಾದ ವೃತ್ತಿಯನ್ನು ಮಾಡುತ್ತಿಲ್ಲ. ಜೀವನ ಹಾಗೂ ದುಡಿಮೆಯ ಅನಿವಾರ್ಯತೆಯಿಂದ ಯಾವುದಾದರೂ ಒಂದು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಸುಮಾರು ಜನರು ನನಗೆ ಈ ಕೆಲಸ ಬೋರ್ ಆಗುತ್ತಿದೆ ಎಂದು ಹೇಳುವುದು ಸಾಮಾನ್ಯವಾಗಿದೆ. 

ಆದರೆ, ಕೆಲವರು ತಮ್ಮ ಕೆಲಸದಲ್ಲಿ ಖುಷಿ ಪಡ್ತಾರೆ. ಹಾಗಾದರೆ ಯಾವ ಕೆಲಸ ಖುಷಿ ಕೊಡುತ್ತದೆ, ಯಾವುದು ಅಸಮಾಧಾನ ತರುತ್ತೆ ಅಂತ ವಿಜ್ಞಾನಿಗಳು ಸಮೀಕ್ಷೆ ನಡೆಸಿದ್ದಾರೆ. ಅದರ ವರದಿ ಇಲ್ಲಿದೆ ನೋಡಿ.

26

ಉದ್ಯೋಗಗಳ ಬಗ್ಗೆ ಅಧ್ಯಯನ: 
ಯಾವ ಉದ್ಯೋಗ ಜನರಿಗೆ ತೃಪ್ತಿ ತರುತ್ತದೆ, ಯಾವುದು ಅಸಮಾಧಾನ ತರುತ್ತೆ ಅನ್ನೋದರ ಬಗ್ಗೆ ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಎಸ್ಟೋನಿಯನ್ ಬಯೋಬ್ಯಾಂಕ್ ಸಹಾಯದಿಂದ ಸುಮಾರು 59,000 ಜನರಿಂದ 263 ವಿವಿಧ ಉದ್ಯೋಗಗಳ ಮಾಹಿತಿ ಹಾಗೂ ದತ್ತಾಂಶಗಳನ್ನು ಸಂಗ್ರಹಣೆ ಮಾಡಿ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸಿದ್ದಾರೆ. ಉದ್ಯೋಗ, ಸಂಬಳ, ವ್ಯಕ್ತಿತ್ವ, ಜೀವನ ತೃಪ್ತಿ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ.

36

ತೃಪ್ತಿ ನೀಡುವ ಕೆಲಸ ಯಾವುದು?

ಈ ಅಧ್ಯಯನದ ಪ್ರಕಾರ, ಯಾವುದಾದರೂ ಒಂದು ಗುರಿ ಇಟ್ಟುಕೊಂಡು, ಏನನ್ನಾದರೂ ಸಾಧಿಸಿದ ಖುಷಿ ಕೊಡುವ ಉದ್ಯೋಗದಲ್ಲಿ ಇರುವವರು ತುಂಬಾ ಸಂತೋಷವಾಗಿರುತ್ತಾರೆ. ಧಾರ್ಮಿಕ ಸೇವೆಯಲ್ಲಿರುವವರು ಕೂಡ ಹೆಚ್ಚು ತೃಪ್ತಿ ಪಡೆಯುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.

ವೈದ್ಯಕೀಯ ತಜ್ಞರು, ಬರಹಗಾರರು, ಸೃಜನಶೀಲ ವ್ಯಕ್ತಿಗಳು, ಮನಶ್ಶಾಸ್ತ್ರಜ್ಞರು, ವಿಶೇಷ ಶಿಕ್ಷಣ ಶಿಕ್ಷಕರು, ಹಡಗು ಎಂಜಿನಿಯರ್‌ಗಳು, ಲೋಹ ಕೆಲಸಗಾರರು, ತಾಂತ್ರಿಕ ಉದ್ಯೋಗಗಳು ತಮ್ಮ ಕೆಲಸದಿಂದ ತೃಪ್ತಿಯನ್ನು ಕಂಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇವರಿಗೆ ಜೀವನದಲ್ಲಿ ಒಂದು ಸಾಧನೆ ಮಾಡಿದ ತೃಪ್ತಿ, ಜೀವ ಉಳಿಸಿದ ತೃಪ್ತಿ, ಹೊಸದನ್ನು ಹೆಕ್ಕಿ ತೆಗೆದ ತೃಪ್ತಿ ಸಿಗುತ್ತದೆ.

46

ತೀವ್ರ ಅಸಮಾಧಾನ, ಕಿರಿಕಿರಿ ಉಂಟುಮಾಡುವ ಕೆಲಸಗಳು:
ಅತ್ಯಂತ ತೃಪ್ತಿಕರ ಕೆಲಸಗಳು ಇವೆಯೆಂದರೆ ಅತೃಪ್ತಿ ಅಥವಾ ಕಿರಿಕಿರಿ ಉಂಟುಮಾಡುವ ಕೆಲಸಗಳು ಕೂಡ ಇರಬೇಕು ಅಲ್ಲವೇ? ಹೌದು ಅಂತಹ ಕೆಲಸಗಳು ಕೂಡ ಸಾಕಷ್ಟಿವೆ. ಕೆಲಸದ ಸ್ಥಳದಲ್ಲಿ ಸದಾ ನಿಯಂತ್ರಣ ಮಾಡುವುದು, ಕಡಿಮೆ ಸ್ವಾತಂತ್ರ್ಯ, ಹೆಚ್ಚು ಜವಾಬ್ದಾರಿಯ ಒತ್ತಡವಿರುವ ಉದ್ಯೋಗಗಳನ್ನು ಮಾಡುವ ಜನರು ಕಡಿಮೆ ತೃಪ್ತಿ ಪಡೆಯುತ್ತಾರೆ.

ಸಾಮಾನ್ಯವಾಗಿ ಭದ್ರತಾ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಮಾರಾಟಗಾರರು, ಸಮೀಕ್ಷೆ ಸಂದರ್ಶಕರು, ಅಂಚೆ ಸಿಬ್ಬಂದಿ, ಬಡಗಿಗಳು, ರಾಸಾಯನಿಕ ಎಂಜಿನಿಯರ್‌ಗಳು, ಸಾರಿಗೆ ಸಿಬ್ಬಂದಿ, ಉತ್ಪಾದನೆಗೆ ಸಂಬಂಧಿಸಿದ ಉದ್ಯೋಗಗಳು ಅಸಮಾಧಾನ ತರುತ್ತವೆ. ಜೊತೆಗೆ, ಕೆಲವೊಮ್ಮೆ ಬಿಡುವಿಲ್ಲದ ವಿಶ್ರಾಂತಿರಹಿತ ಕೆಲಸದಿಂದ ಕಿರಿಕಿರಿಯೂ ಉಂಟಾಗುತ್ತದೆ. ಇವುಗಳನ್ನು ಅತೃಪ್ತಿಕರ ಕೆಲಸಗಳು ಎಂದು ಹೇಳಲಾಗಿದೆ.

56

ಹಣ, ಗೌರವದಿಂದ ಉದ್ಯೋಗ ತೃಪ್ತಿ ಸಿಗುವುದಿಲ್ಲ: 
ಈ ಅಧ್ಯಯನದಲ್ಲಿ ಕಂಡುಬಂದ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಉದ್ಯೋಗದಿಂದ ಸಿಗುವ ಗೌರವ ಅಥವಾ ಹೆಚ್ಚಿನ ಸಂಬಳವು ಹಲವರಿಗೆ ತೃಪ್ತಿ ನೀಡುವುದಿಲ್ಲ. ಉನ್ನತ ಗೌರವದ ಉದ್ಯೋಗಗಳು ಹೆಚ್ಚಿನ ತೃಪ್ತಿಗೆ ಕಾರಣವಾಗುತ್ತವೆ ಎಂದು ಭಾವಿಸುವುದು ಭ್ರಮೆಯಂತೆ.

ಸಮಾಜದಲ್ಲಿ ಆ ಒಂದು ಉದ್ಯೋಗಕ್ಕೆ ಎಷ್ಟೇ ಕಡಿಮೆ ಗೌರವವಿದ್ದರೂ, ಏನನ್ನಾದರೂ ಸಾಧಿಸಿದ ಖುಷಿ ಇದ್ದಾಗ ಮಾತ್ರ ನಿಜವಾದ ಸಂತೋಷ ಸಿಗುತ್ತದೆ. ಇಲ್ಲದಿದ್ದರೆ ಏನೇ ಗೌರವ ಸಿಕ್ಕಿದರೂ ಅದರಿಂದ ತೃಪ್ತಿ ಸಿಗುವುದಿಲ್ಲ ಎಂದು ಅಧ್ಯಯನದ ಲೇಖಕಿ ಕೈಟ್ಲಿನ್ ಆನ್ ಹೇಳಿದ್ದಾರೆ.

66

ಸ್ವ ಉದ್ಯೋಗಿಗಳಿಗೆ ಹೆಚ್ಚು ಖುಷಿ: 
ತಜ್ಞರ ಪ್ರಕಾರ, ಸ್ವ ಉದ್ಯೋಗಿಗಳು ಹೆಚ್ಚು ಸಂತೋಷವಾಗಿರುತ್ತಾರಂತೆ. ಈ ಸಂಶೋಧನೆ ಎಸ್ಟೋನಿಯಾದಲ್ಲಿ ನಡೆದಿದೆ. ಆದರೆ ಸಂಶೋಧನೆಯ ಫಲಿತಾಂಶಗಳು ಎಸ್ಟೋನಿಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಪಂಚದಾದ್ಯಂತ ಅನ್ವಯಿಸುತ್ತದೆ. ಆಯಾ ಪ್ರದೇಶದ ಸಂಸ್ಕೃತಿ ಕೂಡ ಉದ್ಯೋಗದ ಬಗ್ಗೆ ಯೋಚನೆ, ಅನುಭವವನ್ನು ನೀಡುತ್ತದೆ.

Read more Photos on
click me!

Recommended Stories