'ಇಂದಲ್ಲ, ನಾಳೆ ನನ್ನ ಮೇಲೂ ಇ.ಡಿ, ಐಟಿ ದಾಳಿ..' ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಮತ್ತೆ ಕಿಡಿ

Kannadaprabha News   | Kannada Prabha
Published : Jun 25, 2026, 08:19 AM IST

ಕೇಂದ್ರ ಸರ್ಕಾರ ರಾಜಕೀಯಕ್ಕಾಗಿ ಇಡಿ, ಐಟಿ ಅವರನ್ನು ತಮ್ಮ ವಿರೋಧಿಗಳ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಆರೆಸ್ಸೆಸ್ ಪ್ರಶ್ನಿಸಿದ್ದಕ್ಕೆ ನಾಳೆ ನನ್ನ ಮೇಲೂ ಇಡಿ ದಾಳಿ ಆಗಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಜಾರಕಿಹೊಳಿ ಸಂಬಂಧಿ ಮಲೆ ಇಡಿ ದಾಳಿ ಬಗ್ಗೆ ಖರ್ಗೆ ಹೇಳಿದ್ದೇನು?

PREV
13
Priyank kharge; ಕೇಂದ್ರದ ವಿರುದ್ಧ ಗೃಹ ಸಚಿವ ಕಿಡಿ

ಕೇಂದ್ರ ಸರ್ಕಾರದವರು ತಮ್ಮ ರಾಜಕೀಯಕ್ಕಾಗಿ ಐಟಿ, ಇ.ಡಿ. ಅವರನ್ನು ಯಾವಾಗ ಬೇಕೋ ಆಗ ಛೂ ಬಿಡುತ್ತಾರೆ. ನನ್ನ ಮೇಲೂ ದಾಳಿ ನಡೆಯಬಹುದು. ಇಂದಲ್ಲ, ನಾಳೆ ದಾಳಿ ಆಗಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

23
ಇ.ಡಿ. ದಾಳಿ ರಾಜಕೀಯ ಪ್ರೇರಿತ

ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರ ಮನೆ ಮೇಲೆ ನಡೆದಿರುವ ಇ.ಡಿ. ದಾಳಿ ಬಗ್ಗೆ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ಸಾವಿರಾರು ಇ.ಡಿ. ದಾಳಿಗಳು ನಡೆದಿವೆ. ಆದರೆ, ಈ ದಾಳಿಗಳಲ್ಲಿ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಶೇ.2 ಕ್ಕಿಂತಲೂ ಕಡಿಮೆ, ಅಂದರೆ ಶೇ.1.5 ಮಾತ್ರ. ಈ ದಾಳಿಗಳು ರಾಜಕೀಯ ಪ್ರೇರಿತ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ ಎಂದು ಕಿಡಿ ಕಾರಿದರು.

33
ನಾಳೆ ನನ್ನ ಮೇಲೂ ಇ.ಡಿ. ದಾಳಿ ಆಗಬಹುದು ಎಂದ ಪ್ರಿಯಾಂಕ್ ಖರ್ಗೆ

ಕೇಂದ್ರದವರು ಯಾವಾಗ ಬೇಕೋ ಆಗ ಕೇಂದ್ರ ಸಂಸ್ಥೆಗಳನ್ನು ಛೂ ಬಿಡುತ್ತಾರೆ. ತಮ್ಮ ಮೇಲೂ ಇ.ಡಿ. ದಾಳಿ ನಡೆಯುವ ಸಾಧ್ಯತೆ ಇದೆ. ಇವತ್ತಲ್ಲ ನಾಳೆ ಅದು ಆಗಬಹುದು ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories