ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕುಮಾರಸ್ವಾಮಿ ಅವರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
26
ಜೆಡಿಎಸ್‌ಗೆ ಮೋದಿ ಹೊಸ ಜವಾಬ್ದಾರಿ
ದೆಹಲಿ ಭೇಟಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ಮೋದಿ ಅವರ ನಡುವೆ ಮಾತುಕತೆ ನಡೆಸಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ಪ್ರಧಾನಿಗಳು ಮಾತನಾಡಿದ್ದರಂತೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಲಭ್ಯವಾಗಿದ್ದು, 2028ರ ಚುನಾವಣೆ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಅದರಲ್ಲೂ ಇದಕ್ಕೆ ಬಿಜೆಪಿ ಜೆಡಿಎಸ್ ಮಿತ್ರಪಕ್ಷವಾಗಿ ಅದರ ಪಾತ್ರ ಹಾಗೂ ಟಾರ್ಗೆಟ್ ರೀಚ್ ಆಗಲು ಯಾವ ಪಾತ್ರವಹಿಸಬೇಕು ಎಂದು ಜೆಡಿಎಸ್‌ಗೆ ಮೋದಿ ಜವಾಬ್ದಾರಿ ನೀಡಿದ್ದಾರಂತೆ.
36
ಮೋದಿ ಅವರು ಕೊಟ್ಟ ಟಾಸ್ಕ್ ಏನು?
ಏನೆಲ್ಲಾ ಮಾತುಕತೆ ಆಗಿದೆ? ಜೆಡಿಎಸ್‌ಗೆ ಮೋದಿ ಅವರು ಕೊಟ್ಟ ಟಾಸ್ಕ್ ಏನು ಅಂತ ನೋಡುವುದಾದರೆ, ರಾಜ್ಯದಲ್ಲಿ ಜೆನ್ ಝೀಗಳನ್ನು ಗುರುರಿಯಾಗಿಸಿಕೊಂಡು ಮೋದಿ ಅವರು ಕೆಲವು ಸಲಹೆ ನೀಡಿದ್ದರಂತೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರಿಗೆ ಈ ಬಗ್ಗೆ ಟಾಸ್ಕ್ ಕೊಟ್ಟಿದ್ದೇವೆ. ಜೆನ್ ಝೀಗಳ ನಡುವೆ ಸಾವಿರ ಸಭೆಗಳನ್ನು ಮಾಡಿ ಅಂತ ಹೇಳಿದ್ದರಂತೆ. ಈಗ ಇದೇ ಟಾಸ್ಕ್ ಅನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಅವರಿಗೂ ನೀಡಿದ್ದರಂತೆ.
1997ರ ನಂತರ ಹುಟ್ಟಿರುವ ಹಾಗೂ ಹೊಸ ಮತದಾರರನ್ನು ಟಾರ್ಗೆಟ್ ಮಾಡಿ, ನಮ್ಮ ಕಡೆ ಸೆಳೆಯುವ ಕಾರ್ಯಕ್ರಮಗಳನ್ನು ರೂಪಿಸಿ. ಅವರ ಬೇಡಿಕೆಗಳು ಏನು? ಅವುಗಳಿಗೆ ತಕ್ಷಣದ ಪರಿಹಾರ ಏನು? ದೂರದೃಷ್ಟಿಯಿಂದ ಏನು ಮಾಡಬೇಕು ಎಂದು ನಿರ್ಧಾರ ಮಾಡಿ. ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಮೋದಿ ಸಲಹೆ ನೀಡಿದ್ದಾರಂತೆ.
56
ಸಂಪೂರ್ಣ ಇಮೇಜ್ ಬದಲಿಸುವ ತಾಕತ್ತು
ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೂ ಒಂದಷ್ಟು ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರಂತೆ. ಜೆನ್ ಝೀಗಳ ಶಕ್ತಿ ಏನು ಅಂತ ಈಗಾಗಲೇ ಗೊತ್ತಾಗಿದೆ. ಸಂಪೂರ್ಣ ಇಮೇಜ್ ಅನ್ನೇ ಬದಲಾವಣೆ ಮಾಡುವ ತಾಕತ್ತು ಈ ಯುವ ಸಮೂಹಕ್ಕೆ ಇದೆ. ಅವರನ್ನು ನಮ್ಮ ಕಡೆ ಸೆಳೆಯಲು ಕ್ರಿಯಾಶೀಲವಾಗಿ ಕೆಲಸ ಮಾಡಿ, ಪಕ್ಷದ ಯುವ ಘಟಕದೊಂದಿಗೆ ಕೆಲಸ ಮಾಡಿ. ಹೊಸ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಶುರು ಮಾಡಿ ಎಂದು ಹೇಳಿದ್ದಾರಂತೆ.
66
ಎಚ್‌ಡಿಕೆ ತುರ್ತು ಸುದ್ದಿಗೋಷ್ಠಿ, ಹೇಳಿದ್ದೇನು?
ಇನ್ನು, ಪ್ರಧಾನಿ ಮೋದಿ ಅವರು ಕೊಟ್ಟ ಟಾಸ್ಕ್ ಅನ್ನು ಜೆಡಿಎಸ್ ಸವಾಲಿನ ರೂಪದಲ್ಲಿ ಸ್ವೀಕಾರ ಮಾಡಿದ್ದು, ಹೊಸ ತಂತ್ರಗಾರಿಕೆ ರೂಪಿಸಲು ಸಿದ್ಧತೆ ನಡೆಸಿದೆಯಂತೆ. ಇದರಂತೆ ಶೀಘ್ರವೇ ಪಕ್ಷದ ಯುವಘಟಕದ ಮೂಲಕ ಟಾಸ್ಕ್ ಜಾರಿಗೆ ಮಾರ್ಗಸೂಚಿ ಮಾಡಿಕೊಂಡಿದೆಯಂತೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಯಾವ ದಿಕ್ಕಿನಲ್ಲಿ ಹೋಗ್ತಾ ಇದೆ. ಹಲವಾರು ಸಮಸ್ಯೆ ಗಳು ಪ್ರತಿನಿತ್ಯ ಹೇಗೆ ನಡೆಯುತ್ತಿವೆ. ಬರಗಾಲ, ಮಂತ್ರಿಗಳ ರಾಜೀನಾಮೆ, ಕೆಪಿಎಸ್ಸಿ ಸಮಸ್ಯೆ, ಬೆಂಗಳೂರು ಅಭಿವೃದ್ಧಿ, ಇತ್ತೀಚಿನ ಅಧಿವೇಶನ, ಪಾರ್ಕ್ ಗಳ ಭೂಮಿ ಪಡೆದುಕೊಳ್ಳುವ ಬಿಲ್ ಹೀಗೆ ಅನೇಕ ವಿಚಾರಗಳಿವೆ. ಚರ್ಚೆ ಮಾಡ್ತಾ ಹೋದರೆ ಧಾರಾವಾಹಿ ರೀತಿ ಆಗುತ್ತದೆ. ಇಂದು ನಮ್ಮ ರಾಜ್ಯದ ಗೃಹ ಸಚಿವರಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಿದ್ದು, ಎಪ್ಪತ್ತೈದು ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ತೀವಿ ಅಂತ ಹೇಳಿ ಯಾವ ರೀತಿ ನಡೆಸುತ್ತಿದ್ದಾರೆ ನೋಡಿ. ನಿರುದ್ಯೋಗಿ ಯುವಕರು ನೀವು ಏಳದಿದ್ದರೆ, ಇದು ಸರಿ ಹೋಗೋದಿಲ್ಲ. ಮನೆ ಮಠ ಹಾಳುಮಾಡಿಕೊಂಡು ಕೋಟಿ ಕೋಟಿ ಹಣ ಕೊಟ್ಟು ಬಂದು, ಯಾರ ತಲೆ ಹೊಡೀತೀರಾ ನೀವು? ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಪ್ರಿಯಾಂಕ್ ಖರ್ಗೆಯವರೇ? ಇದರ ಬಗ್ಗೆ ಯಾಕೆ ಮಾತನಾಡೋದಿಲ್ಲ? ಈಗಾಗಲೇ ಅಪಾಯಿಟ್ಮೆಂಟ್ ಕೊಟ್ಟಾಗಿದೆ, ಒಂದು ವರ್ಷ ಸಂಬಳ ಕೊಟ್ಟಾಗಿದೆ, ಈಗ ಏನು ಕ್ರಮ ತಗೋತೀರಿ? ದೆಹಲಿಯಲ್ಲಿ ಅಪಾಯಿಟ್ಮೆಂಟ್ ಮಾಡುವಾಗ 360 ಡಿಗ್ರಿ ತನಿಕೆ ನಡೆಯುತ್ತೆ. ಇಲ್ಲಿ ಯಾಕೆ ಯಾವುದೇ ಪರಿಶೀಲನೆ ಮಾಡಲ್ಲ? ಯುವಕರು ಯಾಕೆ ಮೌನವಾಗಿದ್ದೀರಿ? ಇದನ್ನು ಸರಿಪಡಿಸಲು ನೀವು ಬೀದಿಗಿಳಿಯಬೇಕು. ನೀಟ್ ಪರೀಕ್ಷೆ ಅಕ್ರಮ ದಲ್ಲಿ ಹೋರಾಟ ಮಾಡಿದ ರೀತಿ ಇಲ್ಲೂ ರಾಜ್ಯದಲ್ಲಿ ಆಗಬೇಕು ಎಂದು ಯುವಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.