ಬಿಜೆಪಿ ಶಾಸಕ ಮುನಿರತ್ನ ಆರೋಪಗಳಿಗೆ ಕುಸುಮಾ ಹನುಮಂತರಾಯಪ್ಪ ಮೊದಲ ಪ್ರತಿಕ್ರಿಯೆ

Published : Oct 12, 2025, 11:55 AM IST

Kusuma Hanumantharayappa vs Munirathna: ಬಿಜೆಪಿ ಶಾಸಕ ಮುನಿರತ್ನ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ, ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮವನ್ನು ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

PREV
16
ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ

ಬಿಜೆಪಿ ಶಾಸಕ ಮುನಿರತ್ನ ಅವರ ಆರೋಪಗಳಿಗೆ ಆರ್‌ಆರ್ ನಗರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಕುಸುಮಾ ಹನುಮಂತರಾಯಪ್ಪ, ಜನರಿಗೆ ಸ್ಪಂದಿಸುವ ಕೆಲಸವನ್ನು ಹಾಳು ಮಾಡಬೇಕು ಅಂತ ಇಲ್ಲಿಗೆ ಬಂದಿದ್ದಾರೆ ಎಂದರು.

26
ಶಾಸಕರಿಗೂ ಆಹ್ವಾನ ಹೋಗಿರುತ್ತೆ

ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ಬೆಂಗಳೂರಿನ ಪಾರ್ಕ್‌ಗಳಿಗೆ ಭೇಟಿ ನೀಡಿ ಬೆಂಗಳೂರಿನ ನಾಗರಿಕರ ಜೊತೆಗೆ ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಲಾಗಿದೆ. ಶಾಸಕರಿಗೂ ಆಹ್ವಾನ ಹೋಗಿರುತ್ತದೆ. ಇಲ್ಲಿನ ಶಾಸಕರು ಕಾರ್ಯಕ್ರಮ ಅವಮಾನಿಸೋ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

36
ಮುನಿರತ್ನ ವಿರುದ್ಧ ಕುಸುಮಾ ವಾಗ್ದಾಳಿ

ಕ್ಷೇತ್ರದ ನಾಗರಿಕರು ಬುದ್ಧಿವಂತರಿದ್ದು, ಯಾರು ಯಾರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಅಂತ ಅವರಿಗೂ ಗೊತ್ತಿದೆ. ಕಳೆದ 14 ವರ್ಷದಿಂದ ಅವರೇ ಶಾಸಕರಿದ್ದಾರೆ. ಸಮಸ್ಯೆಗಳನ್ನು ಜನರೇ ಹೇಳಲಿ ಅಂತ ಉಪಮುಖ್ಯಮಂತ್ರಿಗಳು ಬಂದಿದ್ದರು. ಯಾರೇ ಜನಪ್ರತಿನಿಧಿ ಇದ್ರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜನರಿಗೆ ಸ್ಪಂದಿಸುವ ಕೆಲಸವನ್ನು ಹಾಳು ಮಾಡಬೇಕು ಅಂತ ಬಂದಿದ್ದಾರೆ ಎಂದು ಮುನಿರತ್ನ ವಿರುದ್ಧ ಕುಸುಮಾ ಹನುಮಂತರಾಯಪ್ಪ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಮಾಯಾಣ, ಮಹಾಭಾರತ & ಆರ್‌ಆರ್‌ ನಗರ ಕುರುಕ್ಷೇತ್ರಕ್ಕೆ 'ಹೆಣ್ಣು' ಕಾರಣ ಎಂದ ಬಿಜೆಪಿ ಶಾಸಕ ಮುನಿರತ್ನ

46
ಸಮಸ್ಯೆ ಮಾಡ್ಲಿಕ್ಕೆ ಬರುತ್ತಾರೆ

ರಾಜಕೀಯ ಬೇರೆ ಇಲ್ಲಿನ ಸಮಸ್ಯೆಗಳು ಬಗೆ ಹರಿಬೇಕು ಅಂತ ಜನರಿಗೆ ಅರಿವಿದೆ. ಇದು ನಮ್ಮ ಕ್ಷೇತ್ರದಲ್ಲಿ ಯಾವಾಗಲೂ ನಡೆಯುತ್ತದೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳಾಗ್ಲಿ ಅದನ್ನ ಹಾಳು ಮಾಡೋದಕ್ಕೆ ಅವರು ಬರ್ತಾರೆ. ಅದರಲ್ಲಿ ಆಶ್ಚರ್ಯ ಪಡುವಂಥದ್ದು ಏನಿಲ್ಲ. ಏನಾದ್ರೂ ಮಾಡದೇ ಹೋಗದ್ದಿದ್ರೆ ಆಶ್ಚರ್ಯಪಡಬೇಕಿತ್ತು. ಆದರೆ ಅವರು ಸಮಸ್ಯೆ ಮಾಡ್ಲಿಕ್ಕೆ ಬರುತ್ತಿದ್ದಾರೆ ಎಂದರು.

ಇದನ್ನೂ ಓದಿ: RSSಗೆ ಅವಮಾನ ಮಾಡಿದ್ದು ನಾನಲ್ಲ, ಮುನಿರತ್ನ; ಡಿಸಿಎಂ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್

56
ನಾಟಕ ಆಡುವವರು

ನಾವು ಈ ಶಾಸಕರ ಹಲವು ಹಗರಣಗಳನ್ನು ನೋಡಿದ್ದೇವೆ. ಗುತ್ತಿಗೆದಾರರ ಹೆಂಡ್ತಿ ಮಕ್ಕಳನ್ನ ಮಂಚಕ್ಕೆ ಕರೆಯುವ ಜನಪ್ರತಿನಿಧಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ. ಅವರು ಸಿನಿಮಾ ತೆಗೆಯುವಂತವರು ಬಹಳ ನಾಟಕಗಳನ್ನು ನೋಡಿದವರು ಬಹಳ ನಾಟಕ ಆಡುವವರು. ಜನರು ಕೂಡ ನೋಡುತ್ತಿದ್ದಾರೆ ಜನ ಬುದ್ದಿವಂತರಿದ್ದಾರೆ. 

66
ದುರುದ್ದೇಶದ ರಾಜಕಾರಣ

ರಾಜಕಾರಣವನ್ನ ದುರುದ್ದೇಶದಿಂದ ಮಾಡಿದ್ದಾರೆ. ಶಾಸಕರು ರಾಜೀನಾಮೆ ಕೊಡೋದು ಬಿಡದು ಅವರಿಗೆ ಬಿಟ್ಟ ವಿಚಾರ. ಅವರ ಒಳ್ಳೆಯ ಕೆಲಸ ಮಾಡಿದರೆ ಹಗರಣಗಳು ಯಾಕೆ ಆಚೆ ಬರುತ್ತಿತ್ತು. ಅವರು ನಾಗರಿಕರಿಗೆ ಒಳ್ಳೆ ಕೆಲಸ ಮಾಡ್ಲಿ ಅನ್ನೋದಷ್ಟೇ ನಮ್ಮದು ಕಳಕಳಿ ಎಂದು ತಿರುಗೇಟು ನೀಡಿದರು.

Read more Photos on
click me!

Recommended Stories