ಕನ್ಯಾಕುಮಾರಿ ಟು ಕಾಶ್ಮೀರ: ರಾಹುಲ್ ಗಾಂಧಿ ಪ್ರಧಾನಿ ಆಗಲೆಂದು ಆಂಧ್ರದ ವಕೀಲರ ಪಾದಯಾತ್ರೆ, ಕೂಡ್ಲಿಗಿಯಲ್ಲಿ ಶಾಸಕ ಶ್ರೀನಿವಾಸ ಸಾಥ್

Published : Aug 13, 2026, 11:38 AM IST

ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.

PREV
14
ವಕೀಲ ಕಾಟೂರಿ ವೆಂಕಟೇಶ್ವರಲು ಅವರಿಂದ ಪ್ರತಿಭಟನೆ

ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕೂಡ್ಲಿಗಿಗೆ ಆಗಮಿಸಿದರು.

24
ರಾಹುಲ್ ಪ್ರಧಾನಿ ಆಗಲೆಂದು ಕನ್ಯಾಕುಮಾರಿ ಟು ಕಾಶ್ಮೀರ ಪಾದಯಾತ್ರೆ

ಕನ್ಯಾಕುಮಾರಿಯಿಂದ ಕಾಶ್ಮೀರ(Kanyakumari to kashmir padayatre)ದವರೆಗೆ ಪಾದಯಾತ್ರೆ ಸಂಕಲ್ಪ ಮಾಡಿರುವ ಕಾಟೂರಿ ವೆಂಕಟೇಶ್ವರಲು, 'ರಾಹುಲ್ ಗಾಂಧಿಗಾಗಿ ಭಾರತ ಒಂದಾಗಬೇಕು’ ಎಂಬ ಸಂದೇಶದೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮಕ್ಕೆ ಪಾದಯಾತ್ರಿಗಳ ತಂಡ ಆಗಮಿಸಿತು.

34
ಪಾದಯಾತ್ರಿಕರಿಗೆ ಶಾಸಕ ಶ್ರೀನಿವಾಸ ಸ್ವಾಗತ

ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ ಅವರು ಪಾದಯಾತ್ರಿಗಳ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಈ ವೇಳೆ ‘ದೇಶಕ್ಕಾಗಿ ರಾಹುಲ್ ಗಾಂಧಿ ಬೇಕು’ ಎಂದು ಘೋಷಣೆ ಕೂಗುತ್ತಾ ಪಾದಯಾತ್ರಿಕರೊಂದಿಗೆ ಹೆಜ್ಜೆ ಹಾಕುವ ಮೂಲಕ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

44
ತಂಡದೊಂದಿಗೆ ಐದು ಕಿಲೋಮೀಟರ್ ಶಾಸಕ

ದೇಶದ ಏಕತೆ, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರುತ್ತಿರುವ ಈ ಬೃಹತ್ ಪಾದಯಾತ್ರೆಯಲ್ಲಿ ಶಾಸಕ ಎನ್.ಟಿ. ಶ್ರೀನಿವಾಸ ತಂಡವನ್ನು ಬರಮಾಡಿಕೊಂಡರಷ್ಟೇ ಅಲ್ಲದೆ ತಂಡದೊಂದಿಗೆ ಸುಮಾರು ಐದು ಕಿಮೀಟರ್ ವರೆಗೂ ಪಾದಯಾತ್ರಿಕರೊಂದಿಗೆ ನಡೆಯುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories