ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್

Published : Dec 30, 2025, 08:12 AM IST

ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜನವರಿಯಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ಇದು ಶರಣರು ಮತ್ತು ಶಕ್ತಿವಂತರು ಹೇಳಿದ ಮಾತು ಎಂದಿರುವ ಅವರು, ಈ ಹಿಂದೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಹೇಳಿದ್ದಾರೆ.

PREV
14
ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜನವರಿಯಲ್ಲಿ ಸಿಎಂ ಆಗುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಭಗವಂತನ ಆಶೀರ್ವಾದದಿಂದ ಜ.6 ಅಥವಾ ಜ.9ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು 200 ಪರ್ಸೆಂಟ್ ಕನ್ಫರ್ಮ್ ಎಂದು ಪುನರುಚ್ಚರಿಸಿದರು.

24
ಶರಣರು, ಶಕ್ತಿ ಪಡೆದವರು ಹೇಳಿರುವ ವಿಚಾರ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ. ಇದು ನನ್ನ ಬಾಯಿಂದ ಬಂದ ವಿಚಾರವಲ್ಲ. ನಾವು ನಂಬುವ ಶರಣರು, ಶಕ್ತಿ ಪಡೆದವರು ಹೇಳಿರುವ ವಿಚಾರವಾಗಿದೆ ಎಂದು ಎಚ್.ಎ.ಇಕ್ಬಾಲ್ ಹುಸೇನ್‌ ಹೇಳಿದ್ದಾರೆ.

34
ನನ್ನ ಮಾತಿಗೆ ಇಂದಿಗೂ ನಾನು ಬದ್ಧ

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಅವರು ಏನು ಬೇಕಾದರೂ ಹೇಳಲಿ, ಅವರು ನಮ್ಮ ನಾಯಕರು. ಅವರಿಗೆ ಅವರದ್ದೇ ಆದ ಒತ್ತಡ ಇರುತ್ತದೆ. ಹಾಗಾಗಿ ಅವರು ಏನಾದರೂ ಹೇಳಲಿ, ನಾವು ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ನನ್ನ ಮಾತಿಗೆ ಇಂದಿಗೂ ನಾನು ಬದ್ಧ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಹೊಸ ವರ್ಷಾಚರಣೆ ಭದ್ರತೆಗೆ ಹೆಚ್ಚು ಮಹಿಳಾ ಪೊಲೀಸರ ನಿಯೋಜಿಸಿ : ಸಿಎಂ

44
ಹೈಕಮಾಂಡ್ ಅವಕಾಶ ಕೊಡುತ್ತಾ?

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಹೈಕಮಾಂಡ್ ಅವಕಾಶ ಕೊಡುತ್ತಾ ಎಂದು ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ ಒಪ್ಪಂದ ಆಗಿದೆ ಅಂತ ನಮ್ಮ ನಾಯಕರೇ ಹೇಳಿದ್ದಾರಲ್ಲ. ಒಪ್ಪಂದ ಆಗಿದ್ದರೆ ಮಾತ್ರ ನಮ್ಮ ನಾಯಕರು ಹೇಳಲು ಸಾಧ್ಯ. ಒಪ್ಪಂದ ಆಗಿರಲಿಲ್ಲ ಅಂದರೆ ಯಾವುದೇ ಒಪ್ಪಂದ ಇಲ್ಲ ಅಂತ ಹೇಳುತ್ತಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories