CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ

Published : Dec 08, 2025, 01:06 PM IST

ಈ ಸಭೆಯ ನಂತರ ನಾಯಕತ್ವ ಬದಲಾವಣೆಗೆ ಕದನ ವಿರಾಮ ಬಿದ್ದಿದೆ ಎಂಬ ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಪುತ್ರ, ಎಂಎಲ್‌ಎಸಿ ಯತೀಂದ್ರ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

PREV
14
ನಾಯಕತ್ವ ಬದಲಾವಣೆ

ಬೆಳಗಾವಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಈ ಸಭೆಯ ನಂತರ ನಾಯಕತ್ವ ಬದಲಾವಣೆಗೆ ಕದನ ವಿರಾಮ ಬಿದ್ದಿದೆ ಎಂಬ ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಪುತ್ರ, ಎಂಎಲ್‌ಎಸಿ ಯತೀಂದ್ರ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

24
ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿ

ಇಂದು ಬೆಳಗಾವಿ ಸುವರ್ಣಸೌಧಕ್ಕೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ ಅಚ್ಚರಿಯ ಹೇಳಿಕೆಯನ್ನು ನೀಡಿದರು. ಸದ್ಯ ಸಿಎಂ ಬದಲಾವಣೆ ಆಗಲ್ಲ ಎಂದು ಹೈಕಮಾಂಡ್ ಹೇಳಿದೆ. ಇಷ್ಟೆಲ್ಲಾ ಖರ್ಚು ಮಾಡಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಅಧಿವೇಶನ ನಡೆಸಲಾಗುತ್ತಿದೆ. ಹಾಗಾಗಿ ವಿಪಕ್ಷ ನಾಯಕರು ರಾಜಕೀಯ ಬಿಟ್ಟು, ಉತ್ತರ ಕರ್ನಾಟಕದ ಜನರ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.

34
ವಿಪಕ್ಷಗಳಿಗೆ ಸಿಎಂ ಪುತ್ರನ ಪ್ರಶ್ನೆ

ಮುಖ್ಯಮಂತ್ರಿಗಳು ಬದಲಾಗ್ತಾರೆ ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಿರುತ್ತಾರೆ. ಈಗ ಯಾವುದೇ ನಾಯಕತ್ವವನ್ನು ಬದಲಾವಣೆ ಮಾಡಲ್ಲ ಎಂದು ನಮ್ಮ ಹೈಕಮಾಂಡ್ ಸ್ಪಷ್ಟಪಡಿಸಿದೆ. ನಮ್ಮ ಪಕ್ಷದವರು ಏನು ಹೇಳ್ತಾರೆ ಎಂಬುವುದು ನಮಗೆ ಮಾತ್ರ ಗೊತ್ತಿರುತ್ತದೆ. ವಿರೋಧ ಪಕ್ಷಗಳಿಗೆ ಏನು ಗೊತ್ತು ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

44
5 ವರ್ಷ ಪೂರ್ಣ ಮಾಡ್ತಾರೆ!

ವಿಪಕ್ಷಗಳು ನಾಯಕತ್ವ ಬದಲಾವಣೆ ಅಂತ ಸುಳ್ಳು ಸುದ್ದಿ ಹರಡಿ ಒಂದು ಅಭಿಪ್ರಾಯವನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಪೂರ್ಣಾವಧಿಯಾಗಿ 5 ವರ್ಷ ತಮ್ಮ ಅಧಿಕಾರ ಮುಗಿಸುತ್ತಾರೆ ಅನ್ನೋದು ನನ್ನ ವೈಯಕ್ತಿಯ ಅಭಿಪ್ರಾಯ ಮತ್ತು ನಂಬಿಕೆ ಎಂದು ಎಂಎಲ್‌ಸಿ ಯತೀಂದ್ರ ಹೇಳಿದರು.

Read more Photos on
click me!

Recommended Stories