ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಭದ್ರತೆಯ ಕುರಿತುು ಪಾಲನಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅಕ್ಟೋಬರ್ ನಂತರ ರಾಜಕೀಯ ಸಂಘರ್ಷ ಏರ್ಪಟ್ಟು, ಫೆಬ್ರವರಿಯಲ್ಲಿ ಅಂತ್ಯವಾಗಲಿದೆ ಎಂದಿದ್ದಾರೆ. ಕಾಲಚಕ್ರದ ಆಧಾರದ ಮೇಲೆ ರಾಜಕೀಯ ಭವಿಷ್ಯ ನುಡಿದಿದ್ದಾರೆ.
ಸಿಎಂ ಸಿದ್ದರಾಮಯಯ್ಯ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜ್ಯ ರಾಜಕಾರಣದಲ್ಲಿ ಪವರ್ ಶೇರಿಂಗ್ ಎಂಬಿತ್ಯಾದಿ ಮಾತುಗಳು ಕೇಳುತ್ತಿರುತ್ತವೆ. ಇದೀಗ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿಗಳು ರಾಜ್ಯ ರಾಜಕಾರಣದ ಕುರಿತು ಭವಿಷ್ಯವನ್ನು ನುಡಿದಿದ್ದಾರೆ.
25
ಕರ್ನಾಟಕ ರಾಜಕಾರಣದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆಯೂ ಶ್ರೀ ಸಿದ್ದರಾಜು ಸ್ವಾಮೀಜಿಗಳು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
35
ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ 'ಬಂಡೆ'ಗಿಂತ ಭದ್ರವಾಗಿದೆ ಎಂದು ಹೇಳುವ ಮೂಲಕ ಈ ಅವಧಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ ಎಂಬ ಸುಳಿವು ನೀಡಿದ್ದಾರೆ. ಅಕ್ಟೋಬರ್ 28ರ ನಂತರ ರಾಜ್ಯ ರಾಜಕಾರಣದಲ್ಲಿ ಸಂಘರ್ಷ ಏರ್ಪಡಲಿದ್ದು, ಫೆಬ್ರವರಿಯಲ್ಲಿ ಇದೆಲ್ಲವೂ ಅಂತ್ಯವಾಗಲಿದೆ ಎಂದು ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಏನೇ ತಿಕ್ಕಾಟವಾದ್ರೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ನಾಡದೊರೆಗೆ ಯಾವುದೇ ಕಂಟಕ ಇಲ್ಲ. ಯಾವುದೇ ಪ್ರಭಾವಿ ನಾಯಕರು ಸಿಎಂ ಕುರ್ಚಿ ಕಸಿದುಕೊಳ್ಳಲು ಪ್ರಯತ್ನಿಸಿದರೂ ಅದು ಫಲಪ್ರದವಾಗಲ್ಲ. ಇದೆಲ್ಲವೂ ಕಾಲಚಕ್ರ ಎಂದು ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿಗಳು ಹೇಳಿದ್ದಾರೆ.
ಋತು ಚಕ್ರ ಮತ್ತು ಗ್ರಹಗತಿ ಆಧಾರದ ಮೇಲೆ ಪ್ರಾಚೀನರು ಈ ಕಾಲಚಕ್ರವನ್ನು ಅನ್ವೇಷಿಸಿದ್ದಾರೆ. ಈ ಕಾಲಚಕ್ರ ಮನುಷ್ಯನ ಸುಖ-ದುಃಖ, ಪ್ರವಾಹ, ಪ್ರಕೃತಿ ವಿಕೋಪ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಭವಿಷ್ಯವನ್ನು ಹೇಳುತ್ತದೆ. ಈ ಸಂವತ್ಸರ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು, ರಾಶಿಯ ಸಂಕೇತದಂತೆ ಅಧಿಕಾರದ ವ್ಯತ್ಯಾಸಗಳಾಗುತ್ತವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.