ನಿಖಿಲ್‌ಗೆ ದೇಗುಲ ಪ್ರವೇಶ ನಿರಾಕರಣೆ: ಹಿಂದಿನ ಆ ಘಟನೆ ನೆನಪಿಸಿ ಕಾಂಗ್ರೆಸ್ ಗೆ ಕುಮಾರಸ್ವಾಮಿ ಎಚ್ಚರಿಕೆ!

Published : Nov 14, 2026, 02:25 PM IST

ಇಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರು ಹಾಸನದ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಕ್ಕಳೊಂದಿಗೆ ಕೆಲವೊತ್ತು ಸಮಯ ಕಳೆದರು. ನಿಖಿಲ್ ಕುಮಾರಸ್ವಾಮಿ ಅವರಿಗೆ ದೇಗುಲ ಪ್ರವೇಶ ನಿರಾಕರಿಸಿದ ಘಟನೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ರು.

PREV
14
ಮಾವಿನಕೆರೆ ರಂಗನಾಥ ಸ್ವಾಮಿ ದರ್ಶನ ಪಡೆದ ಹೆಚ್‌ಡಿ ಕುಮಾರಸ್ವಾಮಿ

ಇಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರು ಹಾಸನದ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇಗುಲಕ್ಕೆ ಆಗಮಿಸಿ ದರ್ಶನ ಪಡೆದು, ಕುಟುಂಬದವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇಗುಲದ ಬಳಿಯೇ ಇದ್ದ ನೂರಾರು ಮಕ್ಕಳನ್ನು ಕಂಡು ದೇವರ ದರ್ಶನ ಬಳಿಕ ಮಕ್ಕಳೊಡನೆ ಕೆಲವೊಮ್ಮೆ ಸಮಯ ಕಳೆದರು.

ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡ ಕುಮಾರಸ್ವಾಮಿ

ಇಂದು ಮಕ್ಕಳ ದಿನಾಚರಣೆ ಹಿನ್ನೆಲೆ ಶಾಲಾ ಮಕ್ಕಳಿಗೆ ಶುಭ ಕೋರಿದ ಕುಮಾರಸ್ವಾಮಿಯವರು, ಕೆಲವೊತ್ತು ಮಕ್ಕಳೊಂದಿಗೆ ಸಮಯ ಕಳೆದರು. ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು. ಈ ವೇಳೆ ಕುಮಾರಸ್ವಾಮಿಗೆ ನೂರಾರು ಶಾಲಾ ಮಕ್ಕಳು ಜೈಕಾರ ಹಾಕಿದರು.

24
ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ಬಗ್ಗೆ ಹೆಚ್‌ಡಿಕೆ ಹೇಳಿದ್ದೇನು?

ಈ ವೇಳೆ ಡಿಕೆ ಶಿವಕುಮಾರ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಈಗ ನಾನು ರಾಜಕೀಯ ಬಗ್ಗೆ ಮಾತನಾಡೋಕೆ ಹೋಗೊಲ್ಲ. ಇನ್ನೂ ಸಮಯ ಕೊಡಬೇಕು ಅಂತ ಕೆಲವರು ಹೇಳಿದ್ದಾರೆ. ಈಗಾಗಲೇ ಮೈಸೂರಿನಲ್ಲೂ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಹೀಗಾಗಿ ನೋಡೋಣ ಮಾತಿಗೂ ಕೃತಿಗೂ ಅವರ ನಡವಳಿಕೆಗೂ ಹೇಗಿರುತ್ತದೆ ಕಾದು ನೋಡೋಣ ಎಂದರು.

ನಿಖಿಲ್ ಕುಮಾರಸ್ವಾಮಿ ದೇಗುಲ ಪ್ರವೇಶ ನಿರಾಕರಿಸಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನೆನ್ನೆ ದಿನ ರಾಮನಗರ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಒಂದು ದೇವಸ್ಥಾನದ ಉದ್ಘಾಟನೆಗೆ ಆಹ್ವಾನ ಕೊಟ್ಟಿದ್ದರು. ಅವರ ಆಹ್ವಾನದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಅವರು ಬೇಲೂರು ಪಂಚಾಯ್ತಿ ವ್ಯಾಪ್ತಿಗೆ ಬರುವ ಕುರುಬರದೊಡ್ಡಿ ಗ್ರಾಮಕ್ಕೆ ಹೋಗಿದ್ದರು. ಆ ಗ್ರಾಮ ನನಗೆ ಮೊದಲಿನಿಂದಲೂ ಅತ್ಯಂತ ಬೆಂಬಲ ಕೊಟ್ಟಂತಹ ಗ್ರಾಮ ಮತ್ತು ಕ್ಷೇತ್ರ ಅದು.

34
ಕಾಂಗ್ರೆಸ್‌ಗೆ ಹಿಂದಿನ ಆ ಘಟನೆ ನೆನಪಿಸಿ ಎಚ್ಚರಿಕೆ ನೀಡಿದ ಹೆಚ್‌ಡಿಕೆ!

ನಾನು ಆ ಭಾಗದಲ್ಲಿ ಹಿಂದೆ ಚಾನಾವಣೆಗೆ ನಿಂತಾಗ ದೊಡ್ಡಮಟ್ಟದಲ್ಲಿ ಬಹುಮತ ಕೊಟ್ಟಿದ್ದರು ಅಷ್ಟೇ ಅಲ್ಲ, ನಿರಂತರವಾಗಿ ಬೆಂಬಲ ನೀಡಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್ ಬಂದ ಮೇಲೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಯಾರು ಜನತಾದಳದವರು ಇದ್ದಾರೆ ಅವರನ್ನು ಭಯಭೀತಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಅದರ ಭಾಗವಾಗಿ ನಿನ್ನೆ ಈ ಘಟನೆ ನಡೆದಿರೋದು. ಈ ಘಟನೆ ನೋಡಿದರೆ ಭವಿಷ್ಯ ಕಾಂಗ್ರೆಸ್ ಕಾರ್ಯಕರ್ತರ ನಡೆವಳಿಕೆಯೇ ಒಂದು ದೌರ್ಜನ್ಯವೋ, ರೌಡಿತನವೋ ಇದರ ಬಗ್ಗೆ ನಾನು ಏನು ಹೇಳಲು ಹೋಗೋಲ್ಲ.. ರಾಮನಗರದ ಜನರೇ ಮುಂದೆ ಅವರಿಗೆ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎಂದರು.

44
ಒಂದು ಬದಲಾವಣೆಯ ಪರ್ವಕ್ಕೆ ಕಾಂಗ್ರೆಸ್ ನಾಂದಿ ಹಾಡಿದೆ

ಹಿಂದೆ ಒಂದು ಬಾರಿ ನಾನಿನ್ನೂ ಶಾಸಕ ಆಗಿರಲಿಲ್ಲ. ಆಗ ಹೊಸೂರು ಅನ್ನೋ ಗ್ರಾಮದಲ್ಲಿ ಇದೇ ರೀತಿ ಕಾಂಗ್ರೆಸ್‌ನವರು ದಬ್ಬಾಳಿಕೆ ಮಾಡಿದ್ರು. ದೇವಸ್ಥಾನಕ್ಕೆ ಬೀಗ ಹಾಕಿ ಹೋಗಿದ್ದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನನ್ನು 25000ಕ್ಕೂ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿದ್ದರು. ಆ ಘಟನೆಯಿಂದ ಒಂದು ಬದಲಾವಣೆ ತರಲು ಸಾಧ್ಯವಾಯ್ತು. ಆ ಘಟನೆಯನ್ನ ಈಗಲೂ ನೆನಪಿಸಿಕೊಳ್ಳುತ್ತೇನೆ. ಈಗ ನಿಖಿಲ್ ವಿಷಯದಲ್ಲೂ ಅದೇ ರೀತಿ ನಡೆದಿದೆ. ನಿನ್ನೆ ನಡೆದಿರುವ ಘಟನೆಯೂ ಒಂದು ಬದಲಾವಣೆಯ ಪರ್ವಕ್ಕೆ ಮುನ್ನುಡಿ ಅಷ್ಟೇ. ಇದಕ್ಕೆ ಕಾಂಗ್ರೆಸ್ನವರೇ ನಾಂದಿ ಹಾಡಿದ್ದಾರೆ. ಅದಕ್ಕಿಂತ ಹೆಚ್ಚು ಏನೂ ಹೇಳುವುದಿಲ್ಲ ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories